ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೧ ಶರತ್ ಹೆಚ್ ಕೆ May 5, 2024February 24, 2024 ಸಾವಿರ ಮುನಿಸುಗಳು ಸುಳಿದರೂ ಸರಿಯದಿರಲಿ ಒಲವು ಕರಗದಿರಲಿ ನಲಿವು ***** Read More
ಹನಿಗವನ ಉಮರನ ಒಸಗೆ – ೧೫ ಡಿ ವಿ ಗುಂಡಪ್ಪ April 30, 2024March 31, 2024 ಹಾ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ ಮುಂದಿನಳುಕುಗಳ ತೊಲಗಿಸುವ ಬಟ್ಟಲನು ತುಂಬಿ ನೀಡೆನಗೀಗ; "ನಾಳೆ"ಯೆಂಬೆಯೊ?-ನಾಳೆ ಸೇರುವೆನು ನೂರ್ಕೊಟಿ ನಿನ್ನೆಗಳ ಜೊತೆಗೆ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೦ ಶರತ್ ಹೆಚ್ ಕೆ April 28, 2024February 24, 2024 ದಿಕ್ಕು ತಪ್ಪುವುದೇ ಬದುಕೆಂದು ನಂಬಿದವನಿಗೆ ನಿನ್ನ ಪ್ರೀತಿಯೇ ದಿಕ್ಕು ***** Read More
ಹನಿಗವನ ಉಮರನ ಒಸಗೆ – ೧೪ ಡಿ ವಿ ಗುಂಡಪ್ಪ April 23, 2024March 31, 2024 ಪುಣ್ಯಗಳನಾರ್ಜಿಸಿದೆವೆಂಬ ಘನ ಚರಿತರುಂ ಪತಿತರೆನ್ನಂತೆನಿಪ್ಪಲ್ಪ ಜಂತುಗಳುಂ ಮಣ್ಣ ಹರದೊಂದೆ ತೆರದಲಿ ಬಳಿಕ ಜನರಾರು ಮಾ ಗೋರಿಗಳ ತೆರೆಯರವರ ದರ್ಶನಕೆ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೯ ಶರತ್ ಹೆಚ್ ಕೆ April 21, 2024February 24, 2024 ರಾತ್ರಿ ಸುರಿದ ಮಂಜಿನ ಮಳೆಯಲ್ಲಿ ನಡುಗುತ್ತ ನಾನೊಬ್ಬನೇ ನೆನೆದೆ ಅವಳು ಬೆಚ್ಚಗೆ ಮಲಗಿದ್ದಳು... ಹಸಿ ಕನಸುಗಳ ಮಡಿಲಲ್ಲಿ ***** Read More
ಹನಿಗವನ ಉಮರನ ಒಸಗೆ – ೧೩ ಡಿ ವಿ ಗುಂಡಪ್ಪ April 16, 2024March 31, 2024 ಮರೆಯದಿರು ; ನಮ್ಮ ಪೂರ್ವಿಕರು, ಸಂಮಾನಿತರು, ಕಾಲ ವಿಧಿಗಳವರ್ಗೆ ಪೇಯಗಳ ನೀಯೆ, ಸಂದನಿತನಾದರದಿ ಕುಡಿ ಕುಡಿದು ಬೇಡೆನದೆ, ಅದು ಮುಗಿಯೆ, ಮೈದಣಿಯೆ, ಮಲಗಿ ಬಾಯ್ಬಿಗಿದರ್. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೮ ಶರತ್ ಹೆಚ್ ಕೆ April 14, 2024February 24, 2024 ಒಬ್ಬನೆ ನಿಂತ ದಾರಿ ಬದಿಯಲ್ಲಿ ಕೈ ಬೀಸಿ ಕರೆಯುತ್ತಿರುವ ಅವಳು... ಹೆಪ್ಪುಗಟ್ಟಿದ ನೋವು ಈಗೀಗ ಕರಗುವಂತೆ ನಟಿಸುತ್ತಿದೆ ***** Read More
ಹನಿಗವನ ಉಮರನ ಒಸಗೆ – ೧೨ ಡಿ ವಿ ಗುಂಡಪ್ಪ April 9, 2024March 31, 2024 ಜಾಂಷೆದನು ಹಿಗ್ಗಿ ಮೆರೆಯುತ್ತಿದ್ದ ಮಂಟಪದಿ ಹಲ್ಲಿ ಹೆಗ್ಗಣಗಳಿಂದೆಸೆವುವೋಲಗದಿ! ಮಲಗಿ ಬೈರಾಮ ವೀರನು ನಿದ್ರಿಸಿರ್ಪಲ್ಲಿ ಕಾಡುಕತ್ತೆಗಳವನ ತಲೆಯ ತುಳಿಯುವುವು! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೭ ಶರತ್ ಹೆಚ್ ಕೆ April 7, 2024February 24, 2024 ೨೧ ತುಂಬಿದರೂ ಯಾವ ಹುಡುಗಿಯ ಕಣ್ಣಿಗೂ ವಿಶೇಷವಾಗಿ ಕಾಣದ ನನ್ನ ಕುರಿತು ನನ್ನದೇ ಕಣ್ಣಿಗೆ ಅನುಕಂಪವಿದೆ ***** Read More
ಹನಿಗವನ ಉಮರನ ಒಸಗೆ – ೧೧ ಡಿ ವಿ ಗುಂಡಪ್ಪ April 2, 2024March 31, 2024 ಈ ಪುರಾತನ ಜೀರ್ಣ ಧರ್ಮಶಾಲೆಯೊಳಮಮ ! ಇರುಳು ಪಗಲುಗಳೆಂಬ ಬಾಗಿಲೆರಡರಲಿ ಸುಲ್ತಾನರೇಸುಜನರಟ್ಟಹಾಸದಿ ಪೊಕ್ಕು ಒಂದೆರಡು ತಾಸಿದ್ದು ನಿಲದೆ ತೆರಳಿದರು! ***** Read More