ಹನಿಗವನ ಗೃಹಿಣಿ ಪಟ್ಟಾಭಿ ಎ ಕೆ February 8, 2018January 4, 2018 ‘ಗೃಹಿಣಿ ಗೃಹ ಮುಚ್ಯತೆ’ ಸಂಸ್ಕೃತದಲ್ಲೊಂದು ಉದ್ಘೋಷ; ಗೃಹಿಣಿ ಇಲ್ಲದೆ ಗೃಹ ಮುಚ್ಚುತ್ತದೆ ಎಂಬುದು ಅನುಭವದ ಉದ್ಗಾರ! ***** Read More
ಹನಿಗವನ ವೃತ್ತ ಪರಿಮಳ ರಾವ್ ಜಿ ಆರ್ February 7, 2018January 2, 2018 ಹುಟ್ಟು ಇದೊಂದು ಅರ್ಧವೃತ್ತ ಸಾವು ಮತ್ತೊಂದು ಅರ್ಧವೃತ್ತ ಹುಟ್ಟು ಸಾವು ಬಿಡಿಸಿದೆ ಒಂದು ಪೂರ್ಣ ವೃತ್ತ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೯ ಧರ್ಮದಾಸ ಬಾರ್ಕಿ February 5, 2018December 17, 2017 ಎಲ್ಲಿ ಕಳಕೊಂಡಿರುವೆಯೋ ಅಲ್ಲಿ ಹುಡುಕು; ಬೆಳಕು ಕಂಡಲ್ಲಿ ಅಲ್ಲ! ***** Read More
ಹನಿಗವನ ಗಂಡಾಂತರ ಪಟ್ಟಾಭಿ ಎ ಕೆ February 1, 2018January 4, 2018 ಗಂಡ ಹೆಂಡಿರಲ್ಲಿ ಹೆಚ್ಚಿದ ಅಂತರ ತರುತ್ತದೆ ಗಂಡಾಂತರ! ***** Read More
ಹನಿಗವನ ಪ್ರಯಾಣ ಪರಿಮಳ ರಾವ್ ಜಿ ಆರ್ January 31, 2018January 2, 2018 ಕೆಲವರಿಗೆ ರೈಲು ಕೆಲವರಿಗೆ ಜೈಲು ಕೆಲವರಿಗೆ ಬೈಲು ಎಲ್ಲರಿಗೂ ಪ್ರಯಾಣ ಮೈಲು, ಮೈಲು ಇದು ಜೀವನದ ಸ್ಟೈಲು ಜೋಪಾನವಾಗಿಡಿ ಪ್ರಯಾಣದ ಫೈಲು ಟಿಕೆಟ್ ಇರಲಿ ಕೈಲು ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೮ ಧರ್ಮದಾಸ ಬಾರ್ಕಿ January 29, 2018December 17, 2017 ನಾಟಕ ನಿರಂತರ. ನಾಟಕಶಾಲೆ ಬಿಟ್ಟುಕೊಟ್ಟು ಹೊರಡಬೇಕಾದವರು- ನಾವು ***** Read More
ಹನಿಗವನ ಪ್ರೇಮೋನ್ಮಾದ ಲತಾ ಗುತ್ತಿ January 28, 2018February 13, 2019 ಚಟಪಟಿಸುವ ಎಲಬುಗಳನು ಕಿತ್ತು ಕುದಿಯುವ ರಕ್ತದಲಿ ಎದ್ದಿ ಸುಡುವ ಚರ್ಮದ ಮೇಲೆ ಬರೆದು ನಿನ್ನೆದೆಯ ಪೋಸ್ಟಬಾಕ್ಸಿಗೆ ಹಾಕಿದ್ದೇನೆ - ಬೇಕಾದರೆ ಓದು ಬೇಡವಾದರೆ ಅಲ್ಲಿಂದಲೇ ಅದಕೆ ಬೆಂಕಿ ಹಚ್ಚಿಬಿಡು. ***** Read More
ಹನಿಗವನ ಹೆಂಡತಿ ಪಟ್ಟಾಭಿ ಎ ಕೆ January 25, 2018January 4, 2018 ಹೆಂಡತಿ ಮನೆಗೆ ಯಜಮಾನತಿ; ಏಕೆಂದರೆ ಅವಳು ‘ಯಜಮಾನ’ ನಿಗಿಂತಲೂ ಅತಿ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೭ ಧರ್ಮದಾಸ ಬಾರ್ಕಿ January 22, 2018December 17, 2017 ‘ಮುನಿ’ಯಾಗುವುದೆಂದರೆ, ಕಾವಿ ತೊಟ್ಟು ಬೀದಿಗಿಳಿಯುವುದಲ್ಲ; ಬಟ್ಟೆ ಕಳಚಿಟ್ಟು ಮನೆಯೊಳಗೆ ಮೌನಿಯಾಗುವುದು ಮಠದೊಳಗೆ ಮಾಯವಾಗುವುದು! ***** Read More
ಹನಿಗವನ ಜೇನು – ಸಕ್ಕರೆ ಲತಾ ಗುತ್ತಿ January 21, 2018February 13, 2019 ಜೇನು ಸಕ್ಕರೆ ಅವುಗಳಿಗೇನು ಗೊತ್ತು ಒಬ್ಬರೊಬ್ಬರ ಸಿಹಿ - ಈ ಪ್ರೀತಿಯೇ ಹಾಗೆ. ***** Read More