Home / ಕವನ / ಕವಿತೆ

ಕವಿತೆ

ಮೇರಾ ಭಾರತ್ ಮಹಾನ್ ಹೈ ಹೇಳಿ ನಮ್ಮಿದಿರು ಯಾರಿಹರು ಸ ಗುಡಿ ಕಟ್ಟಿದವರನ್ನು ಗುಡಿಯಾಚೆಗಿರಿಸಿದ ಕೆರೆ ಕಟ್ಟಿದವರನ್ನು ಕೆರೆ ಮುಟ್ಟಗೊಡದ ಪಾವಿತ್ರ ದ ಚರಿತೆ ಇದು ಅಲ್ಲವೆ ಹೇಳಿ! ಇಂತಹ ಚರಿತೆ ಬೇರೆಲ್ಲಿದೆ ಕೇಳಿ? ತುಳಿದವನ ಜಾತಿಗೆ ಹೆಸರು ಮೇಲ್ಜಾ...

ಅಹಾ! ನೀರೆ! ದೇವದಾನವರು ಮೇರುಪರ್ವತವನಿಟ್ಟು ಮ೦ಥಿಸಿದಾಗ, ಆದಿಶೇಷನ ಹಚ್ಚಿ ಕಡೆದಾಗ, ವಿಷಜ್ವಾಲೆಯ ನುಂಗಿ ಅಣಿಗೊಂಡಾಗ,- ಕಲ್ಪತರುವನಿತ್ತೆ! ಕಾಮಧೇನುವನಿತ್ತೆ! ಚಂದ್ರನನ್ನು ಕರುಣಿಸಿದೆ! ಲಕ್ಷ್ಮಿಯನ್ನು ಧಾರೆಯೆರೆದೆ! ಅಮೃತವನ್ನು ಬೀರಿದೆ! ಎಣೆ...

ಗೆಳತಿ ಬಾರೆ ಎಂಥ ಚಲುವಾ ಇಂಥ ಕೆಲಸಾ ಮಾಡಿದಾ ತೂಗು ಮ೦ಚಾ ಹೂವು ಕಟ್ಟಿ ನನ್ನ ತೂಗಿ ಓಡಿದಾ ।। ೧ ।। ಬಳಿಗೆ ಬಂದಾ ಬಂದನೆಂದಾ ಮಟಾಮಾಯವಾದನೆ ನನ್ನ ಕೊಂದು ಕೂಗಿ ನಕ್ಕು ಕಡೆಗೆ ಕಾಣದಾದನೆ ।। ೨ ।। ಸುಟ್ಟ ಮೇಲೆ ಕಟ್ಟ ಕಡೆಗೆ ಕೊಚ್ಚು ಕೊಸರು ಹೋಯಿತ...

ಬೇಗ ಬಾ, ಇರುಳ ದೇವಿ ಬಾ, ಬಾ, ತಡೆಯದಿರು ಸಿಂಗರಕೆ, ಬೇಗ ಬಾ, ಬಾ, ಬಾ! ತಾರೆಗಳ ಲಾಸ್ಯವೇಕೆ ಚಂದ್ರಿಕೆಯ ಹಾಸ್ಯವೇಕೆ ಮುಡಿಗೆ ಸಾಕು ಏಳು ಚಿಕ್ಕೆ ಕಿವಿಗೆ ಎರಡು ಓಲೆ! ಮೊಗ್ಗೆಗಿನಿಸು ನಗೆಯನಾಯ್ದು ದಣಿದ ಮನಕೆ ತಣಿವತಂದು ಬೆಂದ ಬಾಳು ಅರಳುವಂತೆ ಬ...

ನನ್ನ ಪಂಕದಲ್ಲಿ ಹುಟ್ಟಿ ಲೇಪವಿಲ್ಲದಿರುವೆ, ನನ್ನ ಪಂಕಜವೆ ! ನನ್ನ ನೀರಲ್ಲಿ ಬೆಳೆದು ನೀರಾಳದಲ್ಲಿರುವೆ, ನನ್ನ ನೀರಜವೆ ! ಒಡೆಯಲು ಬಾರದ ಒಡಪಿನಂತಿರುವೆ, ಬಿಡಿಸಿಲು ಬಾರದ ತೊಡಕಿನಂತಿರುವೆ, ನನ್ನ ಮಾನಸದ ಮದಗವೆ ಮುಳುಗಿ ನೋಡಿದೆ. ಮುದ್ದಿಸಿ ನೋಡ...

ಕಾದ ಭುವಿಯ ಒಡಲಿಗೆ ಮುಂಗಾರಿನ ಪನ್ನೀರ ರಂಗವಲ್ಲಿ ಗುಡುಗು-ಸಿಡಿಲಿನ ಘನರವ ಬಾನಂಗಳದಲ್ಲಿ ಬೀಸುವ ಗಾಳಿ ಎಬ್ಬಿಸಿದ ತಲ್ಲಣ ಹದಿಹರೆಯದ ಎದೆಯೊಳಗೆ ಗರಿಗೆದರಿದ ನೂರು ಆಸೆಗಳು ಮಿತಿಮೀರಿದ ಪುಳಕ ಬಾಡಿದ ತರು ಚಿಗುರೊಡೆದಿದೆ ಚಾಚುತ್ತಿದೆ ತನ್ನ ಮೈಕೈಯ ...

ಗಾಳಿಯಲಿ ಬರೆಯುವೆನು ನೀರಲ್ಲಿ ಬರೆಯುವೆನು ಚಿರಂತನ ಸತ್ಯಗಳ ಬರೆಯುತ್ತಲೇ ಅವು ಅಳಿಸಿದರೆ ತಾನೆ ಶಾಶ್ವತೆಗೆ ಸಾಕ್ಷಿ ಕಲ್ಲಲ್ಲಿ ಬರೆದವು ಕೋಟೆ ಗೋಡೆಗಳಾದುವು ಮರದಲ್ಲಿ ಬರೆದುವು ಬಾಜರ ಕಂಭಗಳಾದುವು -ಅಂದನು ದೀರ್ಘತಮಸ್ ಮರ್ತ್ಯದಲ್ಲಿರಿಸುವುದು ಮನ...

ಜಗದೆಲ್ಲ ಜೀವಿಗಳ ಕರ್ಮರಸ ಪಾದಪಂ ಜೀವವಿದು ಮರ್ಮರಿಸುವುಲಿಯೆಲೆಯೊಳು ಆ ಬೆಳಕಿನುಸಿರಾಡಿ ಮೂಲಸತ್ವದ ಹೊಗಳ ತಳೆದು ಕಂಪಿಸುತಿಹುದು ಸಡಗರದೊಳು. ಹರಣವೆ ಹಸಾದವೆನೆ ವಿಶ್ವ ಶಿವಪದವೆನ್ನೆ ನಲವೆಲ್ಲೆ ಗೆಡೆಸಿಹುದು ನಡುಗಡ್ಡೆಯ; ಎಲ್ಲ ತಿಳಿವನು ಕಳೆದು ನ...

ಏರುತಿವೆ ಏರುತ್ತಿವೆ ಬೆಲೆಗಳು ಗಗನಕೆ ಏರುತ್ತಿವೆ ಅಕ್ಕಿ, ಬೇಳೆ, ಎಣ್ಣೆ ಆಕಾಶದ ನಕ್ಷತ್ರಗಳು ||ಏರುತ್ತಿವೆ|| ಏಳುತಿವೆ ಏರುತ್ತಿವೆ ಬಂಗಲೆಗಳು ಗಗನಕೆ ಏರುತ್ತಿವೆ ಗುಡಿಸಲು ನೆಲಕಚ್ಚಿ ಬಡವರು ಬೀದಿಗೆ ಬಂದಿಹರು ||ಏರುತ್ತಿವೆ|| ಕಪ್ಪು ಕಣದ ಶ್ರ...

ಮಂತ್ರವ ಗೊಣಗುತ ಭಟ್ಟರು ಮೂಗಿಗೆ ನಾಸೀಪುಡಿಯನು ಏರಿಸಲು ಸೀನುಗಳಿಂದ ಎದುರಿನ ನಂದಾ- ದೀಪವನೊಮ್ಮೆಲೆ ಆರಿಸಲು ಮೊದಲೇ ಬಿರು ಬಿರುಕಾಗಿದ್ದಾ ಹಳೆ ಮುದಿ ಮಾರುತಿ ಮೂರುತಿಯಾ ಮೈ ಶಿಲೆ ಆಯಿತು ಎರಡೂವರೆ ಹೋಳು ಅದರೊಳಗಿಂದ ಹಿರಿ ಕರಿ ತಂಡ ತಂಡದಿ ಬಂದವು...

1...6263646566...635

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...