Home / ಕವನ / ಕವಿತೆ

ಕವಿತೆ

ದೀಪ ಹಚ್ಚುವ ಈ ಕತ್ತಲಲ್ಲಿ ಮೂಲೆ ಮನೆಯಿಂದ ಪಾರಿಜಾತ ಗಂಧ ಬಗಲು ಮನೆಯಿಂದ ಸಂಪಿಗೆ ಸುಗಂಧ ಗಾಳಿಗೆ ಹರಿದು ಎದೆ ಆಳಕೆ ಇಳಿದ ಪಂಚಮಿ ಜೋಕಾಲಿ ಕವಿತೆಗಳ ಬೆಚ್ಚಗೆ ಹೊಂಗಿರಣಗಳ ಸಾಲು ಹಿಡಿದು ಹೂಮಾಲೆಯಗುಂಟ ಸಾಗಿ ಕೆತ್ತಿದ ಕನಸುಗಳ ಮೂರ್ತಿಯಿಂದ ಅವನ ಬ...

ರಜದಲ್ಲೇನು ಮಾಡುವಿರಿ ಎಂದು ಕೇಳಿದರು ಟೀಚರು ಊರಿಗೆ ಹೋಗುತ್ತೇವೆ ಎಂದರು ಒಬ್ಬಿಬ್ಬರು ಊಟ, ಆಟ ಎಂದು ಪಿಸುಗುಟ್ಟಿ ನಕ್ಕರು ತುಂಟರು ಒಬ್ಬರಿದ್ದಂತಿದ್ದರಲ್ಲವೆ ಇನ್ನೊಬ್ಬರು? ತಲೆಗೊಂದರಂತೆ ಮಾತು ಗದ್ದಲಿಸಿದರು ಅದೇನು ಮಾಡುತ್ತಿರೊ ಮಾಡಿ ಅಂದರು ...

ನನಗೆ ನೀನು ಇಂದಿಗೂ ಒಗಟು ಬಿಡಿಸಲಾಗದ ಕಗ್ಗಂಟು ಯಾಕೆ ನಲ್ಲ? ನನ್ನಲ್ಲಿ ಬಯಲಾಗದ ಹಠ ಒಳಗೆ ತುಡಿತ ಮಿಡಿತ ತೋರಿಕೆಗೆ ಯಾಕೆ ಹಿಂದೆಗೆತ? ಮನಬೆರೆತರೂ ಬೆರೆಯದಂತೆ ಒಲಿದರೂ ಒಲಿಯದಂತೆ ನೀನೆಕೆ ಪದ್ಮಪತ್ರದಂತೆ? ಹಸಿವು ನನಗೂ ನಿನಗೂ ಇಬ್ಬರಿಗೂ ಉಸಿರು ...

ಮಂಡೂಕಗಳಿಗವಸ್ಥೆ ಮೂರು: ನಿದ್ದೆ, ಎಚ್ಚರ, ಮಧ್ಯಂತರ. ಮನುಷ್ಯರಿಗೆ ಕೂಡ ಅಷ್ಟೆ. ನಿದ್ದೆಯಲಿ ಕನಸು ಕೀಟಗಳದ್ದೆ ಎಚ್ಚರದಲವುಗಳ ಹಿಡಿಯಲು ಹುಡುಕಾಟ ಸಿಕ್ಕಿದರೆ ಊಟ, ಇಲ್ಲದಿದ್ದರೆ ಉಪವಾಸ ಮಧ್ಯಂತರಾವಸ್ಥೆಯಲಿ ಹೀಗೆಯೇ ಬೇಟ ಹೊಸತೇನಲ್ಲ; ತಲಾಂತರದಿಂ...

ನಾವು ಮಕ್ಕಳು ಶಿವನ ಶಿಶುಗಳು ನಾವು ಕಮಲದ ಹೂಗಳು ನಾವು ಆತ್ಮರು ಬಿಂದು ರೂಪರು ನಾವು ನಂದಾದೀಪರು ದೊಡ್ಡ ತೇರು ಎಳೆದ ಮೇಲೆ ಗಿಡ್ಡ ತೇರು ಏತಕೆ ಆತ್ಮ ದೇವರ ಕಂಡ ಮೇಲೆ ಗಿಂಡಿ ದೇವರು ಏತಕೆ ಧೂಮಪಾನಾ ಮದ್ಯಪಾನಾ ಅಣ್ಣಾ ನಿನಗೆ ಬೇಡವೊ ನೀನು ತಂದಿಯ ಮ...

ಏನಿದೀ ಜಿಗಿದಾಟ ಕಿವಿಹರಿವ ಕೂಗಾಟ ಇದುವರೆಗು ಕೇಳರಿಯದೀ ಆರ್ಭಟ? ಕಳೆದ ಸಂತಮಹಾಂತರಾರು ಕಾಣದ ನೆಲೆಯ ಕಂಡನೆಂಬಂತೆ ಇವನಾಡುವಾಟ! ಅವರಿವರ ನಾಲಗೆಯ ಕಿತ್ತು ತಲೆಯೊಳು ನೆಟ್ಟು ಬೆಳೆಸಿಹನು ಇವನೊಂದು ಭಾರಿ ಮಂಡೆ. ರಮಣ ಅರವಿಂದ ನುಡಿಯುವರು ಬುರುಡೆಯೊಳ...

ಹಾಡೆಂದರೆ ಹಾಡಲೇನು ಬಾನು ಚುಕ್ಕಿಯ ಕರೆಯಲೇನು || ಮೌನ ರಾಗವ ಮೀಟಿ ಭಾವನುರಾಗ ಸೆರೆಯಲಿ || ಸುತ್ತ ಚಂದ್ರ ತಾರೆ ಮಿಂಚಿ ನನ್ನ ಮನದ ಭಾವ ಹೊಂಚಿ ನಸು ನಾಚಿ ಕಾಮನೆ ಚೆಲ್ಲಿ ಸೆರಗ ಹೊದ್ದಿದೆ ಶಿಲೆಯು ||ಮೌ|| ಕಡಲ ತೀರ ಅಲೆಯ ಮೇಲೆ ನನ್ನ ಧಾರೆ ಹರಿಗ...

ಬೀಜ ಬಿತ್ತಿದ ಅಮ್ಮನ ಹಿತ್ತಲಲಿ ಹಕ್ಕಿ ಪಕ್ಷಿಗಳ ಇನಿದನಿ ಚಿಮ್ಮಿ ಅರಳಿ ಘಮ್ಮೆಂದು ಸೂಸಿ ನೆಲತುಂಬ ಹರಡಿ ಹಾಸಿದ ಪಾರಿಜಾತ ಹೂರಾಶಿ. ಅಲ್ಲೇ ಬಟ್ಟೆ ಒಗೆಯುವ ಕಲ್ಲಮೇಲೆ ಮೂಡಿವೆ ಅವಳ ಕೈ ಬೆರಳ ಬಳೆಗಳ ಚಿಕ್ಕೀ ನಾದ ರೇಖೆಗಳು ಚಿತ್ತ ಪಟ ಪಾತರಗಿತ್ತಿ...

ಹೂವಿನ ಗೋಣು ಮುರಿದು ಹೂದಾನಿಯಲ್ಲಿ ಇರಿಸುತ್ತೇನೆ. ಗೆದ್ದಲು ಹುಳುಗಳು ಗೋಡೆಯ ಮೇಲೆ ಶಿಲ್ಪ ಕಡೆದಿದ್ದರೆ ಭಗ್ನಗೊಳಿಸುತ್ತೇನೆ. ಸಕ್ಕರೆಯ ಬೆಟ್ಟು ಹೊತ್ತು ಹರಿವ ಸಾಲು ಇರುವೆಗಳನ್ನು ಒತ್ತರಿಸಿ ಗುಡಿಸಿಹಾಕುತ್ತೇನೆ. ಸೂರಿನಡಿ ಗುಬ್ಬಿಗಳು ಕಾಳು ಕ...

ಅಲ್ಲಿ ನೆತ್ತರಿನ ಸ್ನಾನ ಮಾಂಸದಂಗಡಿಯೇ ಪುಣ್ಯಸ್ಥಾನ ಕೈಯಲ್ಲಿ ಕೋವಿ ಕರದ ಆಭರಣ ವ್ಯತಿರಿಕ್ತ ವ್ಯಾಖ್ಯಾನ ಧರ್ಮಕ್ಕೆ ನೀಡುವರು ಕುಲಬಂಧು ಬಾಂಧವರ ಕೊಚ್ಚಿ ಕೆಡವಿಹರು ಅವರು ಬೀಜಾಸುರರೇ ಇಲ್ಲ ರಕ್ತ ಪಿಪಾಸುಗಳೇ ತಿಗಣಿ, ಸೊಳ್ಳೆ ಉಂಬಳಿಗಿಂತ ನೇಚ್ಯ ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...