Home / ಕವನ / ಕವಿತೆ

ಕವಿತೆ

ಕಣ್ಣಕನ್ನಡಿಯಲ್ಲಿ ಕಂಡ ಆ ಅವನು ಸೊಂಟ ಬಳಸಿ ಬಿಸಿಯುಸಿರ ಬಿಟ್ಟದ್ದು; ಮಧುಮತ್ತ ಮುಖಮಡಕೆಯನ್ನು ಕೈಯ ಇಕ್ಕಳದಲ್ಲಿ ಹಿಡಿದದ್ದು; ವಿದ್ಯುದುನ್ಮಾದ ನಾದಕ್ಕುಬ್ಬಿ ಎದೆ ಬಿರಿದದ್ದು; ಬಂದ ನೋವು ನಲಿವುಗಳನ್ನುಂಡದ್ದು; -ಈ ಎಲ್ಲ ಮೆಲಕುಗಳಲ್ಲಿ ಮೈತುಂಬ...

ಈ ಮಣ್ಣಲಿ ಹುಟ್ಟಿದ ಮ್ಯಾಲೆ ಕುಣಿಯೋದೊಂದೇ ಕೆಲಸ || ಪ || ಮನಸು ನಿನ್ನ ಕೈಯಲಿರಲಿ ಬುದ್ದಿ ಅದರ ಮೇಲೆ ಎಲ್ಲರ ಕುಣಿಸುವನೊಬ್ಬ ಇರುವನೊ ಎಲ್ಲರ ಮೇಲೆ || ೧ || ತಾಳಕ್ಕೆ ಕಾಲು ಹಾಕೊ ಕಾಲಕ್ಕೆ ಹೊಂದಿರಬೇಕು ಒಂದ್ಹೆಜ್ಜೆ ತಪ್ಪಲು ನೀನು ದಂಡಾ ಕೊಡಲು...

ಆಡಮ್ ಅಗೆದಾಗ ಈವ್ ನೇಯ್ದಾಗ ಇದ್ದರೆ ಇವರು ? ಮೊಹೆಂಜೊದಾರೋದ ಶವಗಳಿಗೆಲ್ಲಾ ಜೀವ ಏಕ್ ದಮ್ ಬಂದ ಹಾಗೆ ಕುರುಕ್ಷೇತ್ರದಲ್ಲಿ ಹೂತವರೆಲ್ಲಾ ರಜಾದ ಮೇಲೆ ತಿರುಗುವ ಹಾಗೆ ಎಂದೋ ಹುಟ್ಟಬೇಕಿದ್ದವರು ಫಕ್ಕನೆ ನೆನಪಾಗಿ ಲೇಟಾಗಿ ಅವತರಿಸಿದ ಹಾಗೆ ಪರ್ಗೆಟೋರ...

ಕ್ಯಾತೆ ತೆಗೆದಿತ್ತು ಜೀವನ ಸಾವ ಜೊತೆಗೆ ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು ತುಸು ಗಂಭೀರವಾಗಿಯೇ ! ಜೀವನ, ನಾನು ಮೊದಲು ! ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ ಭಿನ್ನ! ಭಿನ್ನ! ರಂಗು! ರಂಗು! ಬೆಳಕು; ಸಂತಸ. ಕರುಣಿಸುವೆನು ಅಂಗಳದಿ ಸ...

ಅಯ್ಯೋ…. ಮುಟ್ಟುವ ತನಕ ಗೊತ್ತೇ ಆಗಲಿಲ್ಲ. ನನ್ನಂತೆಯೇ ಅವನೂ ಮನುಷ್ಯನೆಂದು! ಅಪ್ಪಿಕೊಂಡ ಮೇಲೆ ಅರಿವಾಯಿತು ನಾನೂ ಅವನೂ ಒಂದೇ ಎಂದು! ಕೇಡಿಗೆ ವಶವಾಗಿ ಹಲ್ಲುಗಳ ಮಸೆದಿದ್ದೆವು ಹುಡಿಯಾಗುವ ತನಕ ಕಲ್ಲುಗಳನೆತ್ತೆತ್ತಿ ಒಗೆದಿದ್ದೆವು ಪುಡಿಯಾ...

ನಿರಾಳ ಮನುಜ ನಿರಾಳ ಬದುಕಲಿ ನಡೆಯುವ ಆಗು ಹೋಗುಗಳಿಗೆ ಹಣೆ ಬರಹವೆಂಬ ಹಣೆ ಪಟ್ಟಿಯ ಕಟ್ಟಿ ನೀನಾಗುವೆ ನಿರಾಳ ಜನನಕು, ಮರಣಕು ನಡುವೆ ಈ ಜೀವನಕು ಸಫಲತೆಗು, ವಿಫಲತೆಗು ನಿನ್ನಯ ಸಾಧನೆಗೂ ಬರೆಯುತ ಹಣೆ ಬರಹದ ಮುನ್ನುಡಿಯ ನೀನಾಗುವೆ ನಿರಾಳ ಯತ್ನವ ಮಾಡ...

ಪ್ರತಿ ಮುಂಜಾನೆ… ಪತ್ರಿಕೆಗಳಲ್ಲಿ ಸುದ್ದಿ… ಜಾಹೀರಾತು, ಪ್ರತಿ ದಿನ… ಆಕಾಶವಾಣಿಯಲ್ಲಿ ಪ್ರತಿ ಸಂಜೆ… ದೂರದರ್ಶನದಲ್ಲಿ ತಪ್ಪದೆ ಬಿತ್ತರಿಸುವ ಕಾರ್ಯಕ್ರಮ – ಕಾಣೆಯಾದವರು! ಬರಿಯ ನಮ್ಮೂರಿನಲ್ಲಿಯೇ ದಿನಕ್ಕೆ ನಾ...

ಬಿಡಬೇಡ ಬಾಲಿ ಬಿಡಬೇಡ ಹಿಡಿಬೇಡ ಸಾಲಿ ಹಿಡಿಬೇಡ ||ಪಲ್ಲ|| ಮಾಸ್ತರಾ ಮಸ್ತಿಲ್ಲಾ ಸಾಲೀಯು ಸಿಸ್ತಿಲ್ಲಾ ನನಕೂಟ ಸುಸ್ತಿಲ್ಲ ಬಾಬಾರ ಪುಸ್ತಾಕ ಪ್ಯಾಟ್ಯಾಗ ಮಾರಾಕ ಬಂದಿಲ್ಲ ಕೊಳ್ಳಾಕ ರೊಕ್ಕಿಲ್ಲ ನೀ ಬಾರ ||೧|| ಕಲಸೋರು ಕೌಹಕ್ಕಿ ಕಲಿಯೋರು ಕೂಹಕ್ಕಿ...

ಹೊಕ್ಕುಳಲ್ಲಿ ಹೂಗುಟ್ಟಿ ಬಾಯಿಗೆ ಬರದವನೆ, ಮಕ್ಕಳ ಕಣ್ಣುಗಳಲ್ಲಿ ಬಾಗಿಲು ತೆರೆದವನೆ. ಬುದ್ಧಿ ಸೋತು ಬಿಕ್ಕುವಾಗ, ಹಮ್ಮು ಹಠಾತ್ತನೆ ಕರಗಿ ಬದುಕು ಕಾದು ಉಕ್ಕುವಾಗ ಜಲನಭಗಳ ತೆಕ್ಕೆಯಲ್ಲಿ ದೂರ ಹೊಳೆವ ಚಿಕ್ಕೆಯಲ್ಲಿ ನಕ್ಕು ಸುಳಿಯುವೆ. ಆಗ ಕೂಗಿದರ...

ನನ್ನ ಕವಿತೆಗಳ ಕದ್ದು ಓದುವುದು ಅದರ ವಿಷಯವನೆತ್ತಿ ತೂಗುವುದು ನನ್ನವಳ ಚಟ… ‘ಓದಿದೆನು ನಿನ್ನ ಗೀತೆಗಳ ನಲ್ಲ’ ಎಂದು ಮೋಹಕವಾಗಿ ಹಿಂಡುವಳು ನನ್ನ ಗಲ್ಲ ಕನಸಿನಲಿ ಮೆಲ್ಲನೆ ಬಂದು ಮುದ್ದು ಮಾತಿನ ಭಾವರಸದೊಳಗೆ ಮಿಂದು ಬೆರೆಸಿ ನಿನ್ನನು, ಮೈ ...

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...