
ಕೈ ಕೈದ ಹಿಡಿದು ಕಾದುವಾಗ ಕೈದೊ ಕೈಯೊ ಮನವೊ ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ ಅಂಗವೊ ಲಿಂಗವೊ ಆತ್ಮನೊ ಕಾಲಾಂತ ಭೀಮೇಶ್ವರಲಿಂಗವನರಿದುದು [ಕೈದ-ಆಯುಧವನ್ನು] ಡಕ್ಕೆಯ ಬೊಮ್ಮಣ್ಣನ ವಚನ. ಇದು ಕುತೂಹಲಕರವಾದ ಪ್ರಶ್ನೆಯೊಂದನ್ನು ಕೇಳುತ್ತಿದೆ. ಆ...
ಕೆಸರಲ್ಲಿ ಬಿದ್ದ ಬಡಪಶುವಿನಂತೆ ಆನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನೆ ಅಯ್ಯಾ ಆರೈವವರಿಲ್ಲ ಅಕಟಕಟಾ ಪಶುವೆಂದೆನ್ನ ಕೂಡಲ ಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ [ಆನು-ನಾನು, ಆರೈವರಿಲ್ಲ-ಆರೈಕೆಮಾಡುವವರಿಲ್ಲ] ಬಸವಣ್ಣನ ಈ ವಚನ ಅಸಹಾಯಕತೆಯನ್ನು...
ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು. ನೋಡಾ ಅಯ್ಯಾ ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾ ಅಲ್ಲಮನ ವಚನ. ಈ ವಚನ ಅನೇಕ ವರ್ಷಗಳ ಹಿಂದೆಯೇ, ಅದು ಅರ್ಥವಾಗುವುದಕ್ಕೆ ಮೊದಲೇ, ಮನಸ್ಸಿನಲ್ಲ...
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧ...
ಕಾಲಿಲ್ಲದ ಕುದುರೆಯೇರಿ ರಾವುತಿಕೆಯ ಮಾಡಬೇಕು ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಸಾಡಬಲ್ಲಡೆ ಇಹಲೋಕಕ್ಕೆ ವೀರನೆಂಬೆ ಪರಲೋಕಕ್ಕೆ ಧೀರನೆಂಬೆ ಆಮುಗೇಶ್ವರಲಿಂಗಕ್ಕೆ ಅಧಿಕನೆಂಬೆ [ರಾವುತಿಕೆ-ಕುದುರೆಯ ಸವಾರ...
‘ಅಪ್ಪಾ, ನಾನು ಹೋಗತಾ ಇದೇನೆ. ಹೇಳಿ ಹೋಗೋಣ ಅಂತ ಬಂದೆ.’ ‘ಎಲ್ಲಿಗೆ ಹೋಗತಾ ಇದೀಯ?’ ‘ಉತ್ತರ ದೇಶಕ್ಕೆ.’ ‘ಅಲ್ಲಿಗೆ ಯಾಕೆ? ಇಲ್ಲಿ ನಿನಗೆ ಬದುಕಿಲ್ಲವಾ? ಹಂದಿ ಮಾರಾಟ ಮಾಡತಾ ಇದೀಯಲ್ತಾ.’ ‘ಮಾಡತಾ ಇದ್ದೆ, ಈಗಿಲ್ಲ. ಏನೂ ಗಿಟ್ಟಿಲ್ಲ. ಹೋದವಾರ ಮನ...
ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡೂ ಮರೆಯಬೇಕು ಲಿಂಗಪೂಜೆಯಾದಡೂ ಮರೆಯಬೇಕು ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು ಕಾಯಕವೆ ಕೈಲಾಸವಾದ ಕಾರಣ ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು ಆಯ್ದಕ್ಕಿ ಮಾರಯ್ಯನ ವಚನ. ಕಾಯಕವೆ ಕೈಲಾಸ ಅನ್ನುವ ಮ...
ಕಾಗೆಯ ಮರಿ ಕೋಗಿಲೆಯಾಗಬಲ್ಲುದೆ ಆಡಿನ ಮರಿ ಆನೆಯಾಗಬಲ್ಲುದೆ ಸೀಳುನಾಯಿ ಸಿಂಹದ ಮರಿಯಾಗಬಲ್ಲುದೆ ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು ಆಮುಗೇಶ್ವರಾ [ಗಾವಿಲ-ಹಳ್ಳಿಗ, ಅಶಿಕ್ಷಿತ] ಆಮುಗೆ ರಾಯಮ್...
ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆವೆನಯ್ಯಾ ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ ಹಡಿಕೆಗೆ ಮೆಚ್ಚಿದ ಸೊಣಗ ಅಮೃತದ ರುಚಿಯ ಬಲ್ಲುದೆ ಕೂಡಲಸಂಗಮದೇವಾ [ಕಾಂಚನ-ಚಿನ್ನ, ಹಡಿಕೆ-ಎಲುಬು, ಸೊಣಗ-ನಾಯಿ] ಬಸವಣ್ಣನ ವಚನ. ದುಡ್ಡು ಎಂಬ ನಾ...
ಕಲ್ಲಿನಲ್ಲಿ ಕಠಿಣ ಖುಲ್ಲರಲ್ಲಿ ದುರ್ಗುಣ ಬಲ್ಲವರಲ್ಲಿ ಸುಗುಣ ಉಂಟೆಂದೆಲ್ಲರೂ ಬಲ್ಲರು ಇಂತೀ ಇವು ಎಲ್ಲರ ಗುಣ ಅಲ್ಲಿಗಲ್ಲಿಗೆ ಸರಿಯೆಂದು ಗೆಲ್ಲ ಸೋಲಕ್ಕೆ ಹೋರದೆ ನಿಜವೆಲ್ಲಿತ್ತು ಅಲ್ಲಿಯೆ ಸುಖವೆಂದನಂಬಿಗ ಚೌಡಯ್ಯ [ಖುಲ್ಲರಲ್ಲಿ-ದುಷ್ಟರಲ್ಲಿ] ಅ...









