ಕವಿತೆ

ಎಣ್ಣೆಹಚ್ಚಿ ತಿದ್ದಿತೀಡಿ ಬೆಚ್ಚಗಿನ ಹಂಡೆಯಲಿ ಹದಕಾಯಿಸಿ ಕಾಲು ನೀಡಿ ಎರೆದು ಹಾಕಿದ ಕಂದ ಸಾಂಬ್ರಾಣಿಯ ಸೂಸು ಹೋಗೆ ಕಣ್ಣು ರೆಪ್ಪೆಯ ಮುಚ್ಚಿ ತೆಪ್ಪಗೆ ಮಲಗಿರುವ ತೊಟ್ಟಿಲಲಿ ಹಾಲು ಹೀರಿದ ಎದೆಯಲಿ ಚಿಲ್ಲನೆ ಮತ್ತೆ ಚಿಮ್ಮುತ್ತಿವೆ...

ಗಾಳಿಪಟ

ನಿನ್ನ ಬಾನಂಗಳದಲಿ ನನ್ನ ಗಾಳಿಪಟ ತೇಲಲಿ ನೀಲಿ ಅಂಬರದಲಿ ಕನಸುಗಳು ಚಿಕ್ಕಿಗಳು ಮಿನುಗಲಿ, ನಿನ್ನೆತ್ತರ ಆಕಾಶದಲಿ ನನ್ನಾತ್ಮದ ಕನವರಿಕೆ ಹಕ್ಕಿ ರೆಕ್ಕೆ ಬಿಚ್ಚಿ ಬೀಸಿ ಹಾರಾಡಲಿ ಇಳೆಯ ಅಚ್ಚರಿಯ ಘನತೆಯಲಿ. ನೀ ಎಂಬ ಮಳೆ...

ತಲ್ಲಣ

ಎಲ್ಲಾ ಹಕ್ಕಿಗಳು ಹಾರಿ ಹೋದವು ಬರಡು ಮರದಲಿ ಹಸಿರು ಕಾಣದೆ ಎಲ್ಲಾ ಚಿಕ್ಕಿಗಳು ಮಾಯವಾದವು ಪ್ರೀತಿ ಕಳೆದ ನೀಲಿ ಆಗಸದಲಿ. ಅಂಬರದ ಮುನಿಸಿಗೆ ತೆರೆಯಲಿಲ್ಲ ಅರಿವಿನ ರೆಕ್ಕೆಗಳು ಪಟಪಟ ಅಕ್ಷಗುಂಟ ಇಳಿದ ಹನಿಗಳು ಮೋಡವಾಗಲಿಲ್ಲ...

ಕಳಚಿಕೊಂಡವರು

ನಿನ್ನ ಧ್ವನಿ ಕೇಳಿದಾಗ ಆಲಿಸಿದಾಗ ಕೈಯಲ್ಲಿ ಜಾರಿಹೋದವು ಸ್ಪರ್ಶಕೆ ಸಿಗದ ಶಬ್ದಗಳು ಒಮ್ಮೆಲೇ ಬಂದು ಎರಗಿದ ನೆನಪುಗಳು ಯಾವುದೋ ಪರಿಮಳ ಎದೆಯಲ್ಲಿ ಮುಳ್ಳಿನ ಕೇದಿಗೆಬನ ಕನಸಿನ ದಾರಿ ಗುಂಟ ದಡ ವಿಲ್ಲದ ನೆರಳು ಬೀದಿಯಲ್ಲಿ...

ಅರ್ಘ್ಯ

ಆತ್ಮ ಸಾಕ್ಷಿಯ ನೋಟ ಪ್ರತಿಕೂಟ ಇಂದ್ರೀಯದೊಳಗೆ ನರನರಗಳ ಗುಂಟ ಹರಿದ ಆನಂದದ ಜನ್ಮ ಪ್ರಭಾಪೂರಿತ ಚಲನೆಯ ಗತಿ ಚಿನ್ನದಂಚಿನ ಮುಗಿಲು ಹೂವು ನದಿ ಹಾಡಿ ಜುಳು ಜುಳು ಹೊಳೆ ಹೊಳೆದು ಎದೆಗೆ ಅಮರಿದ ಮಿಂಚು...

ಮರದಡಿಯಲಿ

ಇಬ್ಬನಿ ಹನಿ ಹನಿ ಸುರಿದು ಹಾಸಿದ ತಂಪಿನ ಹೊತ್ತು ನಿನ್ನ ಕಣ್ಗಳು ನನ್ನ ದಿಟ್ಟಿಸುತ್ತಿದ್ದವು ಎಲ್ಲಾ ನೀರಸಗಳ ಸರಿಸಿ ಸೂರ್ಯ ನಮ್ಮಿಬ್ಬರನು ತಬ್ಬಲು ಏರಿಬಂದ ಹಕ್ಕಿ ಹಾರಿಹೋದ ತೇಲು ಬೆಳಗು ಎದೆಯ ನದಿಯಲಿ ರಂಜಕದಲೆಗಳು....

ಡಿಸೆಂಬರಿನ ಚಳಿ

ಡಿಸೆಂಬರಿನ ಚಳಿ ಶತಮಾನ ಕಳೆದರೂ ಇತಿಹಾಸ ಸ್ಪುರಿಸುತ್ತದೆ ತೆಳು ಬಟ್ಟೆಯ ಮಕ್ಕಳ ಬೀದಿ ಕಸಕ್ಕೆ ಬೆಂಕಿ ಹಚ್ಚುತ್ತ ಮೈಮನ ಕಾಯಿಸಿಕೊಳ್ಳುತ್ತಿದ್ದಾರೆ. ಹೆತ್ತವರು ಎಲ್ಲೆಲ್ಲೋ ಇದ್ದಾರೆ ಸೂರ್ಯ ಹೊತ್ತು ಸಾಗಿದ್ದಾನೆ ಎಲ್ಲಾ ನಿಟ್ಟುಸಿರುಗಳ. ಎತ್ತ ಪಯಣ...

ಕಣ್ಣು

ಕತ್ತಲು ಆವರಿಸಿದ ಕೋಣೆಯಲಿ ಕಪ್ಪನೆ ಕಣ್ಣಗೊಂಬೆಯ ಕರಿನೆರಳ ತುಂಬ ಅರಗಿಸಿಕೊಳ್ಳದ ನಿನ್ನ ಮುಖ ಅಂಚಿನಲಿ ಬಸಿತು ಬೀಳಲು ಕಾತರಿಸಿ ದಿಗಿಲುಗೊಂಡ ಸಣ್ಣಹನಿ. ಕಾಳರಾತ್ರಿಯಲ್ಲು ಪ್ರೀತಿ ಬೆಳಕು ಚೆಲ್ಲದ ಪ್ರಣತಿ ಬಾಚಿ ತಬ್ಬುವ ಅಲೆಗಳ ನೆನಪು...

ಪೂಜೆ

ಎಲ್ಲಾ ಅಬ್ಬರಗಳ ನಡುವೆ ಮೆಲ್ಲಗೆ ನಿನ್ನ ಧ್ವನಿ ನಿಟ್ಟುಸಿರು ಕೇಳಿಸುತ್ತದೆ ಬೆವರ ಹನಿ ಗುಂಟ ಇಳಿದ ಶ್ರಮ ಬೇಗುದಿಯಲಿ ಮಣ್ಣ ಅರಳಿಸಿ ನೀರು ಹನಿಸಿದೆ. ಸೋಕಿದ ವ್ಯಾಪಕ ಗಾಳಿ ಎದೆಯೊಳಗೆ ಇಳಿದು ಉಸಿರಾಡಿದ ಸದ್ದುಗಳು...

ಆಟ

ಪ್ರತಿ ಸಂಜೆಯ ಬೆಳಕು ನನ್ನ ಪುಟ್ಟ ಕೋಣೆಯಿಂದ ಹಾರಿಹೋದ ಕ್ಷಣ ನೆರಳಿನ ಕತ್ತಲಿನಲಿ ಒಂದು ಪರಿಚಿತ ಮುಖ ಹುಡುಕುತ್ತೇನೆ. ಕವಿತೆ ಬೀಜ ಕಟ್ಟುವ ಹೊತ್ತು ತೇಲಿ ಸಾಗಿವೆ ಬೆಳ್ಳಕ್ಕಿ ಸಾಲು ಸಾಲು ಅಲ್ಲಲ್ಲಿ ಒಂದೊಂದು...