ಗಳಿಗೆಬಟ್ಟಲ ತಿರುವುಗಳಲ್ಲಿ – ೯೩

ಚೆಂಡು ಸದಾ ಹಸಿವಿನಂಗಳದಲ್ಲಿ. ಬೇಕೆನಿಸಿದಾಗ ಅಪ್ಪುವ ಮುದ್ದಿಸುವ ಬೇಡೆನಿಸಿದಾಗ ಒದೆಯುವ ಎಸೆಯುವ ಆಯ್ಕೆ ಹಸಿವೆಗೆ. ಕಾಯುವ ಅನಿವಾರ್ಯತೆಯಷ್ಟೇ ಚೆಂಡಾಗುವ ರೊಟ್ಟಿಗೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೯೨

ಹಸಿವೆಂಬೋ ಕಡಲಿಗೆ ಬಿದ್ದು ಈಜುತ್ತದೆ ತೇಲುತ್ತದೆ, ಮುಳುಗುತ್ತದೆ. ಕಡೆಗೆ ನಿಧಾನಕ್ಕೆ... ಕರಗಿ ಉಪ್ಪಾಗಿ ಹೋಗುತ್ತದೆ ರೊಟ್ಟಿ. ಕಾಣದಿದ್ದರೂ ಇರುತ್ತದೆ. ರುಚಿ ನೀಡುತ್ತದೆ. *****
ಧ್ಯಾನ

ಧ್ಯಾನ

ಪ್ರಿಯ ಸಖಿ, ಭಾರತೀಯ ಸಂಸ್ಕೃತಿಯಲ್ಲಿ ಧ್ಯಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿತ್ತು. ಆದರೆ ಕಾಲಕ್ರಮೇಣ ಇಡೀ ವಿಶ್ವವೇ ಅರ್ಥ ಸಂಸ್ಕೃತಿಯೆಡೆಗೆ ಮುಖಮಾಡಿ ನಿಂತಾಗ ಇನ್ನಿತರ ತಾತ್ವಿಕ, ನೈತಿಕ ಮಾನವೀಯ ಮೌಲ್ಯಗಳಂತೆಯೇ ಧ್ಯಾನವೂ ಕೂಡ ಮೂಲೆ ಗುಂಪಾಗಿ...

ಗಳಿಗೆಬಟ್ಟಲ ತಿರುವುಗಳಲ್ಲಿ – ೯೦

ಹಸಿವು ರೊಟ್ಟಿಗಾಗಿ ನಿರಂತರ ಕಾಯಬೇಕು ರೊಟ್ಟಿ ಹಸಿವೆಗಾಗಿ ನಿರತ ಬೇಯಬೇಕು ಕಾಯುವ ಬೇಯುವ ಪ್ರಕ್ರಿಯೆಯಲಿ ನಿರ್‍ವಿಕಾರ ಬದ್ಧತೆ ಸ್ಥಾಯಿಗೊಳಬೇಕು. ಅಲ್ಲಿಯವರೆಗೂ ಎಲ್ಲವೂ ಬರೀ ಆಟ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೮೯

ಹಸಿವಿನ ಎದೆಯೊಳಗೆ ಕೂತು ಕವಿತೆ ಕಟ್ಟಿ ಆಡುವ ಹಾಡುವ ಹಂಬಲದ ಹುಚ್ಚು ರೊಟ್ಟಿಗೆ ಅದರ ಬಾಯಿಗೆ ಸಿಕ್ಕಿ ನರುಕಿ ಕಾಲಕೆಳಗೆ ನಲುಗಿ ನುಣ್ಣಗಾಗುವ ಅಸಹಾಯಕತೆಯಲ್ಲೂ ಹುಟ್ಟಿಬಿಡುತ್ತದೆ ಕವಿತೆಯ ಸಾಲು. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೮೮

ಹಸಿವೆಗೆ ಬೇಕಾದಾಗ ಬೇಕೆಂದಂತೆಲ್ಲಾ ರೊಟ್ಟಿ ಹೊಂದಿಕೊಳ್ಳುವುದು ಅಲಿಖಿತ ನಿಯಮ. ಹಸಿವಿನಿಂದ ರೊಟ್ಟಿಯೂ ಅದನ್ನೇ ಬಯಸಿದರೆ..... ಶಾಂತಂಪಾಪಂ ಅದು ಅನಿಯತ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೮೭

ಹಸಿವು ನಿದ್ರಿಸುವುದಿಲ್ಲ ರೊಟ್ಟಿಗೆ ಎಚ್ಚರವಿಲ್ಲ. ಗಾಢ ನಿದ್ದೆಯಮಲಿನಲಿ ರೊಟ್ಟಿ ಕಾಲಕ್ಕೆ ಮೊದಲೇ ಪ್ರೌಢ. ಕೂದಲು ಸೀಳುವ ಎಚ್ಚರದಲಿ ಹಸಿವೆಗೆ ಸದಾ ನವ ಯೌವನ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೮೬

ಬಾಯ್ತೆರೆದು ಎಲ್ಲ ನುಂಗಲು ಕಾದಿರುವ ದೈತ್ಯ ಹಸಿವು ಚೂರೇ ಚೂರು ಒಡಲಿಗೆ ಬಿದ್ದೊಡನೆ ಅಕ್ಷಯಗೊಳುವ ರೊಟ್ಟಿಯದ್ಭುತಕ್ಕೆ ಬೆಕ್ಕಸ ಬೆರಗು. ಗಳಿಗೆ ಬಟ್ಟಲು ಖಾಲಿಯಲ್ಲ ರೊಟ್ಟಿ ಮುಗಿಯುವುದಿಲ್ಲ. *****