ಭಾರ

ತಂದೆ ಮಗಳನ್ನು ಕೇಳಿದರು "ಯಾಕಮ್ಮ ಶೀಲಾ ದೇವರ ಮೇಲೆ ಕಲ್ಲು ಇಟ್ಟಿರುವೆ?" "ನೀನೆ ಹೇಳಿದ್ದೆಯಲ್ಲಾ ಕಷ್ಟ ಕಾಲ ಬಂದಾಗ ದೇವರ ಮೇಲೆ ಭಾರ ಹಾಕು, ಈಗ ಪರೀಕ್ಷೆ ಕಾಲವಾಗಿರುವುದರಿಂದ ಹೀಗೆ ಮಾಡಿರುವೆ." *****

ಮೌನ ವೇದನೆ

ರಸ್ತೆಯ ಇಕ್ಕೆಲಗಳಲ್ಲಿ ಗುಡಿಸಿಟ್ಟ ಪ್ಲಾಸ್ಟಿಕ್ ಚೀಲಗಳು, ಒಣಗಿದ ಎಲೆಗಳು, ಎಸೆದ ನಾನಾ ರೀತಿಯ ಕಸ ದುರ್ವಾಸನೆ ಬೀರುತ್ತಿತ್ತು. ಏನಾದರು ಆಹಾರ ಸಿಕ್ಕಿತೇ ಎಂದು, ನಾಯಿ ಮೂಸಿ ನೋಡಿ ಮುಂದೆ ಹೋಯಿತು. ಅದರ ಹಿಂದೆಯೇ ಹಂದಿ...

ಗಳಿಗೆಬಟ್ಟಲ ತಿರುವುಗಳಲ್ಲಿ – ೮೬

ಬಾಯ್ತೆರೆದು ಎಲ್ಲ ನುಂಗಲು ಕಾದಿರುವ ದೈತ್ಯ ಹಸಿವು ಚೂರೇ ಚೂರು ಒಡಲಿಗೆ ಬಿದ್ದೊಡನೆ ಅಕ್ಷಯಗೊಳುವ ರೊಟ್ಟಿಯದ್ಭುತಕ್ಕೆ ಬೆಕ್ಕಸ ಬೆರಗು. ಗಳಿಗೆ ಬಟ್ಟಲು ಖಾಲಿಯಲ್ಲ ರೊಟ್ಟಿ ಮುಗಿಯುವುದಿಲ್ಲ. *****