ಕಡಲೇ ಒಮ್ಮೊಮ್ಮೆಯಾದರೂ ಬಾ

ಹೀಗೆ ಒಮ್ಮೊಮ್ಮೆಯಾದರೂ ಎಲ್ಲ ಮಿತಿಗಳ ಮೀರಿ ನನ್ನೆದೆಯ ದಡಕೆ ಅಪ್ಪಳಿಸು ಬಾ ಕಡಲೇ. ಶತಶತಮಾನಗಳಿಂದ ಕಾದು ಕೆಂಡವಾಗಿರುವ ನನ್ನೆದೆಯ ಸುಡುಮರಳ ಕೊಂಚ ತಂಪಾಗಿಸಿಕೊಳ್ಳುತ್ತೇನೆ. ನೀ ಹೊತ್ತು ತರುವ ಕುಳಿರ್ಗಾಳಿಗೆ ಒಮ್ಮೆಯಾದರೂ ಅರಳಿ ಮತ್ತೊಮ್ಮೆ ಪಕ್ಕಗಳಲ್ಲಿ...

ನೀ ಹೂಂ ಎಂದರೆ ಮಾತ್ರ!

ಕಥೆಯಂತೂ ಸಾಗುತ್ತದೆ ಕಂದ ಆದರೊಂದೇ ಷರತ್ತು ಕಥೆ ಕೇಳುವ ಕುರುಹಿಗೆ ಕಥೆಗೆ ಉಸಿರಂತೆ ನೀ ‘ಹೂಂ’ ಎಂದರೆ ಮಾತ್ರ ಮುಂದೆ ಸಾಗುತ್ತದೆ ಕಥೆ ತಡವರಿಸದೆ! ಆಡ್ಡಗೋಡೆಯ ಮೇಲಿನ ದೀಪ ಇತ್ತಲೂ ಒಂದಿಷ್ಟು ಬೆಳಕು ಚೆಲ್ಲಿ...

ಮುಖಾಮುಖಿ

ಮನಸಿನಾಳದಿಂದ ಎದ್ದ ಬುದ್ಧ ಈಗ ಮತ್ತೆ ಬಂದಿದ್ದಾನೆ. ಮೊದಲಿನಂತೆಯೇ ರಾತ್ರಿಯಿಡೀ ದಿಟ್ಟಿಸಿನೋಡುತ್ತಾ ನೂರು ಗೊಂದಲಗಳ ಮೂಡಿಸಿ ಕಾಡುತ್ತಾನೆ. ಕೇಳುತ್ತಾನೆ ಒಂದೇ ಪ್ರಶ್ನೆ "ಈಗ... ಈಗ ಬರುವೆಯಾ ನನ್ನೊಡನೆ?" ನನ್ನದು ಮತ್ತದೇ ಹಳಸಲು ಕಾರಣಗಳು ಅವನಿಂದ...

ಬಾಗಿಲಾಚೆಯ ಮೌನ

ಏಕಿಂಥ ಬಿಗುಮಾನ ಬಾಗಿಲಾಚೆಯ ಮೌನ? ಹೊಸ್ತಿಲವರೆಗೂ ಬಂದು ನಿಂತು ಮುಖವ ಮರೆಸುವುದೇ ಇಂತು? ಹೇಳದೇ ಬರುವವರು ಕೇಳದೇ ಹೋಗುವವರು ಎಲ್ಲರಿಗಾಗಿ ವಿಸ್ತಾರವಾಗಿ ತರೆದೇ ಇದೆ ಬಾಗಿಲು. ನೀನು ಅತಿಥಿಯೂ ಅಲ್ಲ ದೇವಮಾನವನೂ ಅಲ್ಲ ನನ್ನದೇ...

ಜಾವಕ್ಕೊಮ್ಮೆ ಜಾಗರ

ಎಚ್ಚರ ಎಚ್ಚರ ಕಾರ್ಗತ್ತಲ ತೆಕ್ಕೆಯಲಿ ಪೊದೆಯೊಳಗೆ ಅವಿತುಕುಳಿತ ಚೋರ ಹೊಕ್ಕಾನು ಮನೆಯೊಳಗೆ ನಿಶಾದೇವಿಯಾಲಿಂಗನದಲಿ ಮೈ ಮರೆತರೆ ಎಲ್ಲವೂ ಸೂರೆ ಕಡಲಿನ ತೆರೆ ದಂಡೆಗಪ್ಪಳಿಸಿದರೆ ಅರಿವಾಗುವ ಮೊದಲೇ ಎಲ್ಲಾ ನೀರೇ! ಎಚ್ಚರ ಎಚ್ಚರ ಕಿಟಕಿ, ಬಾಗಿಲು,...

ಅನನ್ಯ ಹೇಮೆ

ಮುಚ್ಚಿಕೊಂಡ ಕದಗಳ ಆಹ್ವಾನವಿಲ್ಲದ ಅಂತಃಪುರದೊಳಗೂ ಹೇಗೋ ನುಗ್ಗಿಬಿಡುತ್ತಾಳೆ ಗೊತ್ತೇ ಆಗದಂತೆ ಮೆಲ್ಲ ಮೆಲ್ಲಗೆ ಗೂಡುಕಟ್ಟಿ ಕನಸಿನ ಮೊಟ್ಟೆ ಇಟ್ಟುಬಿಡುತ್ತಾಳೆ ಇವಳದೇ ಜೀವಭಾವ ಮೈಮನಗಳ ತುಂಬಿಕೊಂಡು ಮೊಟ್ಟೆಯೊಡೆದು ಹುಟ್ಟಿಬಂದ ಕನಸಿನ ಕಂದನಿಗೆ ವರ್ಣನೆಗೆ ಸಿಲುಕದ ಅದೆಷ್ಟು...

ಮೀರಬಾರದಲ್ಲ ಹೊತ್ತು

ರಾಜಕುಮಾರನ ಹೊತ್ತ ಕುದುರೆಗೆ ಉಸಿರು ಬಿಗಿಹಿಡಿದು ನೇರ ಹಾದಿಗೆ ಕಣ್ಣು ಜಡಿದು ಸುಮ್ಮನೆ ಓಡುವ ಉಮೇದು. ನೆಲದ ಆಳಗಳನರಿಯದ ಅದರ ತುಡಿತಕ್ಕೆ ಸ್ಪಂದಿಸದ ನಿಂತಲ್ಲೇ ಕ್ಷಣ ನಿಲ್ಲದ ಚಪಲಚಿತ್ತ ಕುದುರೆ ಕಾಲುಗಳಿಗೋ ಚಕ್ರ. ಒಮ್ಮೆಯೂ...

ಬಗೆ ಬಗೆ

ಮೆದುಭೂಮಿ ಹದ ಗಾಳಿ ಬೇಕಷ್ಟು ಬೆಳಕು ಸಾಕಷ್ಟು ನೀರು ಎಲ್ಲಾ ಇದ್ದೂ ಮೊಳಕೆಯೊಡೆಯಲೋ ಬೇಡವೋ? ಈಗಲೋ ಆಗಲೋ ಅನುಮಾನದಲ್ಲೇ ಸ್ತಬ್ದಗೊಂಡ ನುಗ್ಗೆಬೀಜ. ಯಾವ ಪರುಷಸ್ಪರ್ಶವೋ ಆಳಕ್ಕೆ ಬೇರನಿಳಿಸಿ ನೆಲ‌ಒಡಲು ಸೀಳಿ ಮೊಳಕೆಯೊಡೆಸಿ ಬುರಬುರನೆ ಎತ್ತರಕ್ಕೇರಿ...

ಕಾರ್ಯಕಾರಣ ಸಂಬಂಧ

ಇರುಳು ಸುಮ್ಮನೆ ಬೆಳಕಾಗಿ ಅರಳುವುದಿಲ್ಲ ಮುಗಿಲು ಸುಮ್ಮನೆ ಮಳೆ ಸುರಿಸುವುದಿಲ್ಲ ಶಿಲುಬೆಗೇರಿದ ಕತ್ತಲು ನೋವುಗಳಿಗೆ ಮೈಯೊಡ್ಡಿ ಹದ ಬೆಂದು ಬೆಳಕಾಗಬೇಕು ತಕ್ಕಡಿಯಲಿ ಕೂತ ತುಂಬು ಬಸುರಿನ ಮುಗಿಲು ಹಿಂಸೆಯನುಭವಿಸುತ್ತಲೇ ಈಗಲೋ - ಆಗಲೋ ಅನುಮಾನಿಸುತ್ತಾ...

ನಿರಂತರ

ಶತಶತಮಾನಗಳಿಂದ ಧಗಧಗನೆ ಹೊತ್ತಿ ಉರಿಯುತ್ತಲೇ ಇದೆ ಈ ಅಗ್ನಿಕುಂಡ. ಬೇಯುತ್ತಲೇ ಇದೆ ತಪ್ಪಲೆಯೊಳಗೆ ಅನ್ನವಾಗದ ಅಕ್ಕಿ! ಮತ್ತೆ ಮತ್ತೆ ಸೌದೆಯೊಟ್ಟಿ ಉರಿ ಹೆಚ್ಚಿಸುವ ಕಾಯಕ. ತಪ್ಪಲೆಗೆ ನೀರು ಸುರಿದು ತಳ ಸೀಯದಂತೆ ಕಾಯುವ ಕರ್ಮ...