ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೩೦ ರೂಪ ಹಾಸನ August 20, 2019May 4, 2019 ಕತ್ತಲಲ್ಲಿ ಕಣ್ಣು ಮಿಟುಕಿಸಿದಂತೆ, ಕಾಣಲಾಗದ ಹಸಿವಿನ ಒಡಲಾಳದಲ್ಲಿ ರೊಟ್ಟಿಗೊಂದು ಪುಟ್ಟ ಘನವಾದ ಸ್ಥಾನವಿದೆಯಂತೆ. ಪ್ರತ್ಯಕ್ಷ ನೋಡಲಾಗದ ಸತ್ಯ ಇದ್ದರೂ ಇರದಂತೆ. Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೨೯ ರೂಪ ಹಾಸನ August 13, 2019May 4, 2019 ರೊಟ್ಟಿ ಹಸಿವು ಸೇರಿ ಒಂದರೊಳಗೊಂದಾಗಿ ಪರಿಪೂರ್ಣತೆಯ ಅನುಭವ. ಹಸಿವು ಮತ್ತೆ ಆವಿಯಾಗಿ ಪರಿತಪಿಸಿ ರೊಟ್ಟಿಗಾಗಿ ರೊಟ್ಟಿಯೇ ಆಗುವುದು ಅನುಭಾವ. Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೨೮ ರೂಪ ಹಾಸನ August 6, 2019June 5, 2019 ಹಸಿವು ಗಡಿಯಾರದ ನಿಮಿಷದ ಮುಳ್ಳು. ರೊಟ್ಟಿ ಗಂಟೆಯ ಮುಳ್ಳು. ಅರವತ್ತು ನಿಮಿಷಗಳು ಸುತ್ತಿ ಬಂದರೂ ಹಸಿವು ಒಂದೇ ಗಂಟೆಯಾಗಿ ಮೆಲ್ಲಗೆ ತವಳುತ್ತದೆ ರೊಟ್ಟಿ. ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೨೬ ರೂಪ ಹಾಸನ July 23, 2019June 5, 2019 ‘ಛೆ! ಎಷ್ಟೊಂದನ್ನು ಹೇಳಲಾಗಲೇ ಇಲ್ಲ’ ಕಳವಳ ರೊಟ್ಟಿಗೆ. ‘ಸದ್ಯ ಎಷ್ಟೊಂದನ್ನು ಹೇಳಲಾಗುವುದಿಲ್ಲ’ ಸಮಾಧಾನ ಹಸಿವೆಗೆ. ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೨೫ ರೂಪ ಹಾಸನ July 16, 2019May 4, 2019 ಪಡೆಯುವ ಅರ್ಹತೆ ಕೊಡುವ ಘನತೆಯ ನಡುವಿನ ಒಪ್ಪಂದ ಹಸಿವು ರೊಟ್ಟಿಯ ಸಂಬಂಧ. Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೨೪ ರೂಪ ಹಾಸನ July 9, 2019May 4, 2019 ಹಸಿವಿಲ್ಲದೆಯೂ ರೊಟ್ಟಿ ನಿರಾಳ ಪರಿಪೂರ್ಣ. ರೊಟ್ಟಿಯಿಲ್ಲದೇ ಹಸಿವು ಅಪ್ರತಿಭ ಅಪೂರ್ಣ ಇದೂ ಸೃಷ್ಟಿ ಅಸಮತೆ ಉತ್ಪಾದನಾ ಚಾತುರ್ಯ. Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೨೩ ರೂಪ ಹಾಸನ July 2, 2019May 4, 2019 ಅಸಾಧ್ಯ ಸಾಧ್ಯತೆಗಳ ಆವಿಷ್ಕಾರದಲ್ಲಿ ಹಸಿವು ತನ್ನ ತಾನೇ ಮರೆಯುತ್ತದೆ ಮೆರೆಯುತ್ತದೆ. ಸಾಧ್ಯತೆಗಳೇ ಅಸಾಧ್ಯವಾಗುವ ವಿಪರ್ಯಾಸದಲ್ಲಿ ರೊಟ್ಟಿ ದೀನವಾಗುತ್ತದೆ. ದ್ವೀಪವಾಗುತ್ತದೆ. Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೨೨ ರೂಪ ಹಾಸನ June 25, 2019May 4, 2019 ಹಸಿವಿಂಗಿಸಿದ ರೊಟ್ಟಿಯ ಧನ್ಯತೆ ರೊಟ್ಟಿಯ ಪಡೆಯಬಲ್ಲ ಹಸಿವಿನ ದಾರ್ಷ್ಟ್ಯದ ಎದುರು ಅಮುಖ್ಯ. Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೨೧ ರೂಪ ಹಾಸನ June 18, 2019June 18, 2019 ಹಸಿವೆಗೆ ರೊಟ್ಟಿ ಕಾಡಿದರೆ ಸಕಾಲ. ಸಹಜ. ರೊಟ್ಟಿಗೇ ಹಸಿವು ಕಾಡಿದರೆ ಅಕಾಲ. ಅಕ್ಷಮ್ಯ, ಲೋಕ ನೀತಿಯ ಮುಂದೆ ಭಾವಲೋಕದ ಮಿಣುಕು ನಗಣ್ಯ. ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೨೦ ರೂಪ ಹಾಸನ June 11, 2019April 28, 2019 ಕೊಡುವ ರೊಟ್ಟಿ ಪಡೆವ ಹಸಿವು ಬದಲಾಗದ ಲೆಕ್ಕತಖ್ತೆ. ಅಸಮತೆಯ ಹೆಜ್ಜೆಗಳು ಒಟ್ಟಾಗಿಯೇ ನಡೆಯುತ್ತಿವೆ ಯಾರೋ ಮಾಡಿದ ದಾರಿ. Read More