ಗಳಿಗೆಬಟ್ಟಲ ತಿರುವುಗಳಲ್ಲಿ – ೪೦

ಹಸಿವಿನ ಗರ್ಭದೊಳಗೆ ಭ್ರೂಣವಾಗಿರುವ ಭಾವಗಳು ಏಕೋ ಕಾಣೆ ಮಾತುಗಳಾಗುವುದಿಲ್ಲ. ಬದಲಿಗೆ ಗರ್ಭಪಾತಕ್ಕೊಳಗಾಗುತ್ತವೆ. ಛಿದ್ರಗೊಂಡು ಸಿಡಿದುಬೀಳುತ್ತವೆ. ಆ ಪ್ರತಿ ಚೂರುಗಳಲ್ಲೂ ರೊಟ್ಟಿ ತನ್ನ ಸಾವು ಕಾಣುತ್ತದೆ.

ಗಳಿಗೆಬಟ್ಟಲ ತಿರುವುಗಳಲ್ಲಿ – ೩೮

ಹಸಿವೆಗೆ ಬಲಕ್ಕೆ ಬಲವಿಲ್ಲ ಎಡಕ್ಕೆ ಎಡವಿಲ್ಲ ಮೊದಲಿಲ್ಲ ಕೊನೆಯೆಂಬುದಿಲ್ಲ. ಆದರೂ ಊರು ಉಸಾಬರಿಯ ಕೆಲಸ. ಯಜಮಾನಿಕೆಯ ಗತ್ತು. ರೊಟ್ಟಿಗೆ ತಿಳಿದಿಲ್ಲ ತನ್ನ ತಾಕತ್ತು.

ಗಳಿಗೆಬಟ್ಟಲ ತಿರುವುಗಳಲ್ಲಿ – ೩೬

ಹಸಿವು ರೊಟ್ಟಿಯ ನಡುವೆ ಶ್ರೇಷ್ಟತೆಗಾಗಿ ಕಿತ್ತಾಟ. ಸದ್ದಿಲ್ಲದೇ ಅಂಗಳ ಹೊಕ್ಕಿರುವ ಅತೃಪ್ತಿಗೆ ಕಷ್ಟಪಡದೇ ದಕ್ಕಿದೆ ಪಟ್ಟ. ಇಬ್ಬರ ಜಗಳ ಮೂರನೆಯವರಿಗೆ ಲಾಭ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೩೫

ಕನ್ನಡಿಗೆ ಹಿಡಿದ ಹಸಿವೆಗೆ ಇಲ್ಲ ಪ್ರತಿಫಲಿಸುವ ಬೆಳಕಿಂಡಿ ಅದಕಿಲ್ಲ ಕಣ್ಣು. ರೊಟ್ಟಿಯ ಮೈ ತುಂಬ ಕಣ್ಣು ಕಣ್ಣಿನ ತುಂಬ ಕನ್ನಡಿ ಒಂದೊಂದು ಕನ್ನಡಿಗೂ ಸಾವಿರಾರು ಪ್ರತಿಬಿಂಬ.

ಗಳಿಗೆಬಟ್ಟಲ ತಿರುವುಗಳಲ್ಲಿ – ೩೪

ಹಸಿವೆಗೆಷ್ಟು ಮಾತಿತ್ತೋ ಕೇಳಲಾರಿಗೆ ಪುರುಸೊತ್ತು? ವ್ಯರ್ಥ ಮಾತು ಯಾರಿಗೆ ಬೇಕು? ರೊಟ್ಟಿ ಏತಕ್ಕೆ ಕಾದಿತ್ತೋ? ಕಾಯುವ ತಪ ಕಾದವರಿಗೇ ಗೊತ್ತು. ಮುಟ್ಟಲಾಗದ ಗುಟ್ಟುಗಳು ಮುಖವ ಕೊಲ್ಲುತ್ತವೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೩೩

ಹಸಿವು ತೀರಿಹೋದರೂ ಹಸಿ ಆರುವುದಿಲ್ಲ ರೊಟ್ಟಿ ಹಸಿವಿನೊಡಲಲ್ಲಿ ಕರಗಿಹೋದರೂ ರುಚಿ ತೀರುವುದಿಲ್ಲ. ಹಸಿವು ರೊಟ್ಟಿಗಳ ಆರದ ತೀರದ ನಿರಂತರ ಪಯಣಕೆ ಮೂಲ ಈ ಪರಸ್ಪರ ಸೆಳೆತ.