ನೆಲವು ಕಾದು, ಅಂಗಾಲು ಕಾದು, ಮೈ ಕಾದು ಉರಿದು ನೆತ್ತಿ ಬಿಸಿಲ ಎಣ್ಣೆಯಲಿ ಹೊತ್ತಿ ಆದೆ ನಾ ಬೆಂಕಿಗೊಂಡ ಬತ್ತಿ ಕಣ್ಣು ಉರಿದು ಕೆಂಗೆಂಡವಾಗಿ ಭಗ ಭಗನೆ ಬಾನ ಭಾಗ ನೆತ್ತಿಯಲ್ಲಿ ಸುಡುತಿದ್ದ ಸೂರ್ಯ ಕತ್ತೆತ್ತಿ ನೋಡಿದಾಗ. ಮಣ್ಣು ನೆಲದ ಈ ಅನ್ನಪಿಂಡ ...

ಏನುಂಟೊ ಅದನು ಅಲ್ಲಗಳೆಯಲು ಸಲ್ಲ. ಇಹುದು ಇಲ್ಲೆಂಬ ವ್ಯಾಪಾರ ಉಂಟಿನ ಗಂಟು. ಇಹುದು ಎಂಬುದು ದೃಶ್ಶ. ದೃಶ್ಯದಾಚೆಗೆ ಸಾರೆ ಇಲ್ಲೆಂದು ಎನಿಸುವುದು. ರೂಪದಾವಿರ್ಭಾವ, ರೂಪದ ತಿರೋಭಾವ. ರೂಪವೆಂಬುದು ವಸ್ತು; ಅಸ್ತಿ ಎಂಬುದು ಭಾವ ಸದ್ವಸ್ತು ಸದ್ಭಾವಗಳ...

ಭಸ್ಮವಾದರು ದೃಶ್ಯ ಅಸ್ಮಿ ಎನ್ನುತ್ತಲಿದೆ ಕಸ್ಮಾತ್‌? ಅಕಸ್ಮಾತ್ತೋ? ಸಾಕ್ಷಿ! ಹೇಳು. ಯಾ ಅನಾಹತನಾದ ಯಾವದೋ ಆಸ್ವಾದ ಹೃದ್ಗಂಧಿಯಾಮೋದ ಬಂತು ತಾಳು. ಕ್ಷಣ ಕ್ಷಣ ಅಹಂ ಮೃತಿಯು ಆದರೂ ಆಕೃತಿಯು ಸತ್ಯ ವಾಸನೆಯಂತೆ ಸುಳಿಯುತಿಹುದು. ಆವಾಸ ರಜತವೋ ಆಸ್ತಿ...

ಲವಲವಿಕೆಯಲಿ ಮಿಂಚಿ ಮುಚ್ಚಾಟವಾಡುತಿಹ ಬಹು ರೂಪಿಯೇ | ಅಮೃತದಿರವೇ ನನ್ನ ಮರೆವಿಲ್ಲದರಿವಿನಲಿ ಇಹೆ ಸೀಪಿಯೇ || ನೆಕ್ಕಿದೆನ್ನನು ನಿನ್ನ ವಿದ್ಯುತ್‌ ಕಟಾಕ್ಷದಲಿ ಅಗ್ನಿರುಚಿಯೇ | ನಿನ್ನ ಕುಲುಮೆಯ ಕಾವು ಇಲ್ಲ ಇಲ್ಲದ ಠಾವು ನಿತ್ಯ ಶುಚಿಯೇ || ಕ್ಷಣ...

ಇದು ಅಖಂಡ ಇರು ಅಖಂಡ ಅಖಂಡ! ಖಂಡನ ಮಂಡನ ಬರಿ ವಾಗ್ದಂಡನ ಇರುವುದನರಿ, ಅರಿದೊಲು ಹರಿ ಈ ಪರಿ ಪರಿಪೂರ್ಣ ವ್ಯಾಕರಣದ ಪ್ರಕ್ರಿಯೆಯೋ ಬರಿ ಮಾತಿನ ಚೂರ್ಣ ತರ್ಕದ ಯುಕ್ತಿಯ ಕುಹಕವು ಅವಿವೇಕದಜೀರ್ಣ ಸಮದಂಡಿಗೆ ಒಳಹೊರಗೂ ಆಗುವದುತ್ತೀರ್ಣ. ಮನದಾ ಮಂಡಿಗೆಯ...

ಮರನಲ್ಲ ನಾನು- ನಾನು ಅಮರ. ಸುಮ- ನಲ್ಲನಾಗಿ, ಆದೆ ಭ್ರಮರ. ಮುಚ್ಚಿಲ್ಲ ನನಗೆ, ನಾನು ತೆರವು ಬಿಚ್ಚು ಮಲಗಂಟು, ಅದುವೆ ಒಳನಂಟು. ಅಂಟು ಇದ್ದರು ಅಲ್ಲ ಎಣ್ಣೆ ಜಿಗಟು. ಇದು ಸ್ನೇಹದೊಗಟು. ತುಂತುರು ತುಷಾರ ಅದು ಹೃದಯ ಹಾರ ಜಿನುಗು ಕಿವಿ ಮಾತು ಜೀವ ರ...

ಹೀಗೆಂದರೇನರ್ಥ? ಶಬ್ದ ವ್ಯರ್ಥ-! ಅಷ್ಟೆ ಅರ್ಥ!! ಅರ್ಥ ಶಾಸ್ತ್ರದ ಕುಟಿಲ ನೀತಿಯೊಮ್ಮೆ ಮಾನವೀಯತೆ ಬರಡು ಪ್ರೀತಿ-ಎಮ್ಮೆ : ಕೋಣವೂ ಕರು ಹಾಕಿತೇ? ನವ್ಯ- ನ್ಯೂಜು! ಬದುಕಲೋ ಸಾಯಲೋ ಭೀತಿಯೊಮ್ಮೆ ಆದು ಕೂಡ ಗೇಲಿ-ಮೋಜು. ಹಾಗೆಂದರೂ ‘ಈಸ್ಟು&#8...

ಅಲ್ಲಿಂಕು ಇಲ್ಲಿಂಕು ನಡುವಿಲ್ಲ ‘ಲಿಂಕು’ ಬರಿ ಮಸಿಯ ಗೊಣ್ಣೆ. ಪಿತ್ತ ಕೆರಳಿದ ಹಾಗೆ ಮೂಕ- ಸನ್ನೆ. ಒಪ್ಪಿಗಿಲ್ಲ ಮಾತು ತಿಳಿಯಲಿಲ್ಲ ತಪ್ಪಿಗೇ ಬಣ್ಣ ಬಳೆದು ಹೊಸದೆಂದು ತಿಳಿದು. ಹೊಟ್ಟೆಯೊಳೆ ಕಣ್ಣು ಹಿಂಭಾಗ ಮೂಗು ಕಿವಿಯಿರುವ ಜಾಗದ...

ಇರುವಿಗರಿವೇ ಮರೆವು, ಮರೆವಿಗೆ ಅರಿವೆ ಇರುವಿನ ಪರಿಯು, ಈ ಪರಿ ಹರಿವ ಇರುವಿನ ಅರಿವೆ ಹಿಗ್ಗಿನ ಸಮರಸದ ಬಾಳು! ಈ ಘನದ ನೆಲೆ ಪಿಂಡಗೊಂಡಿಹ ಆ ಮಹತ್ತಿನ ಉಂಡೆ ಗರ್ಭೀ- ಕರಿಸಿ ಮೊಗ್ಗಾಗಿಹುದು ಮನದುನ್ಮನದ ಬಯಲಿನಲಿ ॥೧॥ ಮನದ ಶೂನ್ಯ ಸ್ಥಿತಿಯು ಪೂರ್ಣದ...