ವರದರಾಜನ್ ಟಿ ಆರ್ ರವರು ಕಲಾವಿದರು, ಸಮಾಜ ಸೇವಕರು ಹಾಗೂ ಕನ್ನಡ, ಆಂಗ್ಲ ಮತ್ತು ಹಿಂದಿಯಲ್ಲಿ ಭಾಷೆಯಲ್ಲಿ ಬರೆಯುವವರಾಗಿದ್ದಾರೆ. ಇವರು ಹಲವು ಸಾಹಿತ್ಯ ಸಮ್ಮೇಳನಗಳು ಹಾಗೂ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಾಟಕಕಾರರಾಗಿ ಹಲವಾರು ನಾಟಕಗಳನ್ನು ರಚಿಸಿದ್ದಾರೆ, ನಿರ್ಧೇಶಿಸಿದ್ದಾರೆ ಹಾಗೂ ನಟಿಸಿದ್ದಾರೆ. ಇವರ ಹಿಂದಿ ಕಾದಂಬರಿ "ಸಲ್ಮಾ"ಗೆ ೨೦೦೧ನೆಯ ರಾಷ್ಟ್ರ ಪ್ರಶಸ್ತಿ ದೊರಕಿದೆ.
ಹೃದಯ ಮಂದಿರದಲೊಂದು ಮೂರ್ತಿಯನು ಕಲ್ಪಿಸಿ | ಭಕ್ತಿ ರಸ ಕುಸುಮದಿಂದ ನಿನ್ನ ಪೂಜಿಪೆ ತಂದೆ ||೧|| ನನಗಿಲ್ಲ ಧನ ಧಾನ್ಯ ನಾನಲ್ಲ ಜಗ ಮಾನ್ಯ | ಪುಣ್ಯ ಕ್ಷೇತ್ರಕ್ಕೆ ಹೋಗಿ ನಿನ್ನ ಸೇವೆಯ ಮಾಡಿ...
ಸಾಹಿತ್ಯ ಗಗನದಲಿ ಧ್ರುವ ತಾರೆ ಮಿನುಗುತಿತ್ತು ಒಮ್ಮೆಲೇ ಮಾಯವಾಯ್ತು ಕಣ್ಮರೆಯಾದುದು ಜಡಕಾಯ ಶಾಶ್ವತವಾಗಿ ಉಳಿದದ್ದು ಅಮೂಲ್ಯ ಕೃತಿಗಳಲಿ. ಅದೆಂದಿಗೂ ಧ್ರುವ ಚಿರ ಶಾಂತಿ ಹೊಂದಲಿ ಜೀವ ಎಂದು ನಿನ್ನ ಬೇಡುವೆ ದೇವ. ೭-೧೦-೧೯೭೫ ರಂದು...
ಪೇಟೆ ಬೀದಿಯಲ್ಲಿ ಹಗಲು - ಹತ್ತು ಘಂಟೆಯ ಸಮಯ ಒಬ್ಬ ಬಿದ್ದಿದ್ದ ಕುಡಿದೋ ಜ್ಞಾನ ತಪ್ಪಿಯೋ, ಸತ್ತೋ ಬಿದ್ದಿದ್ದ. ನೋಡಲು ಯಾರಿಗೂ ಮನಸ್ಸಿಲ್ಲ, ಧೈರ್ಯವಿಲ್ಲ, ಸಮಯವಿಲ್ಲ ಸಂಜೆ - ಅವನು ತರಕಾರಿ ಮಾರುತ್ತಿದ್ದ. ಬೆಳಗಿನ...
ವೃತ್ತಪತ್ರಿಕೆಯ ಕುರಿತು ಶಾಲಾ ಕಾಲೇಜು ದಿನಗಳಿಂದಲೂ ಬರೆಯುತ್ತಾಬಂದಿದ್ದೇವೆ ಲೇಖನಗಳನ್ನು, ಪ್ರಬಂಧಗಳನ್ನು. ಹಾಡಿ ಹೊಗಳಿದ್ದೇವೆ ಅದರ ಬಹು ಉಪಯೋಗಗಳನ್ನು. ಕಳೆದ ವಿದ್ಯಾರ್ಥಿ ದೆಸೆ ಮುಗಿದ ನಿರುದ್ಯೋಗ ಪರ್ವ ಬಂದೆರಗಿದ ಸಂಸಾರ ಸಾಗರ ಇದೀಗ ತಿಳಿಸಿಕೊಟ್ಟಿದೆ ವೃತ್ತಪತ್ರಿಕೆಯ...
ರೈಲು ನಿಲ್ಲುವುದು ಎರಡೇ ನಿಮಿಷ. ಅವಸರವಾಗಿ - ನಾನು ಹತ್ತಿದೆ, ಅವಳು ಇಳಿದಳು, ಸೀದಾ ಹೃದಯದಾಳಕ್ಕೇ! ನೆಲೆಸಿಬಿಟ್ಟಳು. ಸ್ಥಿರವಾಗಿ ಮನ ಮಂದಿರದಲ್ಲಿ. ಎಂದಾದರೊಮ್ಮೆ ಸ್ಮೃತಿ ಪಟಲದ ಮೇಲೆ ಮಿಂಚುವಳು ಮರೆಯಾಗದವಳು ಮರೆಯಲಾಗದವಳು. ***** ೧೪-೦೩-೧೯೯೨