Home / ಹಳೆಯ ಸಬ್ ಅಸಿಸ್ಟಾಂಟನ ಕಥೆಗಳು

Browsing Tag: ಹಳೆಯ ಸಬ್ ಅಸಿಸ್ಟಾಂಟನ ಕಥೆಗಳು

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗ...

ಚಂದ್ರನು ಗಗನಾಂಗಣದದಲ್ಲ ಮೆಲ್ಲಮೆಲ್ಲನೆ ಸ೦ಚರಿಸುತ್ತಿದ್ದನು; ಒಮ್ಮೆ ಸಾ೦ದ್ರವಾಗಿದ್ದ ಮೋಡಗಳ ಮರೆಯಲ್ಲಿ ಹುದುಗಿ, ಒಮ್ಮೆ ಮುಗಿಲ್ದೆರೆಯನ್ನು ತೆರೆದು, ತನ್ನ ಮುಖವನ್ನು ತೋರಿಸುತ್ತ ಸ೦ಚರಿಸುತ್ತಿದ್ದನು. ಸ್ನಿಗ್ಧವಾದ ಚಂದ್ರಿಕೆಯು ಡಿಲ್ಲಿಯ ಪುರ...

ದಕ್ಷಿಣ ಹಿಂದೂಸ್ಥಾನದ ಪ್ರಾಚೀನ ರಾಜ್ಯಗಳಲ್ಲಿ ವಿಜಯನಗರದಷ್ಟು ಲೋಕೋತ್ತರವಾದ ಕೀರ್ತಿಯನ್ನೂ, ಅಭ್ಯುದಯವನ್ನೂ ಹೊಂದಿದ ರಾಜ್ಯ ಮತ್ತೊಂದಿಲ್ಲ. ಉಷ್ಣ ಪ್ರದೇಶಗಳಲ್ಲಿ ರಂಜಿಸುವ ಸಂಧ್ಯಾ ಕಾಲದಂತೆ ಈ ರಾಜ್ಯವು ಅಲ್ಪಕಾಲ ಪ್ರಜ್ವಲಿಸಿ, ಒಡನೆಯೇ ಅಂಧಕಾರ...

ನನ್ನ ಚಿಕ್ಕತಾಯಿ ಜೈಲಿನ ಬಾಯಿಗೆ ಬೀಳಲಿಕ್ಕಾದ ನನ್ನನ್ನು ಹೇಗೂ ಬಿಡುಗಡೆ ಮಾಡಿದಳು. ನಾನು ಮಾಡಿದ ತಪ್ಪಿಗೆ ನಾನೇ ಬಹಳ ನಾಚಿಕೆಪಟ್ಟು, ಅವಳ ಮೋರೆ ನೋಡುತ್ತಿರಲಿಲ್ಲ. ಅವಳೂ ನನ್ನ ಮೋರೆಯನ್ನು ಚಿರಕಾಲ ನೋಡಲಿಲ್ಲ. ಒಂದು ವರ್ಷದ ಮೇಲೆ ಅವಳು ತನ್ನ ಮ...

ನನ್ನ ಚಿಕ್ಕತಂದೆಯವರಿಗೆ ನನ್ನೊಡನೆ ಉಳುಕೊಳ್ಳುವುದು ಸಮಾಧಾನವಾಗುತ್ತಿರಲಿಲ್ಲ. ನನ್ನ ಅಡಿಗೆಯವನಾದ ಮುದ್ದಣ್ಣನ ಬಲಾತ್ಕಾರಕ್ಕೆ ಅವರು ಒಂದು ತಿಂಗಳುವರೆಗೆ ನಮ್ಮೊಟ್ಟಿಗೆ ಇದ್ದರು. ಮುದ್ದಣ್ಣನು ಎಂದಿನಂತೆ ಅವರ ಪರಿಚಾರಕನಾಗಿದ್ದನು. ಕೊನೆಗೆ ಚಿಕ್...

ನನ್ನ ಚಿಕ್ಕತಾಯಿ ನಮ್ಮಿಬ್ಬರನ್ನು ತನ್ನ ಮನೆಯಲ್ಲಿ ಬಿಟ್ಟು ಈ ಲೋಕದಿಂದ ದೂರಳಾದಳು. ಅವಳು ಸ್ಪರ್ಗಕ್ಕೆ ಹೋದಳೋ ನರಕಕ್ಕೆ ಬಿದ್ದಳೋ ನನ್ನಿಂದ ಹೇಳಲು ಸಾಧ್ಯವಿಲ್ಲ. ಸ್ವರ್‍ಗದ ಸೋಪಾನಗಳು ಸಾವಿರವಾದರೆ, ಅವನ್ನೆಲ್ಲಾ ಹತ್ತುವಷ್ಟು ದೇಹಶಕ್ತಿ ಅವಳಲ್...

ನನ್ನ ತಂದಗೆ ನಾನೊಬ್ಬನೇ ಮಗನು. ನನ್ನ ತಂದೆ ತಾಯಿಗಳು ನನ್ನನ್ನು ಮದುವೆ ಮಾಡದೆ ತೀರಿಹೋದರು. ಆ ದಿನ ಮೊದಲ್ಗೊಂಡು. ನಾನು ನನ್ನ ಚಿಕ್ಕಪ್ಪನ ಮನೆಯಲ್ಲಿದ್ದೆನು. ನನ್ನ ಚಿಕ್ಕತಾಯಿಯನ್ನು ನೋಡಿದರ, ನನಗೆ ಮೈಯೆಲ್ಲ ಉರಿಯುತ್ತಿತ್ತು. ಆದರೆ ಅದನ್ನು ತ...

ಕೆಲವು ವರ್ಷಗಳ ಹಿಂದ ಲಕ್ಷಣಾವತಿಯಲ್ಲಿ ೧೭ನೆಯ ವರ್ಗದ ದೇಶೀಯ ಸಿಪಾಯರ ದಂಡು ಇದ್ದಿತು. ಸಿಪಾಯರ ಮನೆಗಳು ‘ಮೈದಾನಿನಲ್ಲಿ’ ಕಟ್ಟಿದ್ದುವು; ಹಾಗೂ ಸೈನ್ಯದ ಅಧಿಕಾರಿಗಳ ‘ಬಂಗ್ಲೆಗಳು’ ಜನರಲ್ ಸಾಹೇಬರ ಮತ್ತು ಕರ್ನಲ್ ಸಾಹೇಬರ ‘ಬಂಗ್ಲೆಗಳು’ ‘ಲೆಫೆನೆಂ...

ವಲ್ಲಭಾಚಾರ್ಯರು ೧೮೬೨ರಲ್ಲ ಕಮಲಪುರದ ಅಮಲ್ದಾರರಾಗಿದ್ದರು. ಆ ಕಾಲದಲ್ಲಿ ಜನಗಳಿಗೆ ಕುಂಪಣಿ ಸರಕಾರದಲ್ಲಿ ಹುದ್ದೆ ದೊರಕುವುದಕ್ಕೆ ಅಷ್ಟೊಂದು ತೊಂದರ ಇರಲಿಲ್ಲ. ಜನಗಳಲ್ಲಿ ಸಾಕಷ್ಟು ಅನುಕೂಲತೆ ಇದ್ದಿತ್ತು; ಹೊಟ್ಟೆ ತುಂಬಾ ಉಂಡು ಕೂತುಕೊಳ್ಳಬಹುದಾದ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...