ಹನಿಗವನ ಚುನಾವಣೆ ಜರಗನಹಳ್ಳಿ ಶಿವಶಂಕರ್ July 19, 2020January 6, 2020 ಸಸ್ಯ ರಾಶಿಯು ಪ್ರತಿ ಹೇಮಂತ ಋತು ಮಾನದಲ್ಲು ಹಣ್ಣೆಲೆಗಳ ಮತದಾನ ಮಾಡಿ ದಕ್ಷ ವಸಂತ ರಾಜನನ್ನು ಚುನಾಯಿಸಿಕೊಳ್ಳುತ್ತವೆ ***** Read More
ಹನಿಗವನ ಸಂಬಂಧ ಜರಗನಹಳ್ಳಿ ಶಿವಶಂಕರ್ July 12, 2020January 6, 2020 ಇಳೆಗು ಮಳೆಗು ಮದುವೆ ಕಣ್ಮರೆಯಾದರೆ ಮಳೆ ಇಳೆ ವಿಧವೆ ***** Read More
ಹನಿಗವನ ಸುಧಾರಣೆ ಜರಗನಹಳ್ಳಿ ಶಿವಶಂಕರ್ July 5, 2020January 6, 2020 ಹೊಂಗೆ ಬೇವು ನಿಂಬೆ ಮಾವು ತುಂಬೆ ಹೂವು ಯಾವುದಾದರೇನು ದುಂಬಿಗಳ ಬಾಯಲ್ಲಿ ಬೆರೆತರೆ ಎಲ್ಲವೂ ಸವಿ ಜೇನು ***** Read More
ಹನಿಗವನ ಅಂತರಾಳ ಜರಗನಹಳ್ಳಿ ಶಿವಶಂಕರ್ June 28, 2020January 6, 2020 ಬೇಲಿಯ ಮೇಲಿನ ಬಡಕಲು ಬಳ್ಳಿಗಳು ಬಿರಿದು ಹೂಗಳು ಹಡೆದವು ಸೋರೆ ಕುಂಬಳ ಬೆರಗಾಗಿ ಕೊರಗಿ ಬಾಡಿ ಉದುರಿದವು ಬೀಗಿ ನಗುತ್ತಿದ್ದ ಸಂಪಿಗೆ ದಾಸವಾಳ ***** Read More
ಹನಿಗವನ ಉಳಿಕೆ ಜರಗನಹಳ್ಳಿ ಶಿವಶಂಕರ್ June 21, 2020January 6, 2020 ಗಿಡ ನನ್ನದು ಮರ ನನ್ನದು ತೋಟ ತೋಪು ಕಾಡು ನನ್ನದು ಎಂದವರ ಕೈಗೆ ಹಿಡಿಯಲು ಸಿಕ್ಕಿದ್ದು ಕೊನೆಗೆ ಒಂದು ಸಣ್ಣ ಊರುಗೋಲು ***** Read More
ಹನಿಗವನ ಬೆಳೆ ಜರಗನಹಳ್ಳಿ ಶಿವಶಂಕರ್ June 14, 2020January 6, 2020 ಮನವ ಮಣ್ಣ ಮಾಡಿ ಭಕ್ತಿಯ ಬೀಜ ಬಿತ್ತಿ ನಂಬುಗೆಯ ಮಳೆಗರೆದರೆ ಮರವಾಗಿ ಫಲಿಸಿತ್ತು ನೋಡಾ ಮುಕ್ತಿ ***** Read More
ಹನಿಗವನ ಆಶಯ ಜರಗನಹಳ್ಳಿ ಶಿವಶಂಕರ್ June 7, 2020April 18, 2020 ಬೇಲಿ ಭ್ರಮಿಸುತ್ತೆ ಬೇರ್ಪಡಿಸಿದಂತೆ ಮನುಜರನ್ನು ಮನ ಮನೆಗಳನ್ನು ಅವರ ನಾಡನ್ನು ಬಳ್ಳಿ ಹಬ್ಬಿಕೊಳ್ಳುತ್ತೆ ಆಶ್ರಯಿಸಿ ಬೇಲಿಯನ್ನು ಸ್ನೇಹದ ಸೇತುವೆಯಾಗಿ ಹೊಮ್ಮಿಸುತ್ತೆ ಹೂಗಳನ್ನು ***** Read More
ಹನಿಗವನ ಪರಿಣಾಮ ಜರಗನಹಳ್ಳಿ ಶಿವಶಂಕರ್ May 31, 2020January 6, 2020 ಹೊಲಸು ನೀರು ಹರಿವ ಕಡೆ ಹಲಸು ಹಣ್ಣಾಗಿ ಊರಿಗೆ ತುಂಬಿತು ಪರಿಮಳ ಗಂಗೆ ತುಂಗೆ ಕಾವೇರಿ ಮಿಂದು ಬಂದರು ಕಳೆದು ಹೋಗಲಿಲ್ಲ ಮನದ ಮಡಿ ಮೈಲಿಗೆ ಆಚಾರ ವಿಚಾರ ***** Read More
ಹನಿಗವನ ಕರುಣೆ ಜರಗನಹಳ್ಳಿ ಶಿವಶಂಕರ್ May 24, 2020January 6, 2020 ಎಲ್ಲ ಕಾಳುಗಳಲ್ಲಿ ಇರುವುದಿಲ್ಲ ಎಣ್ಣೆ ಎಲ್ಲ ಹಾಲುಗಳಲ್ಲಿ ಬರುವುದಿಲ್ಲ ಬೆಣ್ಣೆ ಹಾಗೆ ಎಲ್ಲ ನೋಟಗಳ ಹಿಂದೆ ಇರುವುದಿಲ್ಲ ಕರುಣೆ ***** Read More
ಹನಿಗವನ ಅಗತ್ಯ ಜರಗನಹಳ್ಳಿ ಶಿವಶಂಕರ್ May 17, 2020January 5, 2020 ಹೆಮ್ಮರದಿಂದ ಕೆತ್ತಿದ ಬುಗುರಿ ತಿರುಗಲುಬೇಕು ಸಣ್ಣ ಹತ್ತಿಯ ಗಿಡದ ಹೊಸೆದ ಹುರಿ ***** Read More