ಕಾನನವಿಲ್ಲದೆ ಆನೆಯೆಂತು? ಕೃಷಿಯೆಂತು?

ಆನೆ ದಂತದವೊಲಾಯ್ತಲಾ ಕೃಷಿ ಭೂಮಿ ಯನು ನಿವೇಶನಕೆಂದು ಮಾರಿದೊಡುಂಟು ಘನ ಬೆಲೆಯದನು ಉತ್ತು ಬಿತ್ತಿದೊಡೆ ಆನೆ ಸಾಕಿದಂದದಲಿ ಬರಿ ಖರ್ಚು ಮಾನಿಸೆಲೋ ಕಾನನವನತಿ ತುರ್‍ತಿನಲಿ - ವಿಜ್ಞಾನೇಶ್ವರಾ *****
ವಚನ ವಿಚಾರ – ಸಂಬಂಧ

ವಚನ ವಿಚಾರ – ಸಂಬಂಧ

ಕೈ ಕೈದ ಹಿಡಿದು ಕಾದುವಾಗ ಕೈದೊ ಕೈಯೊ ಮನವೊ ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ ಅಂಗವೊ ಲಿಂಗವೊ ಆತ್ಮನೊ ಕಾಲಾಂತ ಭೀಮೇಶ್ವರಲಿಂಗವನರಿದುದು [ಕೈದ-ಆಯುಧವನ್ನು] ಡಕ್ಕೆಯ ಬೊಮ್ಮಣ್ಣನ ವಚನ. ಇದು ಕುತೂಹಲಕರವಾದ ಪ್ರಶ್ನೆಯೊಂದನ್ನು ಕೇಳುತ್ತಿದೆ. ಆಯುಧ...

ಆರೆಂದರೀ ಸಾವಯವದೊಳೆಲ್ಲ ಬರಿ ಲಾಭವೆಂದೆನುತ?

ಆರೋಗ್ಯ, ಐಶ್ವರ, ಅವಕಾಶವಿಹುದಿಲ್ಲಿ ಹಿರಿದು ಸಾವಯವವೆಂದರದು ಬರಿದು ಒರೆದು ನೋಡಿದರಿದಕೆ ಹಿರಿ ಸಾಕ್ಷಿ ಸಿಗದು ತರತಮವು ವರ ಬರವು ಜಗದ ಸೂತ್ರವಿದ ನರಿದು ಮಾಡುವ ತಪದ ಪರಿ ಸಾವಯವ - ವಿಜ್ಞಾನೇಶ್ವರಾ *****
ವಚನ ವಿಚಾರ – ಅಸಹಾಯಕ

ವಚನ ವಿಚಾರ – ಅಸಹಾಯಕ

ಕೆಸರಲ್ಲಿ ಬಿದ್ದ ಬಡಪಶುವಿನಂತೆ ಆನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನೆ ಅಯ್ಯಾ ಆರೈವವರಿಲ್ಲ ಅಕಟಕಟಾ ಪಶುವೆಂದೆನ್ನ ಕೂಡಲ ಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ [ಆನು-ನಾನು, ಆರೈವರಿಲ್ಲ-ಆರೈಕೆಮಾಡುವವರಿಲ್ಲ] ಬಸವಣ್ಣನ ಈ ವಚನ ಅಸಹಾಯಕತೆಯನ್ನು ಕುರಿತದ್ದು. ಈ ವಚನವನ್ನು ಕುರಿತು...

ಅರಿತೊಡಾ ಮರಕು ಗೊಬ್ಬರಕು ಅಂತರವದೇನು?

ಮರತಾನೊಲಿದು ಕೊಟ್ಟುದನುಂಡು ಬೆಳೆವೆಮ್ಮ ಶರೀರದೊಳು ಹಿರಿದಂಶ ಬರಿ ಗೊಬ್ಬರವಾಗುತಿರಲಿದ ನರಿದು ತ್ವರಿತದೊಳು ವಿಲೆವಾರಿ ಮಾಡಲೆಲ್ಲೆಡೆಗು ಆರೋಗ್ಯ. ಮಲ ಮರಕೊದಗಲದು ಜಗದ ಭಾಗ್ಯ ನಿರವಯವ ಗೊಬ್ಬರದುಬ್ಬರ ರೋಗದೊಳೆಲ್ಲೆಲ್ಲೂ ತ್ಯಾಜ್ಯ - ವಿಜ್ಞಾನೇಶ್ವರಾ *****
ವಚನ ವಿಚಾರ – ಸಾವು?

ವಚನ ವಿಚಾರ – ಸಾವು?

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು. ನೋಡಾ ಅಯ್ಯಾ ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾ ಅಲ್ಲಮನ ವಚನ. ಈ ವಚನ ಅನೇಕ ವರ್ಷಗಳ ಹಿಂದೆಯೇ, ಅದು...

ಉದ್ಯೋಗದೊಳುನ್ನತದುದ್ಯೋಗ ಕೃಷಿಯಲ್ಲದಿನ್ನೇನು?

ಜಾಬೆಂಬಾಗ್ಲ ಪದಕೆಮ್ಮ ಉದ್ಯೋಗವೆಂಬುದೆಂದೆಂದುಂ ಬದಲಿ ಪದವಲ್ಲವಿದರರ್ಥದೌನ್ನತ್ಯವದಕಿಲ್ಲ ಜಾಬೆಂದರೆಮ್ಮ ಪ್ರಕೃತಿಯನರ್ಥ ಲಾಭಕೊಳಪಡಿಸುವುದು ಉದ್ಯೋಗದೊಳೆಮ್ಮ ಬುದ್ಧಿ ಮೈ ಮನಗಳನ್ನದೊಳೊಂದಾಗಿ ಲಾಭದರ್‍ಥವನುನ್ನತದ ಕೃಷಿಗೇರಿಪುದು - ವಿಜ್ಞಾನೇಶ್ವರಾ *****
ವಚನ ವಿಚಾರ – ಗುರು ಶಿಷ್ಯರು

ವಚನ ವಿಚಾರ – ಗುರು ಶಿಷ್ಯರು

ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ಕಲಿಯುಗದಲ್ಲಿ...

ಆರಂಭವೇ ಇಷ್ಟು ದುಬಾರಿಯಾದರೆ ಅಂತ್ಯವಿನ್ನೆಂತು?

ಆರಣ್ಯಿಕವೆಮ್ಮ ಸಂಸ್ಕೃತಿಯು ಕಾಡೊಳ ಗರಿತು ಬದುಕುವ ಕಲೆಯು. ಕಾಡ ಕಳೆಗಳೆಡೆಯಲ್ಲಿ ಆರಂಭ ಎನುತಷ್ಟಿಷ್ಟು ಕಳೆಯ ಕೀಳುವ ಕಲೆಯು ಬರ ಬರುತಾರಂಭವೀ ಪರಿವೇಷದೊಳಂತ್ಯವನು ದೂರಿಡಲೆಳಸುವಾಸ್ಪತ್ರೆವೊಲ್ ದುಬಾರಿಯಾಯ್ತಲಾ - ವಿಜ್ಞಾನೇಶ್ವರಾ *****
ವಚನ ವಿಚಾರ – ಕಾಲಿಲ್ಲದ ಕುದುರೆ

ವಚನ ವಿಚಾರ – ಕಾಲಿಲ್ಲದ ಕುದುರೆ

ಕಾಲಿಲ್ಲದ ಕುದುರೆಯೇರಿ ರಾವುತಿಕೆಯ ಮಾಡಬೇಕು ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಸಾಡಬಲ್ಲಡೆ ಇಹಲೋಕಕ್ಕೆ ವೀರನೆಂಬೆ ಪರಲೋಕಕ್ಕೆ ಧೀರನೆಂಬೆ ಆಮುಗೇಶ್ವರಲಿಂಗಕ್ಕೆ ಅಧಿಕನೆಂಬೆ [ರಾವುತಿಕೆ-ಕುದುರೆಯ ಸವಾರಿ, ಧೀರ-ವಿವೇಕಿ, ಅಧಿಕ-ಹೆಚ್ಚು, ಮಿಗಿಲು] ಆಮುಗೆ ರಾಯಮ್ಮನ ವಚನ...