ಲಿಂಗಮ್ಮನ ವಚನಗಳು – ೫೧

ಘಟವೆಂಬ ಮಠದೊಳಗೆ ಮನವೆಂಬ ಮರ ಹುಟ್ಟಿತ್ತು. ಬೇರುವರಿಯಿತ್ತು. ಅದಕೆ ಶತಕೋಟಿ ಶಾಖೆ ಬಿಟ್ಟಿತ್ತು. ಆಸೆ ಬೆಂಬಳಿಗೊಂಡು, ಆಡುವರೆಲ್ಲ ಮುಂದುಗಾಣದೆ, ಸಂದು ಹೋದರು. ನಮ್ಮ ಶರಣರು ಇದನರಿದು, ಹಿಂದೆ ನೋಡಿ, ಮುಂದೆ ಲಿಂಗದಲ್ಲಿ ಬೆರೆದ ಭೇದವ...

ಲಿಂಗಮ್ಮನ ವಚನಗಳು – ೫೦

ಕಂಗಳ ಮುಂದಣ ಬೆಳಗ ಕಾಣದೆ, ಕಂಡಕಂಡವರ ಹಿಂದೆ ಹರಿದು, ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ! ತನ್ನಲ್ಲಿ ತಾ ಸುಯಿಧಾನಿಯಾಗಿ ನೋಡಲರಿಯದೆ, ಭಿನ್ನಗಣ್ಣಿಲಿ ನೋಡಿಹೆನೆಂದು ತಮ್ಮ ಮರೆದು ಇನ್ನುಂಟೆಂದು ಅರಸುವ ಅಣ್ಣಗಳಿರಾ ನೀವು ಕೇಳಿರೋ,...

ಲಿಂಗಮ್ಮನ ವಚನಗಳು – ೪೯

ಮನವ ನಿಲ್ಲಿಸಿಹೆನೆಂದು, ಆ ಮನದ ನೆಲೆಗಾಣದೆ ಅರು ಹುಮರವೆಗೊಳಗಾಗಿ, ಕಳವಳ ಮುಂದುಮಾಡಿ, ಚಿಂತೆ ಸಂತೋಷವ ನೋಡಲು, ಭ್ರಾಂತಿಗೊಂಡು ತಿರುಗುವ ಮನುಜರಿರಾ ನೀವು ಕೇಳಿರೋ. ಮನವ ನಿಲ್ಲಿಸುವುದಕ್ಕೆ ಶರಣರ ಸಂಗ ಬೇಕು. ಜನನ ಮರಣವ ಗೆಲಿಯಬೇಕು....

ಲಿಂಗಮ್ಮನ ವಚನಗಳು – ೪೮

ರಸ ಒಡೆದಂತೆ, ದೆಸೆದೆಸೆಯನಾಲಿಸುವ ಮನವ ತನ್ನ ವಶವ ಮಾಡಿ ನಿಲಿಸಿ, ಹುಸಿಯ ಬಿಟ್ಟು, ಮಾಯೆಯ ಬಲಿಯ ನುಸುಳಿ ತಾ ನಿಶ್ಚಿಂತನಾಗಿ, ದೀರವೀರನಾದಲ್ಲದೆ ಆ ಮಹಾ ಘನವ ಕಾಣಬಾರದು ಎಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಲಿಂಗಮ್ಮನ ವಚನಗಳು – ೪೭

ನಿರಾಳ ಲಿಂಗವ ಕಾಂಬುದಕ್ಕೆ ಮನ ಮತ್ತೊಂದೆಡೆಗೆ ಹರಿಯದಿರಬೇಕು. ನೆನಹು ಲಿಂಗವಲ್ಲದೆ ಮತ್ತೊಂದ ನೆನೆಯದಿರಬೇಕು. ತನುವಿನಲ್ಲಿ ಮರಹಿಲ್ಲದಿರಬೇಕು. ಕಾಳಿಕೆ ಹೋಗದಿರಬೇಕು. ಇಂತು ನಿಶ್ಚಿಂತವಾಗಿ, ಚಿತ್ತಾರದ ಬಾಗಿಲವ ತೆರೆದು, ಮುತ್ತುಮಾಣಿಕ ನವರತ್ನ ತೆತ್ತಿಸಿದಂತಿರುವ ಮೇಗಳ ಶಿವಾಲಯವ ಕಂಡು,...

ಲಿಂಗಮ್ಮನ ವಚನಗಳು – ೪೬

ಮನ ಕತ್ತಲೆ, ತನು ಹಮ್ಮು, ನೆನಹು ಮರವೆ, ಇವರೊಳಗೆ ಇದ್ದುಗನವ ಕಂಡಿಹೆನೆಂಬ ಅಣ್ಣಗಳಿರಾ ನೀವು ಕೇಳೀರೋ, ಘನವಕಾಂಬುದಕ್ಕೆ ಮನವೆಂತಾಗಬೇಕೆಂದರೆ, ಅಕ್ಕಿಯ ತಳಿಸಿದಂತೆ, ಅಲ್ಲ ಸುಲಿದಂತೆ, ಕನ್ನಡಿಯ ನೋಡಿದಂತೆ, ಮನ ನಿರ್ಮಳವಾದಲ್ಲದೆ, ಘನವ ಕಾಣಬಾರದು ನಮ್ಮ...

ಲಿಂಗಮ್ಮನ ವಚನಗಳು – ೪೫

ಅಯ್ಯ ನಿಮ್ಮ ಚರಣವಿಡಿದು, ಮನವ ನಿಲಿಸಿದೆ. ತನುವ ಮರೆದೆ. ಮಹಾಘನವ ಕಂಡೆ. ಲಿಂಗದ ನೆಲೆವಿಡಿದೆ. ಅಂಗ ಲಿಂಗವೆಂದು ನೋಡಲು, ಕಂಗಳ ಮುಂದಣ ಬೆಳಗೆ ಲಿಂಗವಾಗಿ, ಆ ಕಂಗಳ ಮುಂದಣ ಬೆಳಗ ನೋಡಿಹೆನೆಂದು, ಸಂಗಸುಖವ ಮರೆದು,...

ಲಿಂಗಮ್ಮನ ವಚನಗಳು – ೪೪

ತನುವೆಂಬ ರಾಜ್ಯಕ್ಕೆ ಮನವೆಂಬ ಅರಸು. ಅರಸಿಂಗೆ ನೋಟ ಬೇಟದವರಿಬ್ಬರು. ಅಟ್ಟು ಮಣಿಹ ಹರಿಮಣಿಹದವರು. ಅವರು ಸುತ್ತ ಓಲೈಸುವರು ಇಪ್ಪತೈದು ಮಂದಿ. ಅವರಿಗೆ ಕತ್ತಲೆ ಬಲೆಯ ಬೀಸಿ ಕೆಡಹಿ, ಅರಸಿನ ಗೊತ್ತುವಿಡಿದು, ಪುರವನೇರಿ, ನಿಶ್ಚಿಂತವಾಗಿ, ನಿಜದಲ್ಲಿ...

ಲಿಂಗಮ್ಮನ ವಚನಗಳು – ೪೩

ಮನ ನಿರ್ಮಳವ ಮಾಡಿದೆನೆಂದು, ತನುವ ಕರಗಿಸಿ, ಮನವ ಬಳಲಿಸಿ, ಕಳವಳಿಸಿ, ಕಣ್ಣು ಕಾಣದೆ ಅಂಧಕರಂತೆ ಮುಂದು ಗಾಣದೆ, ಸಂದೇಹದಲ್ಲಿ ಮುಳುಗಿರುವ ಮನುಜರಿರಾ. ನೀವು ಕೇಳೀರೋ, ಹೇಳಿಹೆನು. ಆ ಮನವ ನಿರ್ಮಳವ ಮಾಡಿ, ಆ ಘನವ...

ಲಿಂಗಮ್ಮನ ವಚನಗಳು – ೪೨

ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವನೆ ಅಳಿದು, ಲಿಂಗಗುಣವನೆ ನಿಲಿಸಿ, ಭಾವವಳಿದು ಭವಕೆ ಸವಿದು, ಮಹಾ ದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು ಅಪ್ಪಣಪ್ರಿಯ ಚನ್ನಬಸವಣ್ಣ? ***** ಸಂಗ್ರಹ: ರಾ|| ಸಾ|| ಫ....