ನೀಛಾಗ್ರೇಸರ

ಮುದ್ದಾದ ಕುರಿಮರಿಯ ತರುವೆ ಬೆಳೆಸುವೆ ಕಕ್ಕುಲತೆಯಲಿ ಕೇಳೀತೆ ಹಸಿವೆಂದು ಬೆಬ್ಬಳಿಸಿಯಾತೆ ಬಾಯಾರಿಕೆಯೆಂದು ಮೊರೆದೀತೆ ದೇಹಾಲಸ್ಯವೆಂದು ನಮ್ಮಂತೆಯೇ ಅಲ್ಲವೆ ಅದರದೂ ಜೀವವೆಂದು. ಸಗಣಿ ಬಾಚುವೆ ಮೈಯ ತೊಳೆಯುವೆ ಕೈಯಾರೆ ತಿನ್ನಿಸಿ, ಕುಣಿಸಿ, ಆಡಿಸಿ ಒಂದು ಹೆಸರೂ...

ಶಿರೀಷ

ಶಿರೀಷ ಹೇಳಲರಿಯದ ಆನಂದದ ಆವಿರ್ಭಾವವಾಗುವುದು ತೇಲಿ ಬರುವ ನಿನ್ನ ಮೂರ್ತಿಯನ್ನು ಕಂಡಾಗ, ಯೋಜಿಸುವುದು ಮನಸು ಸಾರಿ ಬರ ಸೆಳೆದು ಆಲಂಗಿಸಲೇ ಕಂಡು ಕಣ್ಣಿನಲ್ಲಿಯೇ ಹೀರಿ ಎದೆಯಲ್ಲಿ ಹಿಡಿದಿಟ್ಟುಕೊಳ್ಳಲೇ ಭದ್ರವಾಗಿ ಹೇಗೆ ? ಹೇಗೆ ತಣಿಯಲಿ...

ನನ್ನಿ ಮತ್ತು ಇನಿಯ

ಬಾ ! ನನ್ನಿ ಅಲೌಕಿಕದ ಆರೋಹಣವಾಗಿರುವುದು ಜಳಕ ಮಾಡೋಣ ಚಂದ್ರ ತಾರೆಯರ ಸಿಹಿ ಬೆಳಕ ತನುವು ಹೂವಾಗುವುದು. ಬಾ ! ನನ್ನಿ ನೀರವ ನೆರೆಯಲಿ ಲಾಸ್ಯವಾಡುವ ಮೃದು ಮದುಲ ಹೂವು ಹುಲ್ಲಿನ ನಡೆ ಮಡಿಯ...

ಇಲ್ಲದಿರೆ ಏನಿರುತ್ತೆ ?

ಎಲ್ಲಿ ಮಾಯವಾಗುವಿರಿ ಓ ಚುಕ್ಕಿ ಚಂದ್ರಮರೆ! ಹಗಲೆಲ್ಲಾ ನೀವು ಅಷ್ಟೊಂದು ಜನ... ಒಟ್ಟಿಗೆ. ರಾತ್ರಿ ಅಷ್ಟೊಂದು ಮೆರೆಯುವಿರಿ ಮೀಯಿಸಿ ಜಗವನ್ನೆಲ್ಲಾ ತನಿ ತನಿ ಹಾಲ ಬೆಳಕಿನಲಿ. ಓಹ್! ಅನುಭವಿಸಬಹುದದನು ಧಾರಾಳವಾಗಿ ವಿವರಿಸಲಾಗದು ಆ ಅಲೌಕಿಕ...

ಕೀಟನ್ಯಾಯ

ತರು ಲತೆ ಗಂಡು ಹೆಣ್ಣಂತೆ ಒಂದಕ್ಕೊಂದು ಶೃಂಗಾರ, ಅವಶ್ಯಕವಲ್ಲವೆ ! ಅಪ್ಪಿದವು ಸಂಸಾರ ಶುರುವಾಯಿತು. ಬಳ್ಳಿ ಲಲನೆ ನೆಲದೊಳಗೆ ಬೇರಿಳಿಸದೆ ಪ್ರಿಯಕರ ತರುವಿನೊಳಗಿಳಿಸಿ ನಖ ಶಿಖಾಂತ ಆನಕೊಂಡಾದ ರೀತಿ ಬಿಗಿದು ಸತ್ವ ಹೀರಿ ಹೀರಿ...

ಮುಂಜಾವು

ಕತ್ತಲೆ ಮುಸುಗು ಮೆಲ್ಲ ಮೆಲ್ಲಗೆ ಬಿಗಿತ ಕಳೆಯುತಿತ್ತು ಒಳಗಿಂದೊಳಗೆ ಬೆಳಕಿನ ತೆನೆಯು ಕಾಳುಗಟ್ಟುತಿತ್ತು. ರಾತ್ರಿ ಬೆಳಗಿದ ಚುಕ್ಕಿ ಚಂದ್ರರ ಬೆಳ್ಳಿ ಕರಗುತಿತ್ತು ಲೋಕಾದ ಲೋಕವೆಲ್ಲ ಹಿತಕರ ತಂಪಿನ ಮಾಡು ಹೊದಿಯುತಿತ್ತು. ಅಮೃತ ನಿದ್ದೆ ತೆಕ್ಕೆಯ...

ನಿಶೆ

ಉರಿದುರಿದು ದಣಿದ ರವಿ ಮರೆಯಾದ ದಿನದ ದುಡಿಮೆಗೆ ತೆರೆ ಎಳೆದು ಹೋದ. ಅಭಿಮುಖವಾದವು ಯಾವಜ್ಜೀವ ಪಶು ಪಕ್ಷಿಗಳು ಗೂಡುಗಳ ಕಡೆಗೆ. ಕಣ್ಣು ತೆರೆದಳು ನಿಶೆ ನಭವು ತುಂಬಿ ಹೋಯಿತು ಮಲ್ಲಿಗೆ ಹೂವುಗಳಿಂದ. ಕರೆಸಿದಳು ಮಾರುತನ...

ಚೋದ್ಯದ ಹುಡುಗಿ

ಏನು ಚೋದ್ಯ ಮಾಡಿದೆ ಹುಡುಗಿ ಏನು ಚೋದ್ಯ ಮಾಡಿದೆ. ಬಟ್ಟೆ, ಬಗೆ ಹಾವ, ಭಾವ ಒಟ್ಟಾರೆ ಶೈಲಿ ಬದಲಿಸಿ ಬಿಟ್ಟೆ. ಹೊಟ್ಟೆಯೊಳಗೆ ಹಾಲು ಹುಯ್ದು ಬೆಟ್ಟದಷ್ಟು ಆಸೆ ಹುಟ್ಟಿಸಿ ಜೀವನ ದೃಷ್ಟಿ ಬದಲಿಸಿ ಬಿಟ್ಟೆ....

ವೇದನೆ

ನನ್ನೊಳಗೆ ನಾನಿಲ್ಲ ವೇದನೆ ತಾಳಲಾಗುತ್ತಿಲ್ಲ. ಸತ್ಯವನು ದರ್ಶಿಸಿ ಸಾರಿ, ಸಾರಿ ನಿಲಿಸಲು ಆಗುತ್ತಿಲ್ಲ. ನನಗೇ ನಾನು ವ್ಯರ್ಥನೆನಿಸುತ್ತಿದೆ. ಸುತ್ತಲಿನ ಕತ್ತಲಿನಲಿ ಕರಗಿ ಹೋಗುತ್ತಿದ್ದೆನೇನೋ... ಎನಿಸುತಿದೆ. *****

ದೀಪ

ದೀಪ ಬಾಳಿನ ಸಂಜ್ಞಾರೂಪ. ಬುದ್ಧಿ ಉಪಯೋಗಿಸಿ ತೆರೆ ಮರೆ ಮಾಡಿ ಜೋಪಾನ ಮಾಡಿ ಬೆಳಗುತ್ತದೆ; ಆನಂದ ತರುತ್ತದೆ. ಅಜಾಗರೂಕರಾಗಿ ಕೆಟ್ಟಗಾಳಿ ತುಸುವೆ ಒಳ ತೂರಲು ಬಿಟ್ಟಿರಿ ಅಂಕೆ ಶಂಕೆ ತಪ್ಪಿ ಅಡ್ಡಾದಿಡ್ಡಿ ಉರಿಯುತ್ತದೆ. ಹೊಯ್ದಾಡಿ,...