ಮತ್ತೆ ವಿಷ ಹೊರುವುದನೆ ಕೌಶಲವೆನಬಹುದೇ?

ಅತ್ತಲಾ ಹೊಟ್ಟೆಯನ್ನದ ಭಾಂಗಿಯನವರ ಬೆನ್ನಿನಲಿ ಹೊತ್ತವರು ಹೊತ್ತು ಕಳೆಯಲು ಬೆಟ್ಟವನು ಹತ್ತಿರಲಿತ್ತಲಾ ಹೊಟ್ಟೆಯನ್ನವ ಬೆಳೆವವರು ಹೊತ್ತು ಸೋತಿಹರಲಾ ವಿಷಭಾಂಡವನವರ ಬೆನ್ನಿನಲಿ ವಿತ್ತ ಚೇಷ್ಟೆಯೊಳೆಲ್ಲ ವಿಷವೆಲ್ಲರಾ ಚಿತ್ತದಲ್ಲಿ - ವಿಜ್ಞಾನೇಶ್ವರಾ *****

ಕನ್ನದ ದಾರಿಯಲ್ಲಿ ಅನ್ನ ಬದಲಿಸಿದರೆ ಅಪಾಯ ತಪ್ಪಿತೇ?

ಏನೆಂಥ ದುರ್ಗತಿಯು ಬಂದೊದಗಿತಲಾ ಹೀನವೆನುತಾ ಮಧು ಫಲಕ ಬದಲಾಗಿ ತೃಣ ಧಾನ್ಯವನೆ ಸಿರಿಧ್ಯಾನವೆನುತಾರೋಗ್ಯವನು ಕನವರಿಸುತಲದದೇ ದಿನಪನುರಿಯನೇರಿಸುವ ದಿನಚರಿಯ ಮೋಹ ಮದ್ಯದೊಳಿರಲು - ವಿಜ್ಞಾನೇಶ್ವರಾ *****

ಇಂಥಾ ಬಕಾಸುರ ಸಾಮರ್ಥ್ಯವೆಮಗ್ಯಾಕೋ?

ಒಂದಕೊಂದಿನ್ನೊಂದು ತಿಂದು ಬದುಕಿದರು ಕುಂದಿಲ್ಲದೆಲ್ಲ ವೈವಿಧ್ಯ ವೃದ್ಧಿಸುತೆ ಹಂತ ಹಂತದೊಳಭಿವೃದ್ಧಿ ಮೆರೆವೆಮ್ಮ ಪ್ರಕೃತಿ ಯಂತರಂಗವದೇನು? ಬಿಂಬವನೆ ಕೊಂ ದುಂಬ ಪ್ರತಿಬಿಂಬವನಿಲ್ಲ ಸೃಜಿಸಿತಲಾ - ವಿಜ್ಞಾನೇಶ್ವರಾ *****

ರುಚಿಯನೆಲ್ಲಿ ಹುಡುಕುವಿರಿ? ದುಡಿದುಂಬ ಹಸಿವಿಲ್ಲದಿರೆ?

ರುಚಿಗೆಂದು, ಹೊಸತೆಂದು ಏನ ಮಾಡಿದೊಡೇನು? ರುಚಿ ಇಹುದು ಹಸಿದುಣುವ ದುಡಿಮೆಯೊಳದುವೆ ಖಚಿತದೊಳನುದಿನವು ಹೊಸತನಿಕ್ಕುತಿರೆ ಅರಸುತ ಲಾಚೀಚಲೆವೆಮ್ಮವಸರದೊಳ್ ಕಳೆದು ಹೋಗಿಹುದಾ ಪಚನ ರಸಶಕ್ತಿಯೊಡಗೂಡಿ ಪ್ರಕೃತಿ ಯುಕ್ತಿ - ವಿಜ್ಞಾನೇಶ್ವರಾ *****

ಆ ವಿಷವು ವಿಜ್ಞಾನಿಯ ಆಯ್ಕೆಯಾಗಬಹುದೇ?

ಅಂಗಡಿಯೊಳನ್ನಾಹಾರ ದೊರಕುತಿರಲೀತನು ಆರಾಮದೊಳಲೆಯುವನೋ ಓದಿದಾತನು ಅಮೃತಕು ವಿಷಕು ಅಂತರವನರಿಯದಾತನು ಅಂತೆ ಪೇಳುವನು ತಾನು ವೈಜ್ಞಾನಿಕನು ಆಯ್ಕೆಯಾಲಿ ಕೆಡುಕನೇ ಕೊಂಡುಣ್ಣುವನು - ವಿಜ್ಞಾನೇಶ್ವರಾ *****
ಗಿಳಿಯು ಓದಿದರೇನು ಫಲ?

ಗಿಳಿಯು ಓದಿದರೇನು ಫಲ?

ಗಿಳಿಯೋದಿ ಫಲವೇನು ಬೆಕ್ಕು ಬಹುದ ಹೇಳಲರಿಯದು ಜಗವೆಲ್ಲವ ಕಾಬ ಕಣ್ಣು ತನ್ನ ಕೊಂಬ ಕೊಲ್ಲೆಯ ಕಾಣಲರಿಯದು ಇದಿರ ಗುಣ ಬಲ್ಲೆವೆಂಬರು ತಮ್ಮ ಗುಣವತಾವರಿಯರು ಕೂಡಲಸಂಗಮದೇವಾ ಗಿಳಿ ಹೇಳಿಕೊಟ್ಟದ್ದನ್ನು ಹೇಳುತ್ತದೆ, ಆಡುತ್ತದೆ. ಗಿಳಿಯ ಶಾಸ್ತ್ರವೆನ್ನುವುದು ಗಿಳಿಯು...

ತನು ಬೆವರದೆ ಅನ್ನದನುಭವ ಸಾಧ್ಯವೇ?

ಅನುಭವದಡುಗೆಗೆ ಮೂಲವದೇನು? ಅದು ಬರಿ ಮಣ್ಣು. ಮಣ್ಣಿಂದಲಾಗಿರಲೀ ಅಂದದಾ ತನುವಿದಕೆ ಮಣ್ಣಿನಾಧಾರದೊಳೆಲ್ಲ ಅನ್ನವಿರುತಿರಲು ಅನುಭವದನ್ನಕ್ಕೆ ಆ ಬೆವರಿನಾರ್‍ದ್ರತೆಯೆ ಮೂಲವಲಾ -ವಿಜ್ಞಾನೇಶ್ವರಾ *****
ಕುರುಹು

ಕುರುಹು

ಗಿಣಿಯಿಲ್ಲದ ಪಂಜರ ಹಲವು ಮಾತನಾಡಬಲ್ಲುದೆ ದೇವರಿಲ್ಲದ ದೇಗುಲಕ್ಕೆ ಮಂತ್ರ ಅಭಿಷೇಕವುಂಟೆ ಅರಿವು ನಷ್ಟವಾಗಿ ಕುರುವಿನ ಹಾವಚೆಯ ನಾನರಿಯೆನೆಂದನಂಬಿಗ ಚವುಡಯ್ಯ ಮಾತನಾಡುವುದು ಗಿಣಿ ಮಾತ್ರ, ಪಂಜರವಲ್ಲ. ಅಭಿಷೇಕ ದೇವರಿಗೇ ಹೊರತು ದೇಗುಲಕ್ಕಲ್ಲ. ಪಂಜರ, ದೇಗುಲ ಇವು...

ಮರೆತರಾ ಹಣ್ಣನೆಂತೇಮ್ಮ ಜೀವನ ಫಲವಂತವಪ್ಪುದೋ?

ಕುರಿತಾಲೋಚಿಸಿದರರಿಯುವುದು ಹಣ್ಣಿನಾ ಹಿರಿಮೆಯದನುಣ್ಣಲಿಕೆ ಬೇಕಿಲ್ಲ ಸಾರು ಸಾಂ ಬಾರು, ಅಕ್ಕಿಯನ್ನವನೆಂದಾದೊಡಂ ಉಣಲುಂಟೆ ಬರಿದು? ಸಂತೆಯಿಂದೇನನುಂ ತರದೇ ಸುಖಿಸಿ ದರದುವೆ ಫಲವಂತ ಜೀವನವು - ವಿಜ್ಞಾನೇಶ್ವರಾ *****
ಹೂವು ದುಂಬಿ

ಹೂವು ದುಂಬಿ

ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯ್ತ್ತು ತುಂಬಿ ನೋಡಾ ಆತುಮ ತುಂಬಿ ತುಂಬಿ ನೋಡಾ ಪರಮಾತುಮ ತುಂಬಿ ತುಂಬಿ ನೋಡಾ ಗುಹೇಶ್ವರನೆಂಬ ಲಿಂಗಕ್ಕೆರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ ಹೂವಿಗೆ ದುಂಬಿ ಎರಗಿದರೆ ದುಂಬಿ ಮಧುವನ್ನು...