ಯೋಗ ಬೇಕಲ್ಲವೇ? ಇಳೆಯ ಕಳೆಯ ಕಾಣಲು

ಬಿಗುವನೆಲ್ಲವ ಹಗುರ ಮಾಡುವ ನಗುವೆ ನೆಲದ ನೆಕ್ಕರೆಯಾಗಿ ಚಿಗುರಿಹುದಿಲ್ಲಿ ನೋಡಾ ತಂಬುಳಿ ಗಾಗಿ ಹೊಟ್ಟೆಯುರಿ ಕಳೆವನು ರಾಗಿ ನಗಲೆಂದೆಲ್ಲರೊಂದಾಗಿ - ವಿಜ್ಞಾನೇಶ್ವರಾ *****

ಎಲ್ಲ ರೋಗದ ಮೂಲ ಮಾಲಿನ್ಯವೆಲ್ಲಿಹುದು ಗೊತ್ತಾ?

ಮೂಲ ಪ್ರಕೃತಿಯನಾಂತು ನೋಡಿದೊಡರಿಯುವುದು ಶಾಲ್ಯ ಧಾನ್ಯಗಳೆಮಗಲ್ಲ, ಹಕ್ಕಿಗಳಾಹಾರವದು ಸುಲಿದಂತುಣಲಪ್ಪ ಹಣ್ಣುಗಳೆಮ್ಮ ಪಾಲಿನದು ಹುಲ್ಲೆಯನುಣುವ ಹುಲಿಯೆಂದು ಹುಲ್ಲುಣದು ಮಲಬದ್ಧತೆಯ ಪೇಟೆ ಬೆಳೆದಿಹುದೀ ಕಾರಣದಿ - ವಿಜ್ಞಾನೇಶ್ವರಾ *****

ವಿತ್ತವೆಂದತ್ತಿತ್ತ ಹೋದರೆ ಸತ್ಯ ಸಾಯದೇ?

ಸತ್ಯವನು ಎತ್ತಿ ತೋರುವ ಬೆಳಕನೊಡೆದಲ್ಲಿ ಸ್ತುತ್ಯದ ಹಸುರಿಹುದದರ ಮಧ್ಯದಲಿ ಎತ್ತಿ ಹೇಳುವುದೆಮ್ಮ ಬದುಕಿನ ಸತ್ಯವಿಹುದಿಲ್ಲಿ ಅತ್ತ ಕೆಂಪೇರಿ ಗರ ಬರ ಬಾರದಿರಲಿ ಇತ್ತ ನೀಲಿಮದ ನೆರೆಯೇರದಿರಲಿ - ವಿಜ್ಞಾನೇಶ್ವರಾ *****

ಏನದಾತುರವೋ ಯಮನ ಮನೆಯೆಡೆಗೆ?

ಮನೆ ಮನೆಯೊಳೆಮಗೆಷ್ಟೊಂದು ಅಡುಗೆ ಯನುಕೂಲವಿರುತ್ತಿರಲೇನು ಮಲವೆದ್ದು ಘಂ ಮೈನುವ ಬೀದಿ ಬದಿಯನ್ನದಾತುರವೋ? ಮನೆ ಮಡದಿ ಮಕ್ಕಳೊಲವಿನಲಿ ಉಂಬನ್ನ ತನು ಮನವಾಗೆ ಮನೆಯೆ ಮಂದಿರವಕ್ಕು - ವಿಜ್ಞಾನೇಶ್ವರಾ *****

ಯಾರು ದೊಡ್ಡವರ್‍ಯಾರು ಬಡವರು ?

ಸುರಿದಳೆದು ಕೊಡಬಹುದು ದೊಡ್ಡವರೊಂದಷ್ಟು ತೆರಿಗೆಯದು ಸರಕಾರಕಲ್ಲದೆ ಪ್ರಕೃತಿಗ ದರೊಳಗೆ ಪಾಲಿಲ್ಲವದರಿಂದ ದಿನದಿನವು ಸೊರಗುತಿಹುದದಕಷ್ಟಿಷ್ಟು ಕೊಡುವ ವರು ಏನಿಲ್ಲದವರೆಲ್ಲರಿಗನ್ನದಾತರಾದವರು - ವಿಜ್ಞಾನೇಶ್ವರಾ *****

ಮೋಸ ಮೂಲವೆಲ್ಲಿಹುದು? ಮನಸಿನಲ್ಲೊ? ಮರಗೆಣಸಿನಲ್ಲೊ?

ಹಸಿವಿನೊಳಂದು ಗತಿಗೆಟ್ಟು ಮರಗೆಣಸು ಬೇ ಯಿಸುತುಣುತಿದ್ದೆವೆಂದು ವಿಷಾದದೊಳೆನುವರುಂಟು ವಿಷಾದವಿಂದಧಿಕ ಜನ ಮತಿಗೆಟ್ಟು ತಿನ್ವರಲಾ ಮರಗೆ ಣಸನೇಕತರ ಕಲಬೆರಕೆಗೊಳ್ಳುತಿರಲೆಮ್ಮನ್ನದೊಳು ಶಿಶು ಡಬ್ಬದೊಳದುವೆ ಇರುತಿರಲೆಲ್ಲರಾ ಬುದ್ದಿ ಕಲಬೆರಕೆ - ವಿಜ್ಞಾನೇಶ್ವರಾ *****

ಎಲ್ಲವಿದ್ದು ನಾವಿಷ್ಟಭಿಮಾನ ಶೂನ್ಯರಾಗಬಹುದೇ?

ಎಲ್ಲರೆಲ್ಲವನು ಮಾಳ್ಪುದಳವಲ್ಲವಾದೊಡಂ ಎಲ್ಲರವರವರೆ ಊಟವನು ಶೌಚವನು ಕ್ಷುಲ್ಲವೆನದರಿತು ಮಾಳ್ಪವಸರ ಉಂಟು ಎಲ್ಲೆಲ್ಲೂ ಕೊಳಚೆಯೊಳಿಪ್ಪ ಖಾನಾವಳಿಯೆಮ್ಮ ಕಲಿಕೆಯ ಸೋಲನರುಹಿ ಪೇಳುತಿದೆ - ವಿಜ್ಞಾನೇಶ್ವರಾ *****

ಅಂದಿಲ್ಲದ ಕಷ್ಟವಿಂದ್ಯಾಕೆ ಉಣ್ಣಲಿಕೆ?

ಎಂದಾದರೆಲ್ಲಾದರುಂ ತಿನಲೆಮಗಪ್ಪುದಷ್ಟೇ ಅಂದೀ ಮನುಜ ಕುಲವುದಿಸಿದಂದೆಷ್ಟೋ ಅಷ್ಟೇ ಉಂಬುದಷ್ಟಾದೊಡಂ ಹತ್ತಾರುಪಟ್ಟಧಿಕ ಕಷ್ಟ ವಿಂದದನು ಗಳಿಸಲಾ ದೂರದ ಪೇಟೆ ಯಂಗಡಿ ಸೇರಿಸಲೆಲ್ಲ ಶಕುತಿಯು ನಷ್ಟ - ವಿಜ್ಞಾನೇಶ್ವರಾ *****

ನರ ಚಿತ್ತ ವ್ಯರ್‍ಥವಲ್ಲವೇ? ಸುರೆ ಪಿತ್ತವೇರಿದರೆ?

ಇರುನೆಲದೊಳನ್ನ ದೊರೆಯುತಿರಲೇಕಿಂತು ನರನಲೆಯುವನೋ ಉದ್ಯೋಗವೆಂದೆನುತ ಊರೂರಲೆದು ಬಂದಿರ್‍ಪ ನೂರೊಂದಮೇಧ್ಯವ ನಾರೋಗಿಸಿದ ರಕುತದೊತ್ತಡದ ಶಕುತಿಯಿಂದೆಮದು ತಿರುತಿರುಗಿ ಬೇಕೆನಿಪ ಶಕುತಿ ಸುರೆಗಿಹುದು - ವಿಜ್ಞಾನೇಶ್ವರಾ *****

ಶುದ್ಧ ಸುಳ್ಳಲ್ಲವೇ? ಯುದ್ಧದೊಳು ಗೆಲುವೇನು?

ಅಧಿಕ ಇಳುವರಿಗೆಂದೇನೇನೋ ಮಾಡುತಲಿರಲು ಅಧಿಕವಾಗಿಹುದಲಾ ಎಮ್ಮೊಳಗೆ ರೋಗರುಜಿನಗಳು ಬದನೆ ಬೆಂಡೆಯೊಳಿದ್ದ ರೋಗವನಲ್ಲಿಂದಲೋಡಿಸ ಲದುವೆ ಬಂದಡರಿಹುದೆಮ್ಮ ತನುವಿನೊಳು ಕಾದುವಾ ವಿಷವದರ ಹಿಂದು ಹಿಂದಿನೊಳು - ವಿಜ್ಞಾನೇಶ್ವರಾ *****