Home / ಹನಿ ಕತೆ

Browsing Tag: ಹನಿ ಕತೆ

ಅವಳು ಮದುವೆಯಾದ ಹೊಸದರಲ್ಲಿ ಪತಿಯನ್ನು ಒಲಿಸಿಕೊಂಡು ಪ್ರೀತಿಯ ಹೆಂಡತಿಯಾದಳು. ಮಕ್ಕಳುಮರಿ ಹೊತ್ತು ಪ್ರೀತಿಯ ತಾಯಿಯಾದಳು. ಮಧ್ಯ ವಯಸ್ಸು ಧಾಟಲು ಶಕ್ತಿಗುಂದಿ ಮುಖದ ಕಳೆ ಹೋಗಿ ಬಡಕಲು ದೇಹವಾಗಿತ್ತು. ಗಂಡನಿಗೆ ಈಗ ಮುಖ್ಯವಾದದ್ದು ವ್ಯಾಪಾರ ವ್ಯವಹ...

ಜೀವನದಲ್ಲಿ ಅದೆಷ್ಟು ಲೆಕ್ಕಾಚಾರ. ಅವಳು ಪ್ರೀತಿಸುವ ಹುಡುಗನ ಶರತ್ತಿನ ಲೆಕ್ಕಾಚಾರ ಪಕ್ಕಾ ಆಗಿ ಮದುವೆ ನಿಶ್ಚಲವಾಗಲು, ಎರಡೂ ಕಡೆಯ ಬೀಗರ ಲೆಕ್ಕಾಚಾರ ಸರಿ ಹೋದಮೇಲೆ ಮದುವೆ ನಡೆದಿತ್ತು. ಇನ್ನು ತಾಯಿ ಯಾಗುವ ಹಂಬಲಕ್ಕೆ ಮತ್ತೆ ಲೆಕ್ಕಾಚಾರ ಶುರುವಾ...

ಅವಳು ಮುಂಜಾನೆ ಎದ್ದು ಜಳಕ ಮಾಡಿ ಕನ್ನಡಿ ಮುಂದೆ ನಿಂತಳು. ಕಣ್ಣಲ್ಲಿ ಕಾಂತಿ, ಮುಖದಲ್ಲಿ ಹೊಳಪು, ಮನದಲ್ಲಿ ಶಾಂತಿ ಮೂರೂ ಅವಳಿಗೆ ಕನ್ನಡಿಯಲ್ಲಿ ಕಂಡಿತು. ನಾನು ಎಷ್ಟು ಆರೋಗ್ಯವಂತೆ ಎಂದುಕೊಂಡಳು. ವೃತ್ತ ಪತ್ರಿಕೆ ಓದಲು ಆರಾಮವಾಗಿ ಕುಳಿತಳು. ಅದ...

ಟಪ ಟಪ ಮಳೆ ಬೀಳಲು ಆರಂಭಿಸಿತು. ಪುಟ್ಟಿ ತನ್ನ ಟೋಪಿ ತೆಗದುಕೊಂಡು ಹೋಗಿ ಹನಿ ಬೀಳದಂತೆ ಒಂದೊಂದು ಗಿಡದ ಮೇಲೂ ಇಡುತಿದ್ದಳು. “ಏನುಪುಟ್ಟಿ, ಗಿಡಕ್ಕೆ ಟೋಪಿ ಹಾಕುತಿದ್ದಿಯಾ?” ಎಂದಳು ಅಮ್ಮ. ಮಳೆ ಬಂದರೆ ನೀನು ನಂಗೆ ಟೋಪಿ ಹಾಕುತ್ತೀಯ...

ಅವರು ಕೊಡುವ ಸಂಬಳಕ್ಕೆ ಹುಡುಗ ದಿನವೂ ಕಾರು ತೊಳೆದು ಹೊಳಪು ತುಂಬುತ್ತಿದ್ದ. ಯಜಮಾನ ಕಾರಿನ ಬಾಗಿಲು ತೆಗಿಯುವಾಗ ಕೈ ಅಂಟಂಟಾಯಿತು. ಹುಡುಗನಿಗೆ ಕಪಾಳಕ್ಕೆ ಹೊಡೆದು “ಏನು ಸರಿಯಾಗಿ ಒರಿಸಿಲ್ಲವಾ?” ಎಂದರು. “ಅಪ್ಪಾ! ಜಿಲೇಬಿ ...

ಐದು ವರ್ಷದ ಮಗು ದೊಡ್ಡ ಚೀಲದಲ್ಲಿ ಕೊತಂಬರಿ ಕಟ್ಟುಗಳನ್ನು ತುಂಬಿಕೊಂಡು ರಸ್ತೆಯಲ್ಲಿ ಹೋಗುತ್ತಾ ನನಗೆ ಕೊಂಡು ಕೊಳ್ಳಲು ಕೇಳಿತು. ಅವಳ ತೂಕಕ್ಕಿಂತಲೂ, ಹೆಚ್ಚು ತೂಕ ಅವಳ ಎತ್ತರಕ್ಕಿಂತಲೂ, ಹೆಚ್ಚು ಉದ್ದವಾದ ಚೀಲ ಹೊತ್ತಿದ್ದ ಮಗುವನ್ನು ನೋಡಿ ಕನಿ...

ಅರುಣೋದಯ. ಚುಮು ಚುಮು ಬಿಸಿಲು ಬರುವ ಹೊತ್ತು. ಮನೆಯ ಅಂಗಳವನ್ನು ಗುಡಿಸಿ, ನೀರು ಚೆಲ್ಲಿ, ಚುಕ್ಕೆ ಎಣಿಸಿ ಇಟ್ಟು ರಂಗೋಲಿ ಎಳೆಯ ಧಾರೆಯನ್ನು ಬೆರಳುಗಳಿಂದ ಬಿಡುತ್ತಾ, ವೃದ್ದೆ ಬಾಯಲ್ಲಿ ದೇವರನಾಮ ಹೇಳುತ್ತಾಬಾಳನ್ನು ಪೂಜಿಸಿ ಸಾಧನೆಯಲ್ಲಿ ತೊಡಗಿದ...

ಅವಳೊಬ್ಬ ವಿರಹಿ. ತನ್ನಿಂದ ದೂರಾದ ಪ್ರಿಯನ ನಿರೀಕ್ಷೆಯಲ್ಲಿ ಪಾರಿಜಾತ ಗಿಡದ ಕಟ್ಟೆಯಲ್ಲಿ ಕುಳಿತಿದ್ದಳು. ಅರಳಿದ ಪಾರಿಜಾತಗಳು ಒಂದೊಂದಾಗಿ ಬಿದ್ದು ಅವಳ ಕನಸಿನ ಗೋಪುರವನ್ನು ಅಲಂಕರಿಸುತ್ತಿತ್ತು. ಅವಳ ತಳಮಳಗೊಂಡ ಮನವು ಮಾತ್ರ ಕಣ್ಣಲ್ಲಿ ಅಶ್ರು ಹ...

ಅವಳು ಮಲಗಿದೊಡನೆ ಅವಳಿಗೊಂದು ಕನಸು ಬೀಳುತಿತ್ತು. ಬೀದಿಯಲ್ಲಿ ಹೋಗುತಿದ್ದ ಇವಳನ್ನು ಎಲ್ಲರೂ “ಹುಚ್ಚಿ, ಹುಚ್ಚಿ” ಎಂದು ಅಪಹಾಸ್ಯ ಮಾಡುತ್ತಿದ್ದರು. ಅವಳಿಗೆ ಅಸಾಧ್ಯ ಕೋಪ ಬರುತ್ತಿತ್ತು. ಮನಸ್ಸು ಕದಡಿ ಹೋಗುತ್ತಿತ್ತು. ಬುದ್ಧಿ ಚು...

ಸೃಷ್ಟಿಯಲ್ಲಿ ಎಲ್ಲರೂ ಸುಖವಾಗಿರುವರಾ ಎಂದು ಪರೀಕ್ಷಿಸಲು ದೇವರು ಬಂದ. ಕಡಲಿನಲ್ಲಿ ಈಜುತ್ತಿದ್ದ ಮೀನನ್ನು ಕೇಳಿದ- “ನೀನು ಸುಖವಾಗಿರುವೆಯಾ?” “ನನಗೆ ನೀರಿನಲ್ಲಿ ಬಾಳು ಹಾಯಾಗಿದೆ” ಎಂದಿತು. ಆಕಾಶದಲ್ಲಿ ಹಾರುವ ಹಕ್ಕ...

12345...13

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...