ಇದ್ದವರು, ಇಲ್ಲದವರು

ಕೆಲಸವಿದ್ದವರು ಮಾತಾಡುತ್ತಾರೆ. ದಿನವೂ ಅನೇಕ ಕಾಗದ ಪತ್ರಗಳಿಗೆ ಸಹಿ ಹಾಕುವುದರಿಂದ ಬಹಳ ಬೇಗನೆ ಸುಸ್ತಾಗುತ್ತಾರೆ. ಪ್ರತಿ ಮುಂಜಾನೆ ನುಣುಪಾಗಿ ಗಡ್ಡ ಹರೆಯುವ ಇವರ ಮುಂದಿನ ಜೇಬಿನಲ್ಲಿ ಸೀಸನ್ ಟಿಕೇಟು ಹಿಂದಿನದರಲ್ಲಿ ಬಾಚಣಿಗೆ ಇಲ್ಲದವರು ಮೌನವಾಗಿದ್ದಾರೆ....

ಮೇಯಲ್ಲಿ ಮಳೆ

ತಿಂಗಳಿತ್ತಲ್ಲ ಒಂದು ಕ್ಷಣ ಹಿಂದೆ ಆಕಾಶದ ಅಂಗಳ ತುಂಬ ಕಣ್ಣ ಮಿಣುಕಿಸುವ ನಗುವ ನಕ್ಷತ್ರಗಳೂ ಇದ್ದುವು ಎಣಿಕೆಗೆ ಸಿಗದ ಅಕ್ಷಯ ರೂಪಿಗಳು. ನೋಡ ನೋಡುತ್ತ ಕರಿಯ ಮೊಡಗಳೆದ್ದು ಹರಿಹಾಯ್ದು ಸರಿ ರಾತ್ರಿಯಲಿ ಮಳೆ ಬಂತೇ...

ಕವಿಯ ಅವಸ್ಥಾಭೇದಗಳು

ಮೊಟ್ಟೆಯಾಗಿ ಮೊದಲಿನವಸ್ಥೆ ಆಗ ಪ್ರೇಮಗೀತೆಗಳಲ್ಲಿ ವೀರ ಗಾಥೆಗಳಲ್ಲಿ ಅವನ ಆಸ್ಥೆ ಒಡೆದು ಆಗುವನು ಹುಳ ಭಾರಿ ಕಳವಳಗೊಂಡು ತನ್ನದಾಗಿಸಿಕೊಂಡು ಜಗದ ದುಃಖಗಳ ಕ್ರಮೇಣ ಸುತ್ತ ಕೋಶ- ಬೆಳೆದು ಅಂತರ್ಮುಖಿ ಸ್ವಾಂತ ಸುಖಿ ನಿದ್ರಾವಸ್ಥೆಗೆ ವಶ...

ಕವಿ

ಶಬ್ದಗಳ ಮರೆತರೆ ಹೇಗೆ ಕವಿತೆ ಎಷ್ಟು ದೊಡ್ಡ ನದಿಗೂ ಬೇಕು ಒರತೆ ಕವಿತೆಯೆಂಬುದಿಲ್ಲ ಹೊಳೆಯುವ ವರೆಗೆ ಶಬ್ದಗಳ ಸಂಚು ಕವಿಯ ಬಗೆಗೆ ಆದರು ತಿಳಿದವರು ಅದರ ಸೂತ್ರ ಕೆಲವೇ ಮಂದಿ ಹಿರಿಯರು ಮಾತ್ರ ಕತ್ತಲೆಯ...

ಮನಸ್ಸಿದ್ದಲ್ಲಿ ಮರುಭೂಮಿ

ಕೆಲವೊಮ್ಮೆ ನಾನು ಭಾವಿಸುವೆನು ಮರುಭೂಮಿಯೊಂದನು ಅದರೊಳಗೆ ಸರೋವರವೊಂದ ನಿರ್ಮಿಸುವೆನು ನೋಡಿದರೆ ನೀರು ಕನ್ನಡಿಯಷ್ಟು ನಿರಾಳ ಅಲ್ಲಿ ಆಕಾಶಕ್ಕೆ ಎತ್ತರದಷ್ಟೆ ಆಳ ಆಚೀಚೆ ಕಣ್ಣಳತೆಯುದ್ದಕೂ ಬರಿ ಮಳಲು ದಿನದಿನವು ಬದಲಾಗುತ್ತ ನಿನ್ನೆ ನೋಡಿದ್ದು ಇಂದು ಕಾಣಿಸದೆ...

ಬೇಸಗೆ

ಆಕಾಶದೆತ್ತರಕೆ ಹಾರಿದ ಹಕ್ಕಿ ಕೊಕ್ಕಿನಲಿ ಕೊಂಡು ಹೋಯಿತು ಯಾವ ಪೌರುಷದ ಬಿತ್ತು? ಅದನು ಸ್ವೀಕರಿಸುವುದಕ್ಕೆ ಮಣ್ಣು ಹೊಡೆ ಮರಳಿ ಮಲಗಿದೆ ಮರಳಿ ಮರಳಿ ಉತ್ತು ಮರಳುವುದೆ ಆ ಹಕ್ಕಿ ಮರಳಿದರೂ ಅದು ಉಗುಳುವುದೆ ತನ್ನ...

ಕಿಂಗ್‌ಸ್ಲಿಯ ಗಾಂಧಿ

೧ ದಕ್ಷಿಣಾಫ್ರಿಕೆಯಲ್ಲಿದ್ದನೆಂದು ? ಸಾಬರ್‌ಮತಿಯ ಕರ್ಮಯೋಗಿ ದಂಡಿಯ ತೀರಕ್ಕೆ ಯಾತ್ರೆ ಕೈಗೊಂಡನೆಂದು? ನೋಖಾಲಿಯಲ್ಲಿ ಉಪವಾಸ ಮಲಗಿದನೆಂದು ? ಇಡಿಯ ದೇಶದ ಜೀವವನ್ನು ತನ್ನ ಸಾವಿನಲ್ಲಿ ಪಡೆದವನು ಭಾರತದ ಉದ್ದಗಲ ಸಂಚರಿಸುತ್ತ ಒಮ್ಮೆ ನದಿ ತೀರ...

ಸಮುದ್ರ

ಸಮುದ್ರವಿಲ್ಲದ ಹೈದರಾಬಾದಿಗೆ ನಾನೇ ಸಮುದ್ರ- ವೆಂದು ಹರಡಿದೆ ಆ ಮಹಾನಗರದ ಉದ್ದಗಲ ತುಂಬಿ ಬೀದಿಗಳ ತುಂಬಿ ಕೇರಿಗಳ ಒಳಗೊಳುವೆನೆಂದು ನನ್ನ ತಳಮಳದಲ್ಲಿ ಅದರ ಕಳವಳ ತಲ್ಲಣಗೊಳ್ಳುತ್ತ ಕರೆದು ಕೈ ಚಾಚಿ ತೆರೆದು ತೆರೆಬಿಚ್ಚಿ ತೆರೆದರೂ...

ಸೆಪ್ಟಂಬರ್ ೧೯೮೧

ಮುಸುಕಿನ ಜೋಳದ ಸಮಯ ಇದು ಎಲ್ಲ ಕಡೆಯೂ ಅದೇ ಒಲೆಯಲ್ಲಿ ತೊಳಗುವ ಕೆಂಡ ಕೆಂಡದ ಮೇಲೆ ಸುಲಿದ ಜೋಳದ ತೆನೆ ನಿಲ್ದಾಣಕ್ಕೆ ಬಂದು ನಿಂತ ಲೋಕಲ್ ಗಾಡಿ ಕೂಗುತ್ತಲೇ ಇದೆ ಇಲ್ಲೊಂದು ಎಮ್ಮೆ ಅಲ್ಲೊಬ್ಬ...

ಖರ್ಬೂಜದ ಗಾಡಿ

ಎಲ್ಲವನ್ನೂ ಮರೆತುಬಿಡಬಹುದು ಆದರೆ ಮರೆಯುವುದು ಹೇಗೆ ಖರ್ಬೂಜದ ಹಣ್ಣುಗಳನ್ನು ಹೇರಿಕೊಂಡು ಬೀದಿಯ ತಿರುವಿನಲ್ಲಿ ಮರೆಯಾದ ಎತ್ತಿನ ಗಾಡಿಯನ್ನು? ನಮ್ಮ ಅನೇಕ ನೆನಪುಗಳ ಕನಸುಗಳ ಗಾಡಿ ಜನನಿಬಿಡ ಬೀದಿಯಲ್ಲಿ ನಾವೆಲ್ಲರೂ ನೊಡುತ್ತಿದ್ದಂತೆಯೇ ಕಾಣಿಸದಾಯಿತಲ್ಲ!- ಎಲ್ಲಿಂದ ಬಂತು...