ಚೆಲುವ ನಾರಾಯಣ

ಧೂಪ-ದೀಪದಲ್ಲಿದ್ದ ಹೂವು-ಗಂಧದಲ್ಲಿದ್ದ ಚೆಲುವ ನಾರಾಯಣ ಕರ್‍ಪೂರದಾರತಿಯಲ್ಲಿದ್ದ ಕುಂಕುಮದಕ್ಷತೆಯಲ್ಲಿದ್ದ ಚೆಲುವ ನಾರಾಯಣ ಗಂಟೆ ಜಾಗಟೆಯಲ್ಲಿದ್ದ ಮಂತ್ರ ಘೋಷದಲ್ಲಿದ್ದ ಚೆಲುವ ನಾರಾಯಣ ನಿತ್ಯ ಪೂಜೆಯಲ್ಲಿದ್ದ ಹೊತ್ತ ಹರಕೆಯಲ್ಲಿದ್ದ ಚೆಲುವ ನಾರಾಯಣ ಮುದ್ದನುಕ್ಕಿಸುತ್ತಿದ್ದ ನೆಟ್ಟಗೆ ದಿಟ್ಟಿಸುತ್ತಿದ್ದ ಮರುಳಾಗದವರುಂಟೆ, ಚೆಲುವ...

ಹಾಡೆ ಹನುಮವ್ವಾ….

ಹಾಡೆ ಹನುಮವ್ವಾ.... ಕತ್ತಲ ಒಳಗೆ ಕರಗಿದೆ ಕೋಗಿಲೆ ಬೆಳಕಿಗೆ ತಾರವ್ವ ಹಳ್ಳಾಕೊಳ್ಳಾ ಹರಿಯೊ ಹಾಗೆ ಮಾವು ಬೇವೂ ಚಿಗಿಯೊ ಹಾಗೆ ರಂಜ ಸುರಗಿ ಉದುರೊ ಹಾಗೆ ಜಾಜಿ ಮಲ್ಲಿಗೆ ಬಿರಿಯೊ ಹಾಗೆ ಹಾಡೆ ಹನುಮವ್ವಾ......

ಪುಟ್ಟ ಕೆಂಚವ್ವ

ಹೊತ್ತಾರೆ ಸೂರ್‍ಯನ ಕಿರಣಗಳು ಮುತ್ತಿಡಲು ಹಾಳು ಹಕ್ಕಿಯ ಹಾಡು ಕಿವಿ ತುಂಬಲು ಕಿಸುರುಗಣ್ಣನು ತೆರೆದು ಸೆಟೆದ ಹೂ-ಮೈಯ ಮುರಿದು ಆಕಳಿಸುವಳು ನಮ್ಮ ಪುಟ್ಟ ಕೆಂಚವ್ವ..... ಚೂರು ಅಂಗಳವನೆ ಪರಪರ ಕೆರೆದು ಒಡೆದ ಗಡಿಗೆಯ ಸೊಂಟಕ್ಕೆ...

ಹಪ್ಪಳದ ಕತೆ

ಉಕ್ಕರಿಸಿದೆ ಹಿಟ್ಟು ಮಿದುವಾಯಿತು ಚೆನ್ನಾಗಿ ನಾದು ಲಟ್ಟಿಸಿದೆ ಹಪ್ಪಳವಾಯಿತು ಲಟ್ಟಿಸಿದಂತೆ ದಿಟ್ಟಿಸುತ ತನಗೆ ತಾನೆ ಎಂಬಂತೆ ಎಲ್ಲಿಂದ ಬಂದೆ? ಎಂದು ಹಪ್ಪಳವೆ ಕೇಳಿತು ಬೀಜ, ಸಸಿ, ತೆನೆ ಕಾಳು, ಬೇಳೆ ಬೆವರು ಹಸಿವು ನೀರು...

ಹಳ್ಳಿಯ ದಾರಿ

ಅರವತ್ತರ ಮುದುಕ ಹತ್ತರ ಹುಡುಗಿ ಇಬ್ಬರೂ ಸೇರಿ ಸವೆಸಿದರು ದಾರಿ ಮುಂದೆ ಮುಂದೆ ಸಾಗಿದ ಮುದುಕ ಹಿಂದೆ ಹಿಂದೆಯೆ ಉಳಿದಳು ಹುಡುಗಿ ಮುದುಕನಿಗದು ನಿತ್ಯದ ದಾರಿ ನೋಡಲೇನಿದೆ? ಹುಡುಗಿಗೆ ಪ್ರತಿಯೊಂದು ಹೊಸದು ಬಿಟ್ಟರೆ ಸಿಗುವದೆ?...

ಕಾಡಿನಲ್ಲಿ….

ಇಲ್ಲಿ ಬಯಸಿದಂತೆ ಬದುಕಬಹುದು ಇಚ್ಛೆಯಂತೆ ಸಾಯಬಹುದು ಸುತ್ತಲೂ ಮರಗಳು ಮರದೊಳಗೆ ಕಿಕ್ಕಿರಿದು ಪರಿಮಳಿಸಿವೆ ಹೂವುಗಳು ಜಿಂಕೆ ಆನೆ ಹುಲಿಗಳು ನೋಡಿಯೂ ನೋಡದಂತೆ ತಮ್ಮ ಪಾಡಿಗೆ ತಾವು ಹೆಜ್ಜೆಗಳನೂರಿ ಸಾಗಿಹವು ಹಕ್ಕಿಗಳು ಆಗಾಗ್ಗೆ ಹಾಡಿ ಗಮನ...

ಹೊಳೆ ಮಗಳು

ಅವಳು ಹಳ್ಳ ಇವಳು ಹೊಳೆ ಹಳ್ಳದ ಬಳ್ಳಯಲಿ ಹರಿದು ಬಂದವಳು ಹೊಳೆ ಮಗಳು ತಾಯಿ- ಹೊಳೆ ಮಗಳ ಹುಬ್ಬನು ತೀಡುವಳು ಸುಳಿ ಮುಂಗುರುಳ ಬಾಚುವಳು ದಿಟ್ಟಿಯ ಬೊಟ್ಟಿಟ್ಟು ಅಕ್ಕರೆಯ ಮುತ್ತಿಟ್ಟು ಮುನ್ನಡೆಸುವಳು ಇದು ಬೆಟ್ಟ...

ಸೋಲೇ ಇಲ್ಲ!

ಇಲ್ಲ.... ನಾನು ಕಣದಲ್ಲಿಲ್ಲ ಚಪ್ಪರ ಹಾರ ತುರಾಯಿಗಳೆ ಚಪ್ಪಾಳೆ ಶಿಳ್ಳೆ ಕೇಕೆಗಳೆ ನಾನು ಕಣದಲ್ಲಿಲ್ಲ. ಹೊಗಳಿಕೆಯ ಹೊನ್ನ ಶೂಲಗಳೆ ಭರವಸೆಯ ಬಿರುಸು ಬಾಣಗಳೆ ನಾನು ಕಣದಲ್ಲಿಲ್ಲ. ಎದುರಾಳಿಯ ಇರಿಯಲು ಸಿದ್ದವಾಗಿರುವ ಕತ್ತಿಗಳೆ ನನ್ನನ್ನು ಕಾಪಾಡಲು...

ಮಗು ಚಿತ್ರ ಬರೆಯಿತು

ಮಗು ಚಿತ್ರ ಬರೆಯಿತು ಬೆರಳುಗಳ ಕೊರಳ ಆಲಿಸಿ ಗೆರೆಯನೆಳೆಯಿತು. ಪುಟ್ಟ ಮನೆಯೊಂದ ಕಟ್ಟಿ ಮನೆಯ ಮುಂದೊಂದು ಮರವ ನೆಟ್ಟು ರೆಂಬೆ ಕೊಂಬೆಗೆ ಎಲೆಯನಿಟ್ಟು ಎಲೆಯ ನಡುವೆ ಹೂವನರಳಿಸಿ ಹೂವಿನ ಜೊತೆಗೆ ಹಣ್ಣನಿರಿಸಿ ಹಿಗ್ಗಿ ನಲಿಯಿತು....