ಒಬ್ಬ ವಿಯೆಟ್ನಾಮೀ ಸುಂದರಿಗೆ

ಎಲೆ ವಿಯಟ್ನಾಮಿನ ಸುಂದರಿಯೆ ನಿನ್ನ ಹೆಸರು ಹುಣ್ಣಿಮೆಯೆಂದು ಹೂವೆಂದು ಹಸಿರು ಹುಲ್ಲಿನ ಬೆಟ್ಟವೆಂದು ಪ್ರಾತಃ-- ಕಾಲದ ಬೆಳಕೆಂದು ಸ್ವಪ್ನವೆಂದು ಪ್ರೇಮವೆಂದು ಎಲ್ಲಿರಲ್ಲೂ ಇರುವ ಅಸೂಯೆ- ಯೆಂದು ನಿದ್ರಿಸುವ ಜ್ವಾಲಾಮುಖಿಯೆಂದು ಹೊತ್ತಿ ಉರಿಯುವ ಕಾಡೆಂದು ಹೇಳಿದ್ದಿ....

ಇಬ್ಬರು ಇಮಾಮರು

ಬಡಾ ಇಮಾಂ ಬಾರಾದಲ್ಲಿ ಬಡಾ ಇಮಾಮ ಛೋಟಾ ಇಮಾಂ ಬಾರಾದಲ್ಲಿ ಛೋಟಾ ಇಮಾಮ ಕುಳಿತಿದ್ದಾರೆ ನೋಡಿ ಎಂಥ ಠೀವಿಯಲ್ಲಿ ಇನ್ನು ಯಾರೂ ಇರದ ರೀತಿಯಲ್ಲಿ ಬಡಾ ಇಮಾಮನ ಉಂಗುರಕ್ಕೆ ವಜ್ರದ ಹರಳು ಛೋಟಾ ಇಮಾಮನಿಗೆ...

ಛೋಟೀವಾಲ

ಎಲ ಎಲಾ ಛೋಟೀವಾಲ! ಹತ್ತು ಅವತಾರಗಳ-- ನೆತ್ತಿಯೂ ಸಾಲದೆ ಹನ್ನೊಂದನೆಯ ಅವತಾರವ- ನೆತ್ತಿಬಿಟ್ಟೆಯಲ! ಹುಟ್ವಿಸಿದ ದೇವರು ಯಾರಿಗೂ ಹುಲ್ಲು ಮೇಯಿಸನಯ್ಯ ಒಂದೊಂದು ಜೀವಕೂ ಬದುಕುವ ಒಂದೊಂದು ಉಪಾಯವನವನು ಕರುಣಿಸುವನಯ್ಯ! ಕೆಲವರನು ಕುಣಿಸುವನು ಕೆಲವರನು ಮಣಿಸುವನು...

ಇನ್ನೊಂದು ಮುಖಾಮುಖಿ

ಮನೆಯ ಹಿಂದಿನ ಗಲ್ಲಿಯಲ್ಲಿ ಮುಸ್ಸಂಜೆಯ ಸಮಯದಲ್ಲಿ ಎದುರಾಯಿತೊಂದು ಬೆಕ್ಕು ಮೂಡಿತ್ತು ಅಲ್ಲಲ್ಲಿ ಸುಕ್ಕು "ಸಾರ್!" ಎಂದು ತಡೆಯಿತು "ಸಿಗಲಿಲ್ವೆ ನನ್ನ ಗುರುತು? ಮುಖಾಮುಖಿಯಂಥ ಪದ್ಯ ಕನ್ನಡದಲ್ಲಿ ಸದ್ಯ ಇನ್ನೊಂದಿಲ್ಲ ಸಾರ್ ಒಂದೆಂಟಾಣಿ ಕೊಡಿ ಸಾರ್!"...

ನಿಕರಾಗುವಾ: ಪಾಪಬೋಧೆ

ತಿರುವನಂತಪುರ ೬೬. ಸಾಂಡಿನಿಸ್ಟಾ ಚಳುವಳಿಯ ಬಗ್ಗೆ ಮಾತಾಡುತ್ತ ನಡೆದಿದ್ದವು. ಅವಳು ಸೀರೆಯನ್ನು ಮೊಣಕಾಲತನಕ ಎತ್ತಿಹಿಡಿದಿದ್ದಳು. ಅಕ್ಕಪಕ್ಕದ ಆಂಗಡಿಬೆಳಕಲ್ಲಿ ಇಬ್ಬರೂ ಧಾರಾಳ ತೊಯ್ದಿದ್ದೆವು. ಇಷ್ಟು ವರ್ಷಗಳ ನಂತರ ನನಗೀಗ ಏಕೆ ಈ ನೆನಪು ಇಷ್ಟು ದೂರದ...

ವ್ಯಸನಕೋಣೆ

ವ್ಯಸನಕೋಣೆಯಲಿ ನಮ್ಮ ಕಥಾನಾಯಕಿ ಬಿಳಿಯ ವಸನಧಾರಿ ಮಲಗಿರುವಳಂತೆ ಯಾರಿಗೂ ತಿಳಿಯ- ದವಳ ಬೇಸರದ ಮೂಲ ಘನ ಸರಕಾರವೇನೂ ಸುಮ್ಮನೆ ಕೂತಿಲ್ಲ ಕೈಕಟ್ಟಿ ಮನೆಯ ಸುತ್ತಲೂ ನಿಲ್ಲಿಸಿದೆ ಕಾವಲಿಗೆಂದು ಗಟ್ಟಿ ಗೂಢಚಾರರ ಜಾಲ ಸುಮ್ಮನೆ ಓಡಾಡುವವರ...

ಸೋಮವಾರದ ಗಾಡಿ

ಹೇಗೆ ಹೋಗುತಿದೆ ನೋಡಿ ಸೋಮವಾರದ ಗಾಡಿ ಸುತ್ತಾಡಿ ಗಲ್ಲಿ ಗಲ್ಲಿ ಒಡೆದು ದಾಮರ ಜಲ್ಲಿ ಗುರುತುಗಳು ವಕ್ರ ವಕ್ರ ತುಳಿದಲ್ಲಿ ಭಾರೀ ಚಕ್ರ ಕಾಣಿಸುವುದೇಕ ಪಾತ್ರ ಕಣ್ಣುಗಳು ಅನೇಕ ಮಾತ್ರ ಮಾತಿಗೆ ಮಾತು ಜೋತು...

ಸೀತಾಫಲ ಮಂಡಿ

ಹೊತ್ತು ಬೇಗನೆ ಮುಳುಗುವುದೆಂದರೆ ಥಂಡಿ ಗಾಳಿ ಬೀಸುವುದೆಂದರೆ ಸೀತಾಫಲ ಮಂಡಿಗೆ ಗಾಡಿಗಳು ಬರತೊಡಗಿದವೆಂದೇ ಲೆಕ್ಕ ಬರುತ್ತವೆ ಅವು ನಸುಕಿನಲ್ಲಿ ಮುಂಜಾವದ ಮುಸುಕಿನಲ್ಲಿ ಎಲ್ಲಿಂದಲೊ ಯಾರಿಗೆ ಗೊತ್ತು ಎಲ್ಲರಿಗೂ ನಿದ್ದೆಯ ಮತ್ತು ಎದ್ದು ನೋಡಿದರೆ ಮುಂದಿನ...

ಹೈದರಾಬಾದಿಗೆ

ನಂತರ ಬಂದೆವು ನಾವು ಹೈದರಾಬಾದಿಗೆ ಬರುವಾಗಲೇ ಮಧ್ಯಾಹ್ನ ಸುಡುಬಿಸಿಲು ರಾತ್ರಿ ಧಗೆ ಕಾರಲೆಂದು ಹಗಲೆಲ್ಲ ಕಾದು ಕೆಂಪಾಗಿರುವ ಕಲ್ಲು ಬಂಡೆಗಳು ಅವುಗಳ ಕೆಳಗೆ ಮಾತ್ರ ತುಸು ನೆಳಲು ಕ್ಲಾಕ್ ಟವರಿನ ಕಾಗೆ ನುಡಿಯಿತೊಂದು ಒಗಟು...

ಕರಾರಾದಲ್ಲಿ ಕವಿ

ಅಡುಗೆ ಮನೆಯಲ್ಲಿ ಒಗ್ಗರಣೆಯ ಸದ್ದು ಕುಂಟೆಬಿಲ್ಲೆಯ ಆಟ ಹೊರಗೆ ಮೇಜಿನ ಮೇಲೆ ಲೇಖನಿ ಹಿಡಿದ ಕವಿ- ಗಣೇಶ ಹೊರಟಿದೆ ಮೆರವಣಿಗೆ ಬೆಳಗಿನಿಂದಲೂ ಹೀಗೆಯೇ-- ಪದಗಳ ನಿರೀಕ್ಷೆಯಲಿ ಪದಗಳು ಎಲ್ಲರೂ ನಿದ್ರಿಸಿದಾಗ ಬಂದು ಹಾಗೆಯೇ ಮರಳುವ...