ಮಧ್ಯರಾತ್ರಿ ಸರಿದುಹೋದ ಸಮಯ
ನಗರ ನಿದ್ರಿಸಿರಲೇಬೇಕೆಂದು
ಕಿಡಕಿಯಿಂದಲೇ ಹಣಿಕಿಕ್ಕಿ
ನೋಡಿದೆ
ಝಗಮಗಿಸಿ ಹರಿದೋಡುವ
ಲೈಟುಗಳು ನಡುರಾತ್ರಿಯ
ಏನೇನೊ ಕಾರುಬಾರುಗಳು
ಅದೇಕೆ ಮಲಗೀತು ಹಾಲೆಂಡ್
ಗಹಗಹಿಸಿ ನಕ್ಕಿತು
ನಿದ್ದೆಗೇಡಿ ನಗರಗಳಲ್ಲಿದೂ ಒಂದು
ಕಣ್ಮುಚ್ಚಿ ಮತ್ತೆಮತ್ತೆ ನೋಡಿದೆ
ಹಳ್ಳಿಗಳ ಪ್ರಶಾಂತತೆ
ನೆನಪಿಸಿಕೊಳ್ಳುತ್ತಲೇ ಹೋದೆ
ಅವು ಮರೆಯಾಗುತ್ತಲೇ ಹೋಗುತ್ತಿವೆ.
*****
ಕೀವರ್ಡ್: ಹಾಲೆಂಡ್