ಆಕಾಶದೊಡಲು

ಆಕಾಶದೊಡಲೊಳಗಲ್ಲಲ್ಲಿ
ಶಾಪಿಂಗ ಸ್ಟಾಪ್‌ಗಳಿದ್ದಿದ್ದರೆ….
ಪರ್ಸ ತುಂಬಾ ಡಾಲರ್‍ಸ್
ಡ್ಯೂಟಿ ಕೊಟ್ಟರೂ ಪರವಾಗಿಲ್ಲ
ಬೇಕಾದಷ್ಟು ಸಿಲ್ಕೀ ಕಾಸ್ಮೆಟಿಕ್ಸ್
ಬಣ್ಣಬಣ್ಣದ ಬಟ್ಟೆಗಳು ಡೈಮಂಡ ಸ್ಟಾರ್‍ಸ್
ಕಾಮನಬಿಲ್ಲು ಏನೆಲ್ಲ ಪ್ಯಾಕ್ ಮಾಡಿಸಬಹುದಿತ್ತು.
ಅಲ್ಲಲ್ಲಿ ಸ್ಟಾರ್‍ ಹೊಟೇಲ್ ಗಳಿದ್ದು
ಒಳಗೆ ಕಾಫಿಶಾಪ್ ಕೇಕ್ ಶಾಪ್
ಇಂದ್ರ ಅಪ್ಸರೆಯರ ಚಿತ್ರಗಳಿದ್ದಿದ್ದರೆ
ಒಂದೆರಡು ದಿನಗಳು ಹಾಲ್ಟ್ ಮಾಡಬಹುದಿತ್ತು.

ಆಕಾಶದ ಹಾಸಿಗೆ; ಮೋಡಗಳ ತಲೆದಿಂಬು-
ಚುಕ್ಕಿಯ ಹೊದಿಕೆ, ಕನಸಿಗೊಬ್ಬ ಚಂದ್ರ-
ಇನ್ನೇನು ಬೇಕಿಲ್ಲ
ಮಳೆಯೊಳಗೆ ತೊಯ್ದು ತಪ್ಪಡಿಸಿ
ಬೆಚ್ಚಗಾಗಲು ಹೇಳಿ ಮಾಡಿಸಿದ ತಾಣ
ಮಧುಚಂದ್ರದವರಿಗೆ-
ಅಲ್ಲಲ್ಲಿ ನಿಲ್ದಾಣಗಳಿದ್ದಿದ್ದರೆ….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಕ್ಷಪ್ರಶ್ನೆ?
Next post ರಾತ್ರಿ – ಹಗಲು

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…