ಅಮ್ಮ ತಬ್ಕೊಂಡ್ ಕೊಡೋ ಮುತ್ತು

ಅಮ್ಮ ತಬ್ಕೊಂಡ್ ಕೊಡೋ ಮುತ್ತು
ಜಾಮೂನಪ್ಪ ಜಾಮೂನು,
ಮಿಸ್ಸು ಹೇಳೋ ಕಥೆಗಳ ಮುಂದೆ
ತುಂಬಾ ಸಪ್ಪೆ ಬೆಲ್ಲಾನೂ!

ಬುದ್ಧಿ ಮಾತನ್ ಒದ್ದು ಹೇಳೋದ್
ಅಪ್ಪ ಅಲ್ದೆ ಯಾರು?
ಆಗಿದ್ಹಂಗಿರುತ್ತೆ ಒಂದೊಂದ್ ಮಾತೂ
ಹಾಗಲಕಾಯಿ ಚೂರು!

ಮಕ್ಳು ಅಂದ್ರೆ ಅಜ್ಜೀಗ್ ಮುದ್ದು
ಲಬೊ ಲಬೊ ಹೊಡ್ಕೋತೀವಿ,
ಥೂ ಮುಂಡೇವೇ ತೊಲಗ್ರೊ ಮೊದಲು
ಅಂತ ಬೈಸ್ಕೋತೀವಿ

ಅಪ್ಪ ಇದ್ರೆ ಗಪ್‌ಚಿಪ್ ಎಲ್ಲ
ಇಲ್ದೆ ಇದ್ರೆ ದೊಂಬಿ
ಡಬ್ಬಾನೆಲ್ಲ ಖಾಲೀ ಮಾಡಿ
ಕೂಡ್ಲೇ ಕೀಳ್ತೀವ್ ಕಂಬಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೮೭
Next post ಇರುವದೆಲ್ಲವ ಬಿಟ್ಟು

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…