Home / ಬಾಲ ಚಿಲುಮೆ / ಕಥೆ / ಚಿತ್ರಾಂಗನ ಕಥೆ

ಚಿತ್ರಾಂಗನ ಕಥೆ

ಒಂದಾನೊಂದು ಊರಿನಲ್ಲಿ ಚಿತ್ರಾಂಗನೆಂಬ ನಾಯಿಯಿತ್ತು. ಆ ಊರಿನಲ್ಲಿ ಕ್ಷಾಮವು ಬಂತು. ತಿನ್ನುವುದಕ್ಕೆ ಎಂಜಲೂ ಇಲ್ಲದೆ ನಾಯಿಗಳು ನಾಶವಾಗಿ ಹೋದುವು. ಅದರಿಂದ ಚಿತ್ರಾಂಗನು ಹೊಟ್ಟೆಯಪಾಡು ನೋಡಿಕೊಳ್ಳಲು ದೇಶಾಂತರಕ್ಕೆ ಹೋಯಿತು.
ಅಲ್ಲೊಂದು ಊರಿನಲ್ಲಿ ಒಬ್ಬಳು ದಿನವೂ ಅಡಿಗೆಯ ಮನೆಯ ಬಾಗಿಲನ್ನು ಮುಚ್ಚುವುದನ್ನು ಮರೆತುಬಿಡುವಳು. ಈ ನಾಯಿಯು ಸಮಯ ಕಾದಿದ್ದು ಒಳನುಗ್ಗಿ ಬೇಕಾದ್ದನ್ನೆಲ್ಲ ತಿಂದುಬಿಡುವುದು. ಆದರೆ, ಈಚೆಗೆ ಬರುವ ವೇಳೆಗೆ ಸರಿಯಾಗಿ ಆ ಬೀದಿಯ ನಾಯಿಗಳು ಮೇಲೆ ಬಿದ್ದು ಕಚ್ಚಿ ಗೋಳುಗುಟ್ಟಿಸಿಬಿಡುವುವು.
ಹೀಗೆ ಕೆಲವುದಿನ ಕಷ್ಟದಿಂದ ಅಲ್ಲಿಯೇ ಕೆಲವು ದಿನವಿತ್ತು. ಕೊನೆಗೆ “ಇಲ್ಲಿದ್ದು ಈ ತಿಂಡಿ ತಿನ್ನುವುದೂ ಸಾಕು. ಈ ನಾಯಿಗಳಿಂದ ಕಚ್ಚಿಸಿಕೊಳ್ಳುವುದೂ ಸಾಕು. ನಮ್ಮೂರಲ್ಲಿ ತಿಂಡಿಯಿಲದಿದ್ದರೂ ಕಚ್ಚುವವರು ಯಾರೂ ಇಲ್ಲ” ಎಂದು ಆಲ್ಲಿ೦ದ ಹಿಂತಿರುಗಿ ಬಂತು.
ಅದರಿಂದ ಹಾಗೆ ಹೇಳಿದೆ. ಹೋಗು. ನಿನ್ನ ಮನೆಯನ್ನು ಹಿಡಿದುಕೊಂಡಿರುವನನೊಡನೆ ಯುದ್ಧ ಮಾಡಿ ಹೊಡೆದೋಡಿಸಿ ಮನೆಯನ್ನು ಸಾಧಿಸು” ಎಂದಿತು.
ಆ ಮೊಸಳೆಯೂ ಆ ಕಪಿಯು ಹೇಳಿದ ಬುದ್ಧಿಯ ಮಾತನ್ನು ಕೇಳಿ ಆ ಉಪದೇಶದಂತೆಯೇ  ನಡೆಯಿತು. ಅದಕ್ಕೆ ಮನೆಯೂ ಸಿಕ್ಕಿತು. ಅದೂ ಬಹುಕಾಲ ಅಲ್ಲಿ ಸುಖವಾಗಿತ್ತು. ಅದರಿಂದಲೇ ಹೇಳುವುದು
ಪೌರುಷಮಾಡದೆ ಪಡೆದಾಸಿರಿಯದು | 
ಹಿರಿದಾದರು ಫಲವಿಲ್ಲ | ವನದೊಳು ||
ದೈವವು ಕೊಟ್ಟಾ ಹುಲ್ಲನು ಸೊಪ್ಪನು | 
ತಿಂಬುದು ಮುದಿ ಗೂಳಿಯು ಕಾಣೆಯ ॥ ೩೨॥ 
ಇಂತಿದು ಹೊಸಗನ್ನಡ ಪಂಚತಂತ್ರದಲ್ಲಿ “ಸಿಕ್ಕಿದ್ದು ಹೋಯಿತು” ಮೊದಲನೆಯ ತಂತ್ರವು
*****
Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...