ಒಂಟಿಯಾಗಿಯೆ ನೀನು ದಿನ ದಿನ
ಒಂದೆ ದಿಕ್ಕಿಗೆ ಮೂಡುವೆ
ಒಂದೆ ದಿಕ್ಕಿಗೆ ಮುಳುಗಿ ಬಾನವ
ಕೆಂಪ ಕೆಂಪಗೆ ಮಾಡುವೆ
ಒಮ್ಮೆಯಾದರು ನಮ್ಮ ಹಿತ್ತಲ
ತುದಿಗೆ ಸೂರ್‍ಯನೆ ಮೂಡಿ ಬಾ
ಒಮ್ಮೆಯಾದರು ನಿನ್ನ ಬಳಗದ
ಚಂದ್ರ ಚುಕ್ಕೆಯ ಕೂಡಿ ಬಾ
ಒಮ್ಮೆಯಾದರು ನಮ್ಮ ತೋಟದ
ಭಾವಿಯೊಳಗೇ ಮುಳುಗು ಬಾ
ಒಮ್ಮೆಯಾದರು ಬಂದು ಬಿಡು ಇರು-
ಳಲ್ಲಿ ಕತ್ತಲೆ ಬೆಳಗುತ!
*****








