
೧
ಒ೦ದ೦ಬೋದು ಕುಂದದ ಪ್ರೇಮವು!-
ಎರಡ೦ಬೊದೇನೈ ಸಖ ಹೇಳೋ!
೨
ಎರಡಂಬೋದು ಎರಕದಿಂದೆರೆಯೋದು!-
ಮೂರಂಬೊದೇನೈ ಸಖ ಹೇಳೋ!
೩
ಮೂರಂಬೋದು ಪ್ರೇರಣೆಯ ಮಾರ್ಗವು!-
ನಾಕಂಬೊದೇನೈ ಸಖ ಹೇಳೋ!
೪
ನಾಕಂಬೋದು ಆಕಳ ಹಾಲ ಕುಡಿಯೋದು!-
ಐದಂಬೋದೇನೈ ಸಖ ಹೇಳೋ!
೫
ಐದಂಬೋದು ಪ್ರೀತಿಲಿ ತೊಯ್ದ ತೊಡೆ!-
ಆರಂಬೊದೇನೈ ಸಖ ಹೇಳೋ!
೬
ಆರಂಬೋದು ಆ ತೊಡೆಯ ಮೇಲೆ ಮಲಗೋದು!-
ಏಳಂಬೊದೇನೈ ಸಖ ಹೇಳೋ !
೭
ಏಳಂಬೋದು ತೋಳಿನಿಂದಟ್ಟಿಮಿಟ್ಟಿ!-
ಎಂಟಂಬೊದೇನೈ ಸಖ ಹೇಳೋ!
೮
ಎಂಟಂಬೋದು ಒಂಟಿತನ ಒಳ್ಳೇದಲ್ಲ!–
ಒಂಭತ್ತಂಬೊದೇನೈ ಸಖ ಹೇಳೋ!
೯
ಒಂಭತ್ತಂಬೊದು ತುಂಬಿದ ಹಂಬಲ!-
ಹತ್ತೊಂಬೊದೇನೈ ಸಖ ಹೇಳೋ!
೧೦
ಹತ್ತಂಬೋದು ಗುಟ್ಟಿನ ಗೆಳೆತನ!-
ಹನ್ನೊಂದಂಬೊದೇನೈ ಸಖ ಹೇಳೋ!
೧೧
ಹನ್ನೊಂದಂಬೊದು ಹೃನ್ಮಯ ಶ್ರೀಕೃಷ್ಣ!-
ಇನ್ನೊಮ್ಮೆ ಹೇಳೈ ಜೀವದ ಗೆಳೆಯನ ಹೆಸರ!
*****

















