Home / ಕವನ / ಕವಿತೆ / ನಾಡಿನ್ ಬಡವ ಸರ್‍ಕಸ್ ಸಿಮ್ಮ

ನಾಡಿನ್ ಬಡವ ಸರ್‍ಕಸ್ ಸಿಮ್ಮ

ನಾಡಿನ್ ಬಡವ ! ಸರ್‍ಕಸ್ ಸಿಮ್ಮ !
ಕಮ್ಚಿ ಯಿಡಿದೋನ್ ಬೆಪ್ಪ್ ನನ್ ತಮ್ಮ!
ಔನ್ಗೆ ಯೆದರಿ ಬಾಲಾ ಮುದರಿ
ಮೂಲ್ಯಾಗ್ ಮುದರ್‍ಕೊಬೇಕ ?
ಕಮ್ಚಿ ಯಿಡಿದೋನ್ ಕೈಲ್ ಏನ್ ಆಗ್ತೈತೆ ?
ಔನ್ಗೆ ಯೆದರ್‍ಕೊಬೇಕ ! ೧

ನಿನ್ಗೇ ಗೊತ್ತಿಲ್ಲಾ ನಿನ್ ಸಕ್ತಿ!
ಯೋಳಾಕ್ ಬಂದ್ರೆ ಸಿರ್ರಂತ್ ರೇಗ್ತಿ!
ಕೂಕ್ಕೊಂಡ್ ಕಚ್ಚೊಕ್ ಮೇಲ್ ಆರ್‍ಬರ್‍ತಿ !
ಯೋನ್ ಯೋಳಾನೆ ಸಿಮ್ಮ !
ಮಕ್ಕಳ್ ಇಡಿದಂಗ್ ಇಡಿದೈತ್ ನಿನ್ನ
ಕಮ್ಚಿ ಯಿಡಿಯೋ ಗುಮ್ಮ! ೨

ದುಡಿಯೋನ್ ನೀನು ! ಪಡೆಯೋನ್ ಔನು !
ಬೋನ್ ನಿನಗಾದ್ರೆ ಔನ್ಗೆ ಗೌನು !
ದುಡ್ದೀ ದುಡ್ಡೀ ದುಡ್ಡಿನ್ ಬೆಟ್ಟ
ನೀ ಮಾಡಾಕು ! ಪೇರ್‍ಸು !
ನಿನ್ ದುಡ್ನಲ್ಲೆ ತಕ್ಕೋಂತ್ ಒಂದ್ ಕಾಸ್
ನಿಂಗ್ ಔನ್ ಎಸದ್ರೆ ಸೈರ್‍ಸು! ೩

ಮೈ ನಿಂಗ್ ಐತೆ ! ಮನಸ್ ನಿಂಗ್ ಇಲ್ಲ ?
ಮನಸೂ ಐತೊ ! ನೀನ್ ನೋಡಾಲ್ಲ !
ಸಕ್ತಿ ಅದೆ ! ಉಕ್ತಾ ಅದೆ !
ನಿಂಗೆ ಎಲ್ಲಾ ಅದೆ !
ಸರಪ್ಣಿ ಬಿಕ್ಕೊಂಡ್ ಸುಂಕ್ ಯಾಕ್ ಇರಬೇಕ್?
ಯೆತ್ ಅದನ್ ಆಚೇಗ್ ಒದೆ ! ೪

ಬೂಮೀಲ್ ಮನ್ಸ ನೀರಲ್ ಮೀನು
ಮೇಲ್ ನಕ್ಸತ್ರ-ಎಲ್ಕು ನೀನು-
ಪರಪಂಚ್ಜೆಲ್ಲ ವೊಡೆಯ ನೀನು!
ಯೇನ್ ಯೋಳಾನೆ ನಿನ್ಗೆ !
ಗುಡಿಸೋ ಪೊರಕೆ ಆಗೋದ್ನಲ್ಲ
ಯೆಜಮಾನ್ನೇನೆ ಮನ್ಗೆ ! ೫

ಕಮ್ಚೀಗಾ ನೀನ್ ಎದರ್‍ಕೊಬೇಕು ?
‘ಹ್ಙೂ’ ಅಂತ್ ಒದರಿ ಗರ್‍ಜಿಸ್ ಸಾಕು !
ಮೈನಾಗ್ ಕೂದ್ಲು ಶಠಂ ಅಂತ್ ಇರ್‍ಲಿ !
ಬಾಲದ್ ಬಾವ್ತ ಯೇರ್‍ಲಿ !
ಕಮ್ಚಿ ಯಿಡಕೊಂಡ್ ಯಾವೋನ್ ಬತ್ತಾನ್
ನೋಡ್ಙೌ ಬರೋನ್ ಬರ್‍ಲಿ! ೬
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...