Home / ಕವನ / ಕವಿತೆ / ಹಣ್ಣ ಬಂದಾವ ಹಣ್ಣ

ಹಣ್ಣ ಬಂದಾವ ಹಣ್ಣ

ಹಣ್ಣ ಬಂದಾವ ಹೆಣ್ಣಾ ಮಗಿಯ ಮಾವಿನಽ ಹಣ್ಣ ಜಾಣಿ||
ಹಣ್ಣ ಕೊಳತೇವ ಹಣ್ಣಿನ ಬಿಲಿವಯ ಹೇಳ ಜಾಣಿ ||೧||

ಬೆಲಿಯ ಹೇಳುಽವ ಜಾಣಾ ಮಲ್ಲಾಡ ದೇಶಕ್ಹೋಗಿದನಲ್ಲೋ ಜಾಣಾ ||
ತಿಳಿಯಲಾರಽದ ಬೆಲಿಯ ನಾ ಏನ್ಹೇಳಾಲೊ ಜಾಣಾ ||೨||

ಕೆರಿಯ ಪಾಳ್ಯದ ಮ್ಯಾಲ ಕರಿಽ ಕಬ್ಬ ಹೆಚ್ಚ್ಯಾರಲಮ್ಮಽ ಜಾಣಿ ||
ಅದರಾಗ ತುಡಽಗ ದನ ಹೊಗತಾವಲಮಽ ಜಾಣಿ ||೩||

ತುಡಽಗ ದನ ಹೊಳ್ಳರ ಹೊಡದಾರ ಬಡೆದಾರೋ ಜಾಣಾ ||
ನಾಲೂರ ಕೂಡಿ ಬುದ್ದೀ ಹೇಳುವರಲ್ಲೋ ಜಾಣಾ ||೪||

ಭಾಂಯಾದರ ಕಟ್ಟ್ಯಾರಲ್ಲ ಅರುಟಿಗ್ಯಾದರಿಟ್ಟಾರಲಮಽ ಜಾಣಿ ||
ಅದರಾಗ ದಾಽನ ಧರ್ಮ ಇಲ್ಲ ಏನಽ ಜಾಣಿ ||೫||

ಅನ್ನ ವಸ್ತರು ದಾನ ಬೆಳ್ಳಿ ಬಂಗಾರ ದಾನೋ ಜಾಣಾ ||
ಹೆಣ್ಣ ಮಕ್ಕಳ ದಾನಾ ಕೊಡುಽವರೇನೋ ಜಾಣಾ ||೬||

ಗುಡಿಯಾದರು ಕಟ್ಟ್ಯಾರಲ್ಲ ಕಳಸಾದರಿಟ್ಟಾರಲಮಽ ಜಾಣಿ ||
ಕಣ್ಣೊತ್ತಿ ಕಳಸಗೋಳು ಒಡೆದಾವಲಮಽಽ ಜಾಣಿ ||೭||

ಒಡೆದಾರೆ ಒಡಿಯಾಲಿ ಒಡೆದುನೆ ಛಲ್ಲುವರೋ ಜಾಣಾ ||
ಒಡಹುಟ್ಟಿದಣ್ಣನಾಗಿ ಇರಽನೆ ಹೋಗೋ ಜಾಣಾ ||೮||
*****

ಹೆಂಡತಿಯನ್ನು ಅಗಲಿ ಬಹಳ ದಿನ ವ್ಯಾಪಾರಕ್ಕೆಂದು ಮಲ್ಲಾಡ ದೇಶಕ್ಕೆ ಹೋಗಿದ್ದ ಶೆಟ್ಟಿಯು ಮರಳಿ ಬಂದು ಬೇರೆ ವೇಷದಿಂದ ತನ್ನ ಮಡದಿಯ ಪಾತಿವ್ರತ್ಯವನ್ನು ಪರೀಕ್ಷಿಸುತ್ತಾನೆ. ಈ ಇಡೀ ಹಾಡಿನಲ್ಲಿ-ಒಂದು ನುಡಿಯಲ್ಲಿ ಅವನ ಕೌಶಲ್ಯದ ಪ್ರಶ್ನವೂ ಇನ್ನೊಂದು ನುಡಿಯಲ್ಲಿ ಅವಳ ಅದೇ ಬಗೆಯ ಉತ್ತರವೂ ಇನೆ.

ಛಂದಸ್ಸು:- ಸಾಂಗತ್ಯಕ್ಕೆ ಸಮೀಪವಾದುದು.

ಶಬ್ದಪ್ರಯೋಗಗಳು:– ಪಾಳ್ಯಾ=ದಂಡೆ. ಕೊಳತೇವು=ಕೊಂಡುಕೊಳ್ಳುತ್ತೇವೆ. ನಾಲೂರ=ನಾಲ್ವರು. ಭಾಂಯಿ=ಬಾವಿ. ಅರೂಟಿಗಿ=ಆರವಟ್ಟಿಗೆ. ಎಲಮ=ಏನೇ. ಇರಽನೆ ಮತ್ತು ಒಡದೂನೆ ಎಂಬಲ್ಲಿ `ನೆ’ ಎಂಬುದು ಪದ ಪೂರಣಕ್ಕಾಗಿ ಬಂದ ಅರ್ಥವಿಲ್ಲದ ಅಕ್ಷರವು. ಹೆಣ್ಣುಮಕ್ಕಳ ಹಾಡುಗಳಲ್ಲೆಲ್ಲಾ ಇದು ಬಹಳ ಕಡೆಗೆ ಬರುತ್ತದೆ. ಇದಕ್ಕೆ ಅರ್ಧಹಚ್ಚುವುದೇ ಅದರೆ `ರೆ’ ಎಂಬ ಅಕ್ಷರದಂತೆ ಇದನ್ನು ತಿಳಿದುಕೊಳ್ಳಬಹುದು.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...