Home / ಲೇಖನ / ವಿಜ್ಞಾನ / ಪ್ಲಾಸ್ಟಿಕ್ ಚೀಲ ಸುಗಂಧದ ಸೀಸೆ ಶಾಂಪುಗಳನ್ನು ಹೊಲದಲಿಯೇ ಬೆಳೆಯಬಹುದು

ಪ್ಲಾಸ್ಟಿಕ್ ಚೀಲ ಸುಗಂಧದ ಸೀಸೆ ಶಾಂಪುಗಳನ್ನು ಹೊಲದಲಿಯೇ ಬೆಳೆಯಬಹುದು

ಔಷಧಿಗಳು ‘ಪೀಡೆನಾಶಕಗಳು’ ಅಲಂಕಾರಕ ಸಾಮಗ್ರಿಗಳು, ಬಣ್ಣಗಳು ಇವೆಲ್ಲ ದೈನಂದಿನ ಬಳಕೆಯ ವಸ್ತುಗಳಾಗಿವೆ. ಹೊಲಗದ್ದೆಗಳಲ್ಲಿ ನೇರವಾಗಿ ಸಂಶ್ಲೇಷಿತ ಔಷಧಿಯನ್ನು, ಪ್ಲಾಸ್ಟಿಕ್‌ಗಳನ್ನು, ಪ್ಲಾಸ್ಟಿಕ್‌ನಂತಹ ಇತರೆ ಇಂಗಾಲದ ಉತ್ಪನ್ನಗಳಾದ ಪಾಲಿಹೈಡ್ರಾ ಕ್ಸೈ ಬ್ಯೂರೆಟ್ (P.H.B) ಪಾಲಿಥಿನ್‌ಗಳನ್ನು ಆಲೂಗಡ್ಡೆಯಂತಹ ಗೆಡ್ಡೆಗಳಲ್ಲಿ ಉತ್ಪಾದಿಸುವ ಪ್ರಯತ್ನಗಳು ನಡೆದಿವೆ. ಇವು ಪರಿಸರ ಮಾಲಿನ್ಯವನ್ನು ತಡೆಗಟ್ಟಿ, ವಾಯುಮಾಲಿನ್ಯದಿಂದ ಮುಕ್ತವಾದ ಕೈಗಾರಿಕೆಗಳು ಕೃಷಿಯಾಗಿ ಪರಿವರ್ತನೆಯಾಗುತ್ತವೆ. ಮನುಷ್ಯ ಪುನಃ ಹೊಲಗಳಲ್ಲಿ ಈ ಹೊಸ ಕೃಷಿಯನ್ನು ಮಾಡಲು ನಗರಗಳಿಂದ ಗ್ರಾಮಗಳಿಗೆ ವಲಸೆ ಹೋಗುವ ದಿನಗಳು ದೂರವಿಲ್ಲ. ಈ ಪ್ಲಾಸ್ಟಿಕ್ ಉತ್ಪಾದನೆಗಳು ಕೊಳೆಯದೇ ಕಸವಾಗಿ ಹಸಿರುಮನೆ ಪರಿಣಾಮದಿಂದ ಪರಿಸರವನ್ನು ಕಾಡುತ್ತಿದ್ದು ಈ ಸಾವಯವ ಕೃಷಿಯಿಂದಾಗಿ ಕೊಳೆಯುವ ರಸಗೊಬ್ಬರವಾಗಿ ಪರಿವರ್ತನೆಗಳಾಗಲಿವೆ. ಪ್ಲಾಸ್ಟಿಕ್ ಚೀಲಗಳು, ಸುಗಂಧದ ಸೀಸೆಗಳು, ಶಾಂಪು, ಸೋಪಿನ ಕವಚಗಳು ಎಲ್ಲವೂ ವಿವಿಧ ಬಣ್ಣವಿನ್ಯಾಸಗಳಲ್ಲಿ ಹೊಲದಲ್ಲಿ ಬೆಳೆಯಲು ಸಾಧ್ಯವಾಗಲಿದೆ ಎಂದು ವಿಜ್ಞಾನಿಗಳು ಕಂಡು ಹಿಡಿಯುತ್ತಿದ್ದಾರೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...