ಅರಿಯದವರು ನಾವು
ಬಾಳ ಅರಿಯದವರು
ತೋರಿಸುವ ಜಗಕೆ ನಾವು
ಕೂಡಿ ಬಾಳುವ ನೀತಿಯನು
ನನ್ನಲ್ಲಿಯೂ ಏನೂ ಇಲ್ಲ
ನಿನ್ನಲ್ಲಿಯೂ ಏನೂ ಇಲ್ಲ
ಅನ್ನಕ್ಕಿಂತ ಇನ್ನೊಂದು ದೇವರಿಲ್ಲ
ಎನ್ನುವುದು ನಾವುಗಳು ಬಲ್ಲೆವಲ್ಲ
ಬನ್ನಿ ಗೆಳೆಯರೆಲ್ಲ ಇಲ್ಲಿ ಬನ್ನಿ
ಇದ್ದುದನ್ನು ದೈವವೆಂದು ನಂಬಿ
ಹಂಚಿ ತಿನ್ನುವ ಇರುವುದನ್ನು
ಒಂದಾಗಿ ಕೂಡಿ ಬಾಳುವ ಇನ್ನು
ಹಸಿದವರಿಗೆ ಅನ್ನ ನೀಡದ
ಅದೆಷ್ಟೋ ಹಣವಂತರಿಗೆ
ಹಂಚಿ ತಿನ್ನುವುದರ ಸಂತೋಷ
ಏನೆಂದು ತಿಳಿಸಿ ಕೊಡುವ ನಾವು
*****