ನೀನೆ ತುಪ್ಪ ನಾನೆ ದೀಪ
ದೀಪ ಗೊಳಿಪೆ ಅಂಗಳಾ ||ಪಲ್ಲ||
ಬ್ರಹ್ಮ ತತ್ವ ಭೂಮಿ ಯುಕ್ತ
ಮಧ್ಯ ಸುಮಮ ಸಂಪದಂ
ಸಟೆಯ ಲೋಕ ಅವುಟು ಶೋಕ
ಬಿಟ್ಟ ಬೀಕು ಬೆಂತರಂ ||೧||
ಇತ್ತ ಯಾತ್ರಿ ಸುತ್ತ ಧಾತ್ರಿ
ರಕ್ತ ರಾತ್ರಿ ನರ್ತನಂ
ಅತ್ತ ಅಮಮ ಶಾಂತಿ ಘಮಮ
ಅಮರ ಸುಮಮ ನಂದನಂ ||೨||
ಮೌನ ಗಾನ ಶಿವನ ಯಾನ
ತಂಪು ತನನ ಸುರಿಯಲಿ
ರಕ್ತ ಇಂಗಿ ವಿಷವು ಹಿಂಗಿ
ಭುವಿಯು ಚಂದವಾಗಲಿ
*****