ಒಂದು ಮಳೆಯ ಹನಿ ತನ್ನ ಪಕ್ಕದಲ್ಲಿದ್ದ ಇನ್ನೊಂದು ಮಳೆ ಹನಿಯನ್ನು ಕೇಳಿತು “ದೇವರು ಎದುರಿಗೆ ಬಂದರೆ ನೀನು ಏನು ವರ ಕೇಳುವೆ?” ಎಂದು. ಮೊದಲ ಮಳೆ ಹನಿ ಹೇಳಿತು- “ಸಾಗರ ಸೇರುವವರೆಗೂ ನನ್ನ ಹನಿ ದೇಹ ಉಳಿಸು” ಎಂದು.
“ನೀನು ದೇವರು ಎದುರಿಗೆ ಬಂದರೆ ಏನು ಕೇಳುವೆ?” ಎಂದು ಮೊದಲ ಹನಿ, ಎರಡನೆಯ ಹನಿಗೆ ಕೇಳಿತು. “ನಾನು ಏನೂ ಕೇಳುವುದಿಲ್ಲ, ಹೇಳುವುದಿಲ್ಲ, ಒಡನೆ ಮಣ್ಣಿನಲ್ಲಿ ನಿಂತ ದೈವದ ಪಾದ ಸೇರಿಬಿಡುವೆ” ಎಂದಿತು. ಮೊದಲ ಹನಿ ಅಂದು ಕೊಂಡಿತು “ಛೇ! ನಾನೇಕೆ ದೂರ ಸಾಗರದ ಪಯಣ ಯೋಚಿಸಿದೆ?” ಎಂದು ಪರಿತಪಿಸಿ ತಾನೂ ದೈವದ ಪಾದ ಸೇರಿತು.
*****