ಬೋನ್ಸಾಯ್

ತಾಯಿ ನೆಲವ ಒಮ್ಮೆಯೂ ಸೋಕದೆ ಬಣ್ಣ ಬಣ್ಣದ ಬೋಗುಣಿಗಳಲ್ಲಿ ಬೆಳೆದು ಅಲ್ಲಲ್ಲ, ಷೋಕಿಗೆ ಶಿಸ್ತಿನಿಂದ ಬೆಳೆಸಲ್ಪಟ್ಟು ತಾಯಿಬೇರೂ ಕತ್ತರಿಸಿಕೊಂಡು ಅತ್ತಿತ್ತ ಎಲ್ಲೆಂದರಲ್ಲಿ ಕೊಂಬೆ ಚಾಚದೇ ಜೈಲಿನ ಖೈದಿಯಂತೆ ಇದ್ದೂ ತಿನ್ನಲಾಗದ ರೋಗಿಷ್ಟ ಶ್ರೀಮಂತನಂತೆ ಒಂದೇ...

ಚಿಂತಕ

ಎಳತರಲ್ಲವನ ವಿಚಾರ ಶಕ್ತಿಯನ್ನು ಕಂಡವರೆಲ್ಲ ಅಂದುಕೊಂಡದ್ದು ಅವನೊಬ್ಬ ಚಿಂತಕನಾಗುತ್ತಾನೆ ಅಂತ ಆದರೆ ಬೆಳೆದಂತೆ ಅದು ಹಳಿತಪ್ಪಿ ಹಾಳಾಗಿ ಅವನೊಬ್ಬ ನಕ್ಸಲೈಟ್ ನರಹಂತಕನಾದದ್ದೊಂದು ಘೋರ ದುರಂತ. *****

ಎಲ್ಲಿ ಕುಂತಾನೊ ದೇವರು

ಎಲ್ಲಿ ಕುಂತಾನೊ ದೇವರು ಎಲ್ಲವ ನೋಡುತ ಕುಂತಾನೊ ದೇವರು|| ನ್ಯಾಯಾಲಯದಲಿ ಜಡ್ಜನ ಮುಂದೆ ದೇವರ ಮೇಲೆ ಪ್ರಮಾಣ ಮಾಡಿಸಿ ಸುಳ್ಳನೆ ವಾದಿಸಿ ಸಾಧಿಸಿ ಗೆಲ್ಲುವ ಕಳ್ಳರ ಭಂಡರ ಉಳಿಸ್ಯಾನಲ್ಲಾ || ಎಲ್ಲಿ || ಪಾರ್ಲಿಮೆಂಟಿನಲಿ...

ದೀನ ನೀನು ಹೇಗೆ

ದೀನ ನೀನು ಹೇಗೆ ಮಹಾಮಾನಿಯೇ? ನಾವೇ ಋಣಿ ನಿನಗೆ ಹಿರಿಯ ದಾನಿಯೇ ಚಳಿ ಬಿಸಿಲಿನ ಪರಿವೆಯಿರದೆ ನಮ್ಮ ಮನೆಯ ಕಟ್ಟಿದೆ, ಮಳೆಯಲಿ ಬರಿಮೈಲಿ ದುಡಿದು ನಮ್ಮ ಮಾನ ಮುಚ್ಚಿದೆ, ಹಿಡಿ ತಂಗಳು ತಿಂದು ಮನೆಯ...

ಗಗನ ಸಖಿ ೨

ಕಪ್ಪು ಸುಂದರಿಯರಿವರು ಅದೆಷ್ಟು ಒನಪು ಒಯ್ಯಾರ ಬಿಗಿಮಿಡಿ ಚೂಪುಹೀಲ್ಡು ದಪ್ಪ ತುಟಿಯ ದೊಣ್ಣೆ ಮೂಗಿನ ಹುಡುಗಿಯರದದೇನು ತರಾತುರಿ ತುಟಿಗಂಟಿದ ಬೆವರೊ ಬೆವರಿಗಂಟಿದ ಲಿಪ್ ಸ್ಟಿಕ್ಕೊ ಗುಲಾಬಿಯೆಲ್ಲ ಕಪ್ಪು. ಕ್ಷಣಕ್ಷಣಕೂ ತೀಡಿತಿದ್ದಿಕೊಳ್ಳುವ ಕಪ್ಪು ಕಣ್ಣಿನ ಹುಬ್ಬಿನ...

ಮಗಳು ಬರೆದ ಕವಿತೆ

ಮಗಳು ಎಳೆಯ ಮುಗುಳು ಎದೆಯ ಮೇಲೆ ಮಲಗಿರುವಳು ಸದ್ದು ಮಾಡಿದ ಎದೆಯ ಪ್ರಶ್ನಿಸುತ್ತಾಳೆ ಮೆಲ್ಲಗೆ ಯಾರು ನೀನು? ಎದೆಯ ಬಡಿತ ಹಮ್ಮಿನಿಂದ ಕ್ರೈಸ್ತನೆಂದಿತು ಸಣ್ಣಗೆ ಕಂಪಿಸಿದಳು ಮುಸ್ಲಿಮನೆಂದಿತು ಗರ್ವದಲಿ ಒಳಗೇ ದುಃಖಿಸಿದಳು ಹಿಂದುವೆಂದಿತು ಹೆಮ್ಮೆಯಲಿ...

ಪ್ರತಿ ಹೂವೂ ಸಾರುತ್ತಿದೆ

ಪ್ರತಿ ಹೂವೂ ಸಾರುತ್ತಿದೆ ಭಗವಂತನ ಚೆಲುವ ಪ್ರತಿ ಬೆಳಗೂ ಹಾಡುತ್ತಿದೆ ಭಗವಂತನ ಒಲವ ಹರಿವ ನೀರು, ಸುಳಿವ ಗಾಳಿ ತಿರುಗುವ ಋತು ಚಕ್ರ ಮಾತಿಲ್ಲದೆ ಸೂಚಿಸುತಿವೆ ಭಗವಂತನ ನಿಲುವ. ಕೋಟಿ ತಾರೆ ಬಾನಿನಲ್ಲಿ, ಭೂಮಿಯೊಂದು...