ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೨

ಸುತ್ತೆಲ್ಲ ಹಸಿವಿನ ನಿಗೂಢ ಕರಿ ಮೌನ ಆವರಿಸಿ ಪಸರಿಸಿದೆ ಭೀತಿಯನು ಹಸಿ ನೆತ್ತರಲಿ ಕಲೆಸಿ ದೈನ್ಯತೆಯೇ ಮೈವೆತ್ತು ಬೇಡುತ್ತದೆ ರೊಟ್ಟಿ ‘ಪ್ರಭು ಆಕಾಶ ಬೇಡ ನನಗೆ ಅರಳಲು ಬಿಡು ನೆಲದ ನಗೆಗೆ’ *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೧

ಹೇಗೆಂದು ಅಳೆವುದು ಈ ಹಾಳು ಹಸಿವನ್ನು ಒಮ್ಮೆ ಇತ್ತಿತ್ತ ಒಮ್ಮೆ ಅತ್ತತ್ತ ಅಳತೆಗೋಲುಗಳೇ ಪೊಳ್ಳು. ಲೆಕ್ಕವಿರದಷ್ಟು ರೊಟ್ಟಿ ತುಂಬಿಸಿದರೂ ಹಸಿವಿನ ತಕ್ಕಡಿ ತಟ್ಟೆ ಏರುವುದಿಲ್ಲ ತುಲಾಭಾರ ಮುಗಿಯುವುದಲ್ಲ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೦

ಪರಸ್ಪರ ರೊಟ್ಟಿ ಹಸಿವುಗಳ ಅಂತರಂಗ ಅನಾವರಣಗೊಳದೇ ಅಪರೂಪದ ಸಮರಸವಿಲ್ಲ. ಮುಕ್ತಗೊಳದೇ ಅರಿವಿಲ್ಲ. ನದಿ ಮೌನವಾಗಿ ಹರಿಯುತ್ತದೆ ಎರಡೂ ದಡಗಳು ಸುಮ್ಮನೆ ಬಿದ್ದುಕೊಂಡಿರುತ್ತವೆ. *****