ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೩೧ ಧರ್ಮದಾಸ ಬಾರ್ಕಿ July 31, 2017February 4, 2017 ನನ್ನ ಸಂತಸದ ಅರಿವು ನನಗಿಲ್ಲದಿದ್ದರೆ ನಾ ಅದೆಷ್ಟು ಆನಂದ ಪಡುದಿದ್ದೆನೋ! ***** Read More
ಹನಿಗವನ ನೈಸರ್ಗಿಕ ಪ್ರಕೋಪ ಲತಾ ಗುತ್ತಿ July 30, 2017February 13, 2019 ಭೂಗರ್ಭ ಸೀಳಿ ಬರುವ ಲಾವಾ ಸಮುದ್ರ ಉಕ್ಕಿಹರಿಯುವ ನೀರು ಮೋಡ ಒಡೆದು ಬರುವ ಮಳೆ ಅವೆಲ್ಲ ನಮ್ಮ ನಿಮ್ಮ ಸಿಟ್ಟಿನಂತೆಯೇ ನಿಸರ್ಗಕ್ಕೂ ಬಿ.ಪಿ. ಏರಿಳಿದು ಆಗಾಗ ಹಾರ್ಟ್ಅಟ್ಯಾಕ್ ಆಗಿಬಿಡುವುದು. ***** Read More
ಹನಿಗವನ ರಾಜಕಾರಣಿ ಪಟ್ಟಾಭಿ ಎ ಕೆ July 27, 2017March 29, 2017 ರಾಜಕಾರಣಿಗಳದ್ದು ಒಬ್ಬಬ್ಬರದೂ ಒಂದೊಂದು ಭಂಗಿ; ಚುನಾವಣೆ ಬಂದಾಗ ಊದುತ್ತಾರೆ ಪುಂಗಿ, ನಂತರ ಅರ್ಥವಾಗುತ್ತದೆ ಇವರದ್ದು ಬರೀ ಡೋಂಗಿ! ***** Read More
ಹನಿಗವನ ಪಕ್ಷ ಪರಿಮಳ ರಾವ್ ಜಿ ಆರ್ July 26, 2017September 19, 2017 ಮನೆಯಲಿ ಪಕ್ಷಗಳೆರಡು ಗಂಡನದು ಕೃಷ್ಣಪಕ್ಷ ಹೆಂಡತಿಯದು ರಾಧೆ ಪಕ್ಷ ಮಕ್ಕಳದು ಅಪ್ಪ ಅಮ್ಮನ ಸುರಕ್ಷಾ ಪಕ್ಷ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೩೦ ಧರ್ಮದಾಸ ಬಾರ್ಕಿ July 24, 2017February 4, 2017 ಆಗಸದಲ್ಲಿ ನನ್ನ ಹೆಜ್ಜೆ - ಗುರುತುಗಳು ಕಾಣಿಸಲಿಲ್ಲವೋ? ಮರೆತೆಯೇಕೆ- ಇಡೀ ಆಗಸವೇ ನನ್ನ ಹೆಜ್ಜೆ - ಗುರುತಲ್ಲವೇ? ***** Read More
ಹನಿಗವನ ಲೊರೇನ್ ಪಟ್ಟಾಭಿ ಎ ಕೆ July 20, 2017March 29, 2017 ಹೆಂಡಂದಿರ ಹಿಂಸಿಸುವ ಗಂಡಂದಿರು ಇವರೇನಾ? ಕೇಳಿಲ್ಲವೆ ಹೆಣ್ಣಿನ ಹೆಸರು ಅಮೆರಿಕದ ಲೊರೇನಾ? ***** Read More
ಹನಿಗವನ ದಿಕ್ಕು ಪರಿಮಳ ರಾವ್ ಜಿ ಆರ್ July 19, 2017September 19, 2017 ದಿಕ್ಕುಗಳು ಹತ್ತು ಬಿಕ್ಕುಗಳು ನೂರಹತ್ತು ನಕ್ಕು ನೀ ಧರೆಗಹಿಳಿಸು ಸ್ವರ್ಗ ಸೊತ್ತು ನಕ್ಕು ನೀಗಳಿಸು ಬಾಳಗಮ್ಮತ್ತು! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೨೯ ಧರ್ಮದಾಸ ಬಾರ್ಕಿ July 17, 2017February 4, 2017 ‘ಬದುಕಿನ ಕಾಣಿಕೆ’ ಎಂಬ ‘ಪಾರ್ಸಲ್’ ಬಂದಿತೇ? ಬಿಚ್ಚಿ ನೋಡು, ತಡವೇತಕೆ! ***** Read More
ಹನಿಗವನ ಪಕ್ಷಿ ಪುರೋಹಿತರು ಲತಾ ಗುತ್ತಿ July 16, 2017February 13, 2019 ಪಬ್ಲಿಕ್ಕೇ ಇರಲಿ ಗಾರ್ಡನ್ನೇ ಇರಲಿ ವಿ.ಐ.ಪಿ ಶಿಲಾಮೂರ್ತಿಗಳ ನೆತ್ತಿಯಮೇಲೆ ತಮ್ಮ ಮಲಮೂತ್ರಗಳಿಂದ ಅಭಿಷೇಕ ಮಾಡಿ ಇಂಪಾಗಿ ಚಿಲಿಪಿಲಿಸುತ್ತ ಹುಲ್ಲು ಏರಿಸಿ ಹುಳ ಹುಪ್ಪಡಿ ನೈವೆದ್ಯಮಾಡಿ ನಿತ್ಯ ಸೇವೆಮಾಡಿ ಕೃತಾರ್ಥರಾಗುತ್ತವೆ ಪಕ್ಷಿಗಳು. ***** Read More
ಹನಿಗವನ ದಾಂಪತ್ಯ ಪಟ್ಟಾಭಿ ಎ ಕೆ July 13, 2017March 29, 2017 ನನ್ನದು ಸುಖದ ದಾಂಪತ್ಯ; ಅವಳು ಬಾಯಿ ತೆರೆದರೆ ನನ್ನದು ಸೇರುತ್ತದೆ ನೇಪಥ್ಯ! ***** Read More