ಹನಿಗವನ ಅಳಿಯ ಪಟ್ಟಾಭಿ ಎ ಕೆ March 22, 2018April 10, 2018 ಕಾಲು ತೊಳೆಸಿಕೊಂಡ ಅಳಿಯನಿಗೆ ಅರಿಯದು ನಾಳೆ ತಾನು ತೊಳೆಯಲೇಬೇಕು ತನ್ನ ಅಳಿಯನ ಕಾಲನ್ನು ಎಂದು! ***** Read More
ಹನಿಗವನ ಕಾಲ ಪರಿಮಳ ರಾವ್ ಜಿ ಆರ್ March 21, 2018January 2, 2018 ಜೀವದ ಕತ್ತನ್ನು ಕತ್ತರಿಸಲು ಕಾಲನ ಕತ್ತರಿ ಮಸೆಯುತ್ತಿರುತ್ತದೆ. ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೫ ಧರ್ಮದಾಸ ಬಾರ್ಕಿ March 19, 2018December 17, 2017 ಅಹಂಕಾರದ ನೀರು ಕುದಿಸಿದೆ. ಆವಿ ಹೊರಡಿತು. ಮತ್ತೆ... ನೀರಾಗಿ ಧರೆಗಿಳಿಯಿತು. ಅಷ್ಟೆ. ***** Read More
ಹನಿಗವನ ವಿಚಿತ್ರಸತ್ಯ ಲತಾ ಗುತ್ತಿ March 18, 2018February 13, 2019 ಜಗದ ಪರಿಗೆ ಬೇಸತ್ತ ಬುದ್ಧ ನಡುರಾತ್ರಿ ಚಕ್ಕನೆ ಹೊರಬಿದ್ದು ಭೋದಿವೃಕ್ಷದ ಕೆಳಗೆ ಕುಳಿತು ಮಹಾನ್ ಭಗವಾನ್ ಬುದ್ಧನಾದ ಯಶೋಧೆ ಹಗಲಿನಲ್ಲಿಯೇ ಹೊರಬಿದ್ದಿದ್ದರೂ ಅಗ್ನಿ ಪರೀಕ್ಷೆಯ ರಾಮಾಣವಾಗಿ ಅಡವಿ ಸೇರಿಬಿಡುತ್ತಿದ್ದ ರಾಮನ ತಮ್ಮ ಬುದ್ಧ. ***** Read More
ಹನಿಗವನ ವರಿ ಪಟ್ಟಾಭಿ ಎ ಕೆ March 15, 2018April 10, 2018 ವರುಷದ ಮೊದಲೆರಡು ತಿಂಗಳುಗಳು ಮಾತ್ರ ವರಿ; ಜನವರಿ, ಫೆಬ್ರವರಿ! ***** Read More
ಹನಿಗವನ ಆತ್ಮಹತ್ಯೆ ಪರಿಮಳ ರಾವ್ ಜಿ ಆರ್ March 14, 2018January 2, 2018 ಆತ್ಮಹತ್ಯೆಗೆ ಯಮಗಂಡ ಕಾಲವೆಂದು ಗುಳಿಗೆ ಕಾಲಕ್ಕೆ ಕಾದುನಿಂತ ತಿಳಿಗೇಡಿತಮ್ಮ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೪ ಧರ್ಮದಾಸ ಬಾರ್ಕಿ March 12, 2018December 17, 2017 ಅದು ಬೇಕೇ ಬೇಕೆಂದಾದರೆ ಹುಡುಕು. ಆದರೆ- ಅದನ್ನು ಕಳೆದುಕೊಂಡ ಬಗ್ಗೆ ನಿನಗೆ ಖಾತ್ರಿಯಾಗಿರಲಿ! ***** Read More
ಹನಿಗವನ ನೂಕು – ನುಗ್ಗಲು ಪಟ್ಟಾಭಿ ಎ ಕೆ March 8, 2018January 4, 2018 ನೂಕು ನುಗ್ಗಲು ಆಕಾಶಕ್ಕೆ ಅನವಶ್ಯಕ ಅವಕಾಶಕ್ಕೆ ಅತ್ಯವಶ್ಯಕ! ***** Read More
ಹನಿಗವನ ಇತಿಹಾಸ ಪರಿಮಳ ರಾವ್ ಜಿ ಆರ್ March 7, 2018January 2, 2018 ಗೋಡೆಗಳು ಕೋಟೆಗಳು ಗೋಪುರ ಅರಮನೆಗಳು ಮುಖದ ಬಿಗಿ ಮೌನದಲಿ ಬಚ್ಚಿಟ್ಟುಕೊಂಡಿ ಹಾಸ ಇದು ಇತಿಹಾಸ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೩ ಧರ್ಮದಾಸ ಬಾರ್ಕಿ March 5, 2018December 17, 2017 ಅದೇನು ನಡೆದಿರಬೇಕು, ಏನೂ ಜರುಗದ ಕ್ಷಣದಲ್ಲಿ? ***** Read More