Home / ಕವನ / ಕವಿತೆ

ಕವಿತೆ

ಜೀವನವೆಂಬ ಸಾಗರದಲಿ ಕಾಣದ ನಾವಿಕನಾಶ್ರಯದಿ ಪಯಣಿಸುವ ಪಯಣಿಗರು ಪ್ರಯಾಸ-ಪರಿಶ್ರಮದಲಿ… ದೃಢ-ವಿಶ್ವಾಸಗಳ ಹುಟ್ಟುಗೋಲಾಡಿಸುತ ನಿರ್ಭೀತಿ-ನಿರ್ಲಿಪ್ತತೆ… ಹೊರದೂಡುತ ಗೆಲುವನು ದೂರದಲಿ ಕಾಣುತ… ಧೈರ್ಯದ ಸವಾರಿಯಲಿ ನಡೆಯುವಾ ನಿರಾ...

ಹಾಡು – ೧ ಎಲ್ಲಿಹುದೊ ಬಾಳ ಬೆಳಕು ಅದೆಲ್ಲಿಹುದೊ ಜೀವ ತಳುಕು || ಜೀವ ಜಲ ಹನಿಹನಿ ರಾಶಿ ಸುರಿಯೆ ಧಾರೆ ಹಸಿರು ಕಾಣಿ ಹೂವರಳಿಸಿ ನಗು ಮಿಂಚಿಸಿ ಜೀವಕೆಲ್ಲ ಚೇತನವ ಪೂಸಿ || ಮುಗಿಲಾಗಿರೆ ಬಟ ಬಯಲು ನೆಲವೆಲ್ಲ ದ್ವೇಷಾಗ್ನಿ ಬುಗಿಲು ಎಲ್ಲಿ ನಮ...

ಹಸಿರು ತುಂಬಿದ ವನಸಿರಿಯು ಚೆಲುವು ಧರೆಯ ಶೃಂಗರಿಸಿಹದು ಗಿರಿಕಾನನಗಳ ಮೆರಗು ರಂಗುಸಿರಿಯು ಹೆಚ್ಚಿಹದು ಮೋಡಗಳಿಗೆ ಮುತ್ತಿಡುತ ಧರೆಗೆ ಜಲಧಾರೆ ಚೆಲ್ಲುತಲಿ ರೈತನ ಸಂತಸ ಹೆಚ್ಚಿಸುತ ನೊಂದ-ಬೆಂದ ಜನಗಳಿಗೆ ನೀ ಧಾಮ ಕಾಮಧೇನು ನಿನ್ನಡಿಯಲಿ ಕುಣಿಯುತಿಹಳ...

ಹಾಡು – ೧ ಯಲ್ಡಕ್ಕೆ ಹೋಗದೆಲ್ಲಿ ಕೇಳೊ ಅಣ್ಣಾ ಕೇಳೊ ಯಲ್ಲಾ ಕಡೆಯೂ ಇಸ್ಸಿಸ್ಸಿ ನೋಡೊ ಅಣ್ಣಾ ನೋಡೊ || ಊಟವು ಶುದ್ಧ ಅಂತಾದ್ರೆ ಇದ್ಕೂ ಗಮನ ಬೇಕಲ್ವೆ ಎಲ್ರಿಗೂ ಆರೋಗ್ಯ ಬೇಕಂದ್ರೆ ಇದೂನು ಸೈತ ಮುಖ್ಯಲ್ವೆ || ಎಲ್ಲೆಲ್ಲೂ ಹೋದ್ರೆ ಅಲ್ಲೆಲ್...

ಮಾತು ಬಲ್ಲವರಲ್ಲಿ ಕೇಳಿದೆ ಅರ್ಥವಾವುದು `ಪ್ರೀತಿಗೆ’….. ಮಾತ-ಮಾತಿಗೆ ನಿಲುಕಲಾಗದ ಮೌನದಳವಿನ ರೀತಿಗೆ ಬರೆದೆ ಬರೆದರು `ಪ್ರೀತಿ’ಸುತ್ತಲು ಭಾಷೆ-ಭಾಷ್ಯವ ಬಗೆ… ಬಗೆ ಇನ್ನೂ ಬರೆವರ ಸಾಲ ಕಂಡು ಮನದಿ ಹೊಮ್ಮಿತು ಚಿರುನಗ...

ದುಡ್ಡು ಕೆಟ್ಟದ್ದೊ ಮನುಜಾ ಈ ಲೋಕದಿ ದುಡ್ಡು ಕೆಟ್ಟದ್ದೊ ಮನುಜಾ ||ಪ|| ಹೆಡ್ಡ ಮೂಢಾತ್ಮನೆ ದೊಡ್ಡ ದೊಡ್ಡವರನು ಮಡ್ಡು ಇಳಿಸುತ್ತಲೀ ಅಡ್ಡಬೀಳಿಸುವದು ||ಅ.ಪ|| ಹರನ ಪೂಜೆಯ ಕೆಡಿಸಿ ಸದ್ಗುರುವಿನ ವರಮಂತ್ರವನು ಬಿಡಿಸಿ ಗುರುಶಿಷ್ಯಭಾವವನರುಹಿ ಲಕ್ಷ...

ಒಳ್ಳೇ ನಾರಿ ಕಂಡೆ ಈಗಲೇ ಒಳ್ಳೇ ನಾರಿ ಕಂಡೆ ||ಪ|| ಇಳೆಯ ತಳದಿ ಕಳೆವರ ಭಲೆ ಋಷಿಗಳ ಮರುಳು ಮಾಡುವ ||ಅ.ಪ.|| ಕೈಯು ಕಾಲು ಇಲ್ಲಾ ಮೈಯೊಳು ಉಸುರು ಅಡಗಿತಲ್ಲಾ ವಿಷಯಸುಖದ ಪರಮಾತ್ಮ ಬ್ರಹ್ಮೋದಯ ನಿಶಿಕರದೊಳು ನಲಿದಾಡುತಿಹಳೋ ||೧|| ಮುಟ್ಟಲು ಕೊಲ್ಲು...

ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ ನೀರೊಳಗೆ ಕರಗಿ ಸುಟ್ಟು ಹೋಯ್ತು ಸುಣ್ಣಾ ||ಪ|| ಸತ್ಯವಿದು ಮಿಥ್ಯವಲ್ಲ ತಿಳಿಯೋ ಕಾಮಣ್ಣಾ ||ಅ.ಪ|| ಹೊನ್ನು ಹೆಣ್ಣು ಮಣ್ಣು ಈ ಮೂರು ಸುಳ್ಳಣ್ಣಾ ತಿಳಿದುನೋಡು ಗುರುವು ಕೊಟ್ಟ ಅವು ಮೂರು ಕಣ್ಣಾ ||೧|| ಕಳ...

ಕನ್ನಡವೇ.. ನನ್ನ ಉಸಿರು ಕನ್ನಡವೇ.. ನಮ್ಮ ಹಸಿರು ಕನ್ನಡದಿ ನಾವುಗಳು ಏಳ್ಗೆಯನು ಸಾಧಿಸಲು ಜೀವನವು ಸಾರ್ಥಕವು ಕನ್ನಡದ ಭೂಮಿಯಲಿ ಅನ್ನ, ನೀರು, ಕನ್ನಡವಾಗಿಸಿ ಬೆಳೆದು ಬಾಳುತಿರುವ ಕನ್ನಡಿಗರು ಪ್ರಾಣವನು ನೀಡಿಯಾದರೂ ಉಳಿಸಬೇಕು ಕನ್ನಡವಾ… ...

ತುಂಬಿದ ಸಿರಿಯ ಸೊಬಗಿನಲಿ ಗಿರಿವನ ಬೆಟ್ಟಗಳ ಹಸಿರಲಿ ಕನ್ನಡದ ಗಡಿಯಲಿ ಕನ್ನಡಮ್ಮನ ಅಳಲು ಆಲಿಸುವವರಿಲ್ಲ ಮೆರೆಯಬೇಕಿದ್ದ ಸಾಮ್ರಾಜ್ಞಿ ಬೆಂಡಾಗುತಿಹಳು ಬವಣೆಯಿಂದ ಜೋಭದ್ರ ನಾಯಕಮಣಿಗಳನು ಪಡೆದ ಕನ್ನಡನಾಡಿನ ಚಿತ್ರವ ಕಂಡು ಕಣ್ಣೀರಿನ ಹೊಳೆ ಹರಿಸುತಿ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...