Home / ಕವನ / ಕವಿತೆ

ಕವಿತೆ

ಯಕ್ಷಿಯನ್ನು ತೊರೆದಂದು ಯಕ್ಷ ಕಳಿಸಿದ್ದ ಮೇಘ ದೂತ ಪತ್ರ ಒಯ್ಯಲಿಕೆ ದಾರಿಯಿಲ್ಲದಿತ್ತಾಗ ಭಾವ ದೂತ ಅಕ್ಷರಕ್ಷದ ಯಕ್ಷ ಲೋಕವನು ಪತ್ರ ತೋರದೇನು ರಕ್ತ ರಕ್ತ ಉಸಿರಿಸುವ ರಾಗ ಅನುರಕ್ತಿ ಹರಿಸದೇನು ದೇಹ ದೂರದಲಿ ಇದ್ದರೇನು ಈ ದಾಹಕೆಲ್ಲಿ ದೇಹ ಮನೋಲೋಕದ...

ಅಕ್ಕ! ಆಗಾಗ ನುಗ್ಗುತ್ತಲೇ ಇರುತ್ತವೆ ನಿನ್ನ ಸತ್ಯ ಶೋಧದ ಅಮೃತ ವಚನಗಳು ಗುಣ ಗುಣಿಸುತ್ತೇನೆ ಕನವರಿಸುತ್ತೇನೆ ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಕದಳಿ ಬನದಿಂದೆದ್ದು ಬಂದು ನನ್ನ ಭುಜ ತಲುಕಾಡಿದೆ ಕ್ಷಮಿಸು! ಗುರುತು ಹಿಡಿಯಲೇ ಇಲ್ಲ ಮರುವೋ; ನಿದ...

ಅವನ ಅನೇಕ ಹೆಂಡಂದಿರಿದ್ದರಲ್ಲ ಅವರೇನಾದರು? ಅವರೆ?  ಕೆಲವರು ಅವರವರ ಹುಟ್ಟೂರಿಗೆ ಹೊರಟುಹೋದರು.  ಇನ್ನು ಯಾರನ್ನೋ ಆಶ್ರಯಿಸಿದರು.  ಕೆಲವರು ಚಾರ್‌ಮಿನಾರಿನ ಸಮೀಪ ಮಾಲೆಗಳನ್ನು ಕಟ್ಟಿ ಮಾರತೊಡಗಿದರು. ಹಳೆ ನಗರದ ಧೂಳು ಎಲ್ಲಾ ಹೂವುಗಳ ಮೇಲೂ ಕುಳಿ...

ಈ ಮಂದಿಯಾಗೆ ಹೋಗಲಾರೆನೇ ತಾಯೀ ಕಣ್ಣ ಬಾಣ ಬಿಟ್ಟು ಬಿಟ್ಟು | ನೋವ ಮಾಡತಾರೆ ತಾಯಿ ಹುಟ್ಟಿದಾಗ ತೊಟ್ಟಿಲಾಗೆ | ಕೆಟ್ಟ ಕಣ್ಣು ಮುಟ್ಟದ್ಹಾಂಗೆ ದಿಟ್ಟಿಯಿಟ್ಟು ಕಾಯುತಿದ್ದ | ನೆಟ್ಟಗಿದ್ದೆನೇ ತಾಯಿ ಹತ್ತು ವರುಷ ಬೆಳೆದೆ ನಾನು | ಮುತ್ತಿನಂಗಿ ಲಂಗ ...

ನಿರೀಕ್ಷೆಯ ಸಸಿ ನೆಟ್ಟು ಕ್ರಾಂತಿ ಋತು ಕೈಗೆತ್ತಿಕೊಂಡು ಭವಿಷ್ಯದ ಭಾರೀ ನಿರೀಕ್ಷೆಯಲ್ಲಿರುವಾಗಲೇ ಸುಟ್ಟು ಹೋದೆಯಲ್ಲೇ ಸುಧಾ- ಮಹಿಳಾ ವರ್ಷದ, ಕನ್ನಡ ಜಾಗೃತಿ ವರ್ಷದ ವೇಳಾಪಟ್ಟಿಯೊಳಗೆ ಸೇರುವ ಸಾಧಿಸಿ ತೋರಿಸುವ ಛಲದ ನಿನ್ನ ಕನಸುಗಳೆಲ್ಲಾ ಮಣ್ಣಾಗ...

೧ ಈಗ ಈ ಹವೇಲಿಯಲ್ಲಿ ಯಾರೂ ಇಲ್ಲ.  ಇದು ಯಾರಿಗೆ ಸೇರಿದ್ದೊ ಯಾರಿಗೂ ತಿಳಿಯದು.  ಹೊರಗೆ ಬೀದಿಯಲ್ಲಿರುವ ಪಾನ್‌ವಾಲ ಮುದುಕನ ಕಣ್ಣುಗಳಲ್ಲಿ ಇದರ ಚರಿತ್ರೆ ಇಳಿದುಹೋಗಿರುವಂತಿದೆ.  ಆದರೆ ಅವನೇನೂ ಹೇಳಲೊಲ್ಲ.  ವೀಳ್ಯದೆಲೆ ಹೊಸೆಯುವ ಅವನ ಕೈಗಳು ಯಾವ...

ಪರೆಯು ಪರೆಯು ತಾ ಹರಿಯುತಿಹುದು ಪರವಾದ ನೋಟದೀಟಿ ತೆರೆಯು ತೆರೆಯು ತಾವೋಡುತಿಹವು ಹರವಾಗೆ ಕಡಲದೋಟಿ ಹೆಜ್ಜೆ ಹೆಜ್ಜೆ ಸಜ್ಜಾಗುತಿಹವು ಬೆಳೆ ಬೆಳೆವ ಒಜ್ಜೆ ಹೊರಲು ಚರ್ಮ ಮರ್ಮದೊಳಕಡೆಗೆ ತೂರಿ ತುತ್ತೂರಿಯೇನೊ ಬರಲು ಪೆಟ್ಟು ಪೆಟ್ಟು ಬಡಿದಾಗ ಹಾವ ಭಾ...

ರಾಜ್ಯೋತ್ಸವ ಬಂದೇ ಬಿಡುತ್ತದೆ ಚಳಿಗಾಲ ಕಾಲಿಕ್ಕುತ್ತಿದ್ದಂತೆಯೇ ಮುದುರಿದ ಕನ್ನಡಮ್ಮನ ಶೃಂಗಾರ ನಾಡು ನುಡಿಗಳ ಹೊಗಳಿಕೆ ರಾಜಕೀಯದವುಗಳ ಉದ್ದುದ್ದ ಭಾಷಣ ಸಾಹಿತಿಗಳ ಹೊಗಳು ಭಟ್ಟಂಗಿ ಕೆಲಸ ಪ್ರಶಸ್ತಿಗಳ ಸುರಿಮಳೆ. ನಾಡಿನ ಜನರೇ ಎದ್ದೇಳಿ ಎದ್ದೇಳಿ ...

೧ ನಿರ್ಜನವಾದ ಬಯಲು ಹೊತ್ತಾದರೋ ಕಹಿಬೇವಿನ ಹೆಮ್ಮೆರಗಳ ಹಿಂದೆ ಮರೆಯಾಗುತ್ತಿದೆ ಒಂದಿಷ್ಟು ಇಳಿಬೆಳಕು ಮಾತ್ರ ಪುಡಿ ಪುಡಿಯಾದ ಒಣಹುಲ್ಲಿನ ಮೇಲೆ ಸಮಾನಾಂತರವಾಗಿ ಬಿದ್ದಿದೆ ಅಷ್ಟರಲ್ಲಿ ಎಡಗಡೆಯಿಂದ (ಅಥವಾ ಬಲಗಡೆಯಿಂದ) ರಾಮುಲುವೂ ಸೋಮುಲುವೂ ಅನುಮಾ...

ಹಬ್ಬಾ ಮಾಡ್ತಾರಪ್ಪಾ ಇವ್ರು ಹಬ್ಬಾ ಮಾಡ್ತಾರೆ ಗಬ್ಬು ಗಬ್ಬು ನಾತಾ ಹೊಡೆಯೊ ಹಬ್ಬಾ ಮಾಡ್ತಾರೆ ಗಂಟೆಗಟ್ಲೆ ದಿವಸಗಟ್ಲೆ ಆಯುಷ್ದಾಗೆ ವರುಷಗಟ್ಲೆ ಪೂಜಾ ಪುನಸ್ಕಾರ್ ಮಾಡಿ ಮಾಡಿ ಕಾಲ ಕೊಲ್ತಾರೆ ಹೂವು ಪತ್ರೀ ಹರದು ತರದು, ಗಿಡಗಳ ಕೊಂದು ಪೂಜೆಗೆಂದು ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....