Home / ಕವನ / ಕವಿತೆ

ಕವಿತೆ

ನಿನ್ನೆ ರಾತ್ರಿ ಮಳೆ ಬಂದಿತ್ತು. ಗಿಡ ಮರ ನೆಲ ಅಂಗಳ ಎಲ್ಲವೂ ಮೈ ತೊಳೆದಂತೆ ಶುಭ್ರ ಇರುವೆಗಳ ಗೂಡು ಮಾಯವಾಗಿತ್ತು ಮತ್ತೆ ಪತ್ರಿಕೆಯಲಿ ಸುದ್ದಿ ಅಚ್ಚಾಗಿತ್ತು. ರಾತ್ರಿ ಮಳೆ ಬಂದಿತ್ತಯ ಹೊಸ್ತಿಲು ಸುಮ್ಮನೆ ಮೈ ಚಾಚಿ ಮಲಗಿದರೆ ಕಿಟಕಿಯ ಫಡಕುಗಳು ಗ...

ಕೋಗಿಲೆಯೊಲವನು ಉಲಿದಾಗ, ಪೂರ್ವದ ಗಾಳಿಯು ಸುಳಿದಾಗ, ಪುಲಕದಿ ಮನ ಮೈ ಮರೆತಾಗ, ಗೆಳತಿ, ನೆನಪೇತಕೆ ಬರುವುದೊ ನಾನರಿಯೆ! ಗುಲಾಬಿ ಹೂವುಗಳರಳಿ, ತಿರೆ ಮಲಾಮೆಯಿಂದಲಿ ಮೆರೆಯುತಿರೆ, ಬಾಳಿನ ಕಂಬನಿ ಮರೆಯುತಿರೆ, ಗೆಳತಿ, ನೆನಪೇತಕೆ ಬರುವುದೊ ನಾನರಿಯೆ!...

ತಾರನಾಕದ ಚೌಕದಲಿ ನಿಂತು ತಾರೆಗಳನೆಣಿಸಲಾರೆವು ನಾವು ಒಂದೆಡೆ ಮೌಲಾ‌ಆಲಿ ಬೆಟ್ಟ ಇನ್ನೊಂದೆಡೆ ಯಾದ್ಗಿರಿ ಗುಟ್ಟ ಇವುಗಳ ನಡುವೆ ಆರಿಸಬೇಕೆಂದರೆ ಅದು ನಿಜಕ್ಕೂ ಕಷ್ಟ ಬನ್ನಿ, ಕುಳಿತು ಕುಡಿಯುತ್ತ ಮಿರ್ಚಿಭಜಿ ಕಡಿಯುತ್ತ ಸಮಸ್ಯೆಯ ಬಿಡಿಸಿ ಇದು ಇನ್ನ...

ಈಗೀಗ ಅವಳು ನಾಚಿಕೊಳ್ಳುವುದಿಲ್ಲ ಮೊದಲಿನಂತೆ ನೀರಾಗುವುದಂತೂ ದೂರದ ಮಾತೇ ಸರಿ ಮೂಗುತಿಯ ನತ್ತು ಅವಳೀಗೀಗ ಭಾರವೆನಿಸುತ್ತಿಲ್ಲ ಮುಂಗುರುಳು ನಲಿದು ಮುತ್ತಿಕ್ಕುವುದಿಲ್ಲ ಗಲ್ಲಗಳ ಚುಂಬಿಸಿ ಅವಳ ನುಡಿಯಲ್ಲಿ ಅಂದಿನ ಹುಡುಗಾಟವಿಲ್ಲ ಕಣ್ಣುಗಳಲ್ಲಿ ಆಗ...

ಬೆಳಗುತ ಬಂದಿತು ದೀವಿಗೆ ಹರುಷವ ತಂದಿತು ಬಾಳಿಗೆ ಕತ್ತಲನು ಓಡಿಸಿ ಮತ್ತೆ ಹಸನಾಗಿ ಬೆಳಕಾಗಿ ಬಂದೇ ಬಂದಿತು ಬಾಳಿಗೆ || ಬದುಕಿನ ಹಾದಿಯಲಿ ಸಂಬಂಧಗಳ ನಗೆಬೀರಲು ಚಿನಕುರುಳಿ ಹೂಬಾಣಗಳ ಹೂಡಿತು ದೀವಿಗೆ || ಅಂಬರದಲಿ ಅಪ್ಸರೆಯರ ಆಹ್ವಾನ ಚುಕ್ಕಿ ಚಂದ್...

ಓ ಎನ್ನ ಸೋದರಿ! ವೀರ ಭಾರತದ ನಾರಿ ! ಬಾ ಇಲ್ಲಿ ಹೊರಜಗಕೆ, ಶಾಂತಿ ಸಮತೆಯ ಎಡೆಗೆ ಹೋಗುವಾ ನಾವೆಲ್ಲ ಗಗನ ಗಡಿಯ ಮೀರಿ ಕರೆಯುತಿಹುದು ನೋಡಲ್ಲಿ ! ಬಾ ಭಾವಿನಾಡಿನೆಡೆಗೆ ನಿನಗಂದರವರಾರು ಅಬಲೆ ನೀನಿರುವಿ ಎಂದು ಅರಿಯಲಾರರೇ ಆದಿ ಅವತಾರ ಶಕ್ತಿ ಯಾರು ?...

ಬಾಗಿಲ ಬಡಿದಿದೆ ಭಾವೀ ವರ್ಷ ಬಗೆ ಬಗೆ ಭರವಸೆ ನೀಡಿ, ಭ್ರಮೆ ನಮಗಿಲ್ಲ ನೋವೋ ನಲಿವೋ ಬರುವುದ ಕರೆವೆವು ಹಾಡಿ. ಎಲ್ಲ ನಿರೀಕ್ಷೆ ಸಮಯ ಪರೀಕ್ಷೆಗೆ ಕೂರದೆ ವಿಧಿಯೇ ಇಲ್ಲ, ಕೂತದ್ದೆಲ್ಲ ಪಾಸಾದೀತೆ? ಜೊತೆ ಜೊತೆ ಬೇವೂ ಬೆಲ್ಲ ಕಾಲದ ಚೀಲದೊಳೇನೇ ಇರಲಿ ಕ...

ಮಧ್ಯಾಹ್ನದ ಬಿರು ಬಿಸಿಲು ಹೊರಗೆ ಒಳಗೆ ತೊಟ್ಟಿಲಲ್ಲಿ ಮಗು ಮಲಗಿದೆ ಅಡುಗೆ ಮನೆಯಿಂದ ಪರಿಮಳ ಸೂಸಿ ಗೋಡೆಯ ಮೇಲಿನ ಭಾವಚಿತ್ರಗಳ ಮೂಗರಳಿಸಿವೆ. ಚಿಟ್ಟೆ ಹರಿದಾಡದೇ ಕುಳಿತಿದೆ ಹೂವ ಮೇಲೆ. ಹೃದಯ ಮನಸ್ಸು ತಣ್ಣಗೆ ಹೈರಾಣ ಗೋಡೆಯ ಗಡಿಯಾರ ಸುಮ್ಮನೆ ಚಲಿ...

ಬಿಗುಮಾನ ಒಂದೆಡೆಗೆ ; ಬಿಂಕ ಮತ್ತೊಂದೆಡೆಗೆ. ಬೇರಾವುದೋ ಹೊಸತು ಭಾವನಾವರಿಸಿರಲು ಮೊದಲ ಪರಿಚಯದಂದು ಕಣ್ಣೆತ್ತಿ ನೋಡದೆಯೆ ಮೌನದಲಿ ಮಾತುಗಳ ಮುಳುಗಿಸುತ ಹಿಗ್ಗಿದೆವು. ಚಪಲ ಚಂಚಲ ಕಣ್ಣು ನೋಡಲೆಳಸುತಲಿತ್ತು! ಹೃದಯ ಹರಿಯುತಲಿರಲು ಒಲವ ಹೊನಲಾಗುತಲಿ ...

ತದೇಕ ಚಿತ್ತದಿಂದ ಎಲಾ ಯುವಕ ನೀನು ಅದೇನ ನೋಡುತ್ತಿರುವೆ ಗಾದೆಮಾತಿನ ಮೀನ ಹೆಜ್ಜೆಗಳನ್ನೋ ಅಥವ ನೀನು ಪ್ರೀತಿಸುವ ಹೆಣ್ಣಿನ ನಿಗೂಢ ಒಳದಾರಿಗಳನ್ನೋ? ತಳಮಳಿಸುವ ಸರೋವರದ ತೆರೆಗಳ ಮೇಲೆ ತೇಲಿ ಬರುತಿರುವ ಛಿದ್ರ ಚಿತ್ರ ತಳೆಯುವುದಾವ ರೂಪ ತಿಳಿಯಲು ನಾ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...