ಬಡವನ ಆಸೆ

ಜೀವ ಚಿಮ್ಮಿರುವ ಹೂವೇ ಹಾಡು ಹೊಮ್ಮಿರುವ ಹಗಲೇ ಮಾತಾಡುವಾಸೆ ನನಗೆ ನಿಮ್ಮೊಂದಿಗೆ ಮಿನುಗು ಹೆಜ್ಜೆಯ ತಾರೆಯೇ ಚಂದ್ರ ಚುಂಬಿತ ರಾತ್ರಿಯೇ ಬೆರೆಯುವಾಸೆ ನನಗೆ ನಿಮ್ಮೊಂದಿಗೆ. ಬಿಸಿಲ ಬಂಧನ ಮುರಿದು ಹಸಿರ ಹಾದಿಗೆ ಜಿಗಿದು ನಲಿಯುವಾಸೆ...

ಮಳೆ

ಬಸಿರು ತುಂಬಿದ ಮೋಡ ಕಾದು ಕರೆಯೊ ಭೂಮಿ- ಮುಗಿಲಿನ ಗಂಡ; ಮಳೆ ಮಗುವು ಎಲ್ಲೊ? ತೊಟ್ಟಿಲ ಸಿಂಗರಿಸಿ ಕಾದು ಕಣ್ಣರಳಿಸಿ ಕೂತೆವು ನಾವು ಕೂಸಂತು ಇಲ್ಲೊ. ಮುಗಿಲ ಮೈಯಿಳಿಯಿತೆ? ಕೆಟ್ಟ ಮುನಿಸಾಯಿತೆ? ನೆಲ ಮುಗಿಲು...
ಬೀದಿಗೆ ಬಂದ ಭ್ರಷ್ಟಾಚಾರ

ಬೀದಿಗೆ ಬಂದ ಭ್ರಷ್ಟಾಚಾರ

ಭ್ರಷ್ಟಾಚಾರದ ಬಹುಮುಖಿ ನೆಲೆಗಳನ್ನು ಕಂಡುಕೊಳ್ಳುವ ಜರೂರಿನಲ್ಲಿ ನಾವಿದ್ದೇವೆ; ಯಾಕೆಂದರೆ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಭ್ರಷ್ಟಾಚಾರ ವಿರೋಧಿ ಕೂಗು ಮತ್ತು ಕ್ರಿಯೆಗಳನ್ನು ನಾವು ಕಾಣುತ್ತಿದ್ದೇವೆ. ಭ್ರಷ್ಟಾಚಾರ ವಿರೋಧ ಎನ್ನುವುದು ಯಾವ ಹಂತಕ್ಕೆ ಹೋಗಿದೆಯೆಂದರೆ ರಾಜಕಾರಣಿ ಮತ್ತು...

ಸಾಲ ಸರ್ಪ

ಸಾಲ ಸರ್ಪವು ಬಂದು ಸಂಸಾರ ಸೇರಿತು ಚಿತ್ತ ಚಿತ್ತವನೆಲ್ಲ ಹುತ್ತವ ಮಾಡಿತು. ಸಣ್ಣ ಸಂದೀಲಿ ತೂರಿ ಬಂದಾ ಸರ್ಪ ಹೆಡೆಯತ್ತಿ, ಸತಿಗೆ ಆಯ್ತಲ್ಲ ಸವತಿ ಸವತಿಯ ಸಂತತಿ ಬುಸುಗುಟ್ಟಿ ಬೆಳೆದಂತೆ ಸಂಸಾರದಾಗೆ ಇನ್ನೆಂಥ ಶಾಂತಿ!...

ಶ್ರಮಜೀವಿಗಳ ಹಾಡು

ನಾವು ಕಟ್ಟಿದ ಗೆದ್ದಲಗೂಡು ನಿಮಗಾಯಿತು ಹುತ್ತ. ನಾವು ಹೊತ್ತ ಮಣ್ಣಿನ ಕನಸು ನಿಮಗಾಯಿತು ನನಸು. ನಾವು ನೀರೆರೆದ ಹೂವು ಹಣ್ಣು ನಮಗಾದವು ಹುಣ್ಣು. ಮೂಸಿ ನೋಡದ ಕಾಡು ಕಲ್ಗಳ ಮುದ್ದಾಡಿದೆವು ನಾವು ಕಲ್ಲು ಕಂದಗಳ...
ಉಳ್ಳವರ ಹೋರಾಟವಾದ ರಾಜಕೀಯ

ಉಳ್ಳವರ ಹೋರಾಟವಾದ ರಾಜಕೀಯ

‘ರಾಜಕೀಯ’ ಎಂಬ ಪದ ಮತ್ತು ಪರಿಕಲ್ಪನೆಗೆ ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಆಯಾಮ ಒದಗಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯರ್ಥಪೂರ್ಣ ಆಯಾಮ ಒದಗುತ್ತಿದೆ. ರಾಜಕೀಯವನ್ನು ಕುರಿತು ಮಾತನಾಡುವುದೇ ವ್ಯರ್ಥವೆಂಬ ವಿಷಾದ ಮತ್ತು ಹೇಸಿಗೆಯೆಂಬ ಜಿಗುಪ್ಸೆಯಲ್ಲಿ ಬಹುಪಾಲು ಜನರು...

ಸಂಬಂಧಗಳು

ಬಡತನ ಬಂದಾಗ ಸಂಬಂಧ ಸುಟ್ಟಿತು ನಮ್ಮ ಕರುಳೇ ನಮಗೆ ಕೈಕೊಟ್ಟು ನಕ್ಕಿತು. ಬಿರುಕು ಬಿಟ್ಟ ಗೋಡೆ ಮುರುಕು ಮಾಳಿಗೆ ಮನೆ ಮಳೆಯು ಸುಂಟರಗಾಳಿ ಮನಸಾಗಿ ಮೂಡಿತು. ಸುಟ್ಟ ಬೂದಿಯ ಮ್ಯಾಲೆ ಸತ್ತ ಸಂಬಂಧಗಳು ಕೊಂಡಿ...

ನೋವಿನ ಬೆಳಕು

ನನ್ನ ನುಂಗುತಿಹ ನೋವುಗಳೇ ಬಾಳ ತುಂಬುತಿಹ ಬೇವುಗಳೇ ಕಾಳ ರಾತ್ರಿಯಲಿ ಕಾಡಾಗದಿರಿ ಬಾಳ ಬೀದಿಯಲಿ ಹಾವಾಗದಿರಿ ಮೋಡದ ಮುಸುಕ ಮೆಲ್ಲನೆ ಸರಿಸಿ ನಗುವ ಚಂದ್ರ ಬೇಕು ಕಾಡುವ ಕತ್ತಲ ಕತ್ತನು ತರಿದು ನೆಗೆವ ಸೂರ್ಯ...
ಜಾತ್ಯತೀತತೆ : ಒಂದು ನೋಟ

ಜಾತ್ಯತೀತತೆ : ಒಂದು ನೋಟ

‘ಜಾತ್ಯತೀತತೆ’ಯನ್ನು ಪ್ರತಿಪಾದಿಸುವ ಕೆಲವು ವಿಚಾರವಂತರನ್ನು ಸರಳವಾಗಿ, ಸುಲಭವಾಗಿ ಲೇವಡಿ ಮಾಡುವ ಮತ್ತೊಂದು ವರ್ಗದ ವಿಚಾರವಂತರೂ ನಮ್ಮಲ್ಲಿದ್ದಾರೆ. ಇಂಥವರು ಈ ದೇಶದ ಸಂಕೀರ್ಣ ಸ್ವರೂಪವನ್ನು ಅರ್ಥಮಾಡಿಕೊಂಡಿದ್ದಾರೆಯೆ ಎಂಬ ಅನುಮಾನವುಂಟಾಗುತ್ತದೆ. ಒಂದು ದೇಶದ ‘ಸಂಸ್ಕೃತಿ’ಯನ್ನು ಅಂಕಗಣಿತದ ಮಟ್ಟಕ್ಕೆ...

ದಿವ್ಯಾತ್ಮರು

ಉತ್ತ ನೇಗಿಲು ಬಂದು ನೆತ್ತಿಗೆ ಬಡಿಯಿತು ಕಿತ್ತ ಕಳೆಯೇ ನಮ್ಮ ಬದುಕಾಯಿತು. ನಮ್ಮತ್ತ ಬರಲಿಕ್ಕೆ ಅತ್ತು ಕರೆದರೂ ಪೈರು ಬಿಡಲಿಲ್ಲ ಅವರು ತಲೆಯನು ಕುಟ್ಟಿ ಹೆಡಮುರಿ ಕಟ್ಟಿ ಎಳೆದೊಯ್ದರಲ್ಲಾ-ಎಳೆದೊಯ್ದರು. ಕೂಳೆ ಹೊಲದ ಬಾಳು ಮಾಡಿದರಲ್ಲಾ-ಮಾಡಿದರು...