ಸ್ಪರ್ಶ

ಎಂದೋ ಬಿದ್ದ ಕಾಳೊಂದು ಇತ್ತೀಚಿನ ಮಳೆಗೆ ಮೊಳಕೆಯೊಡೆದು ಎರಡೆಲೆ ಚಿಗುರಿಸಿ ನಗುತಿದೆ ಕಾಪೌಂಡಿನಾಚೆ ಮೋಡವೇ ಹೆಪ್ಪುಗಟ್ಟಿ ಗವ್ವೆನ್ನುವ ವಾತಾವರಣ ಮನೆಯೊಳಹೊರಗೆಲ್ಲ- ಕುಡಿ ಮೂಡುವ ಸಂಭ್ರಮಕೆ ಕಾದೂ ಕಾದೂ ಕೊನೆಗೆ ಸ್ನಾನ ಕಣ್ಣೀರೂ ಬಚ್ಚಲು ಮೋರಿಗೆ,...

ಬ್ರಹ್ಮ ಕಮಲ

ಗವ್ವನೆಯ ಅಮವಾಸೆಯ ಕಗ್ಗತ್ತಲು ಮಳೆಗಾಲದ ಕವದಿಹೊದ್ದು ಗಡದ್ದಾಗಿ ಮಲಗಿದ್ದು ಕನಸುಗಳೂ ಒಡೆಯದ ನಿಶ್ಶಬ್ದ ರಾತ್ರಿಗೆ ಸವಾಲು ಎನ್ನುವಂತೆಯೋ ಏನೋ ಕತ್ತಲಂಗಳಕೆ ಚಂದ್ರಲೇಪಿತ ಕಮಲೆ ಹುಟ್ಟಬೇಕೆ? ಎಳೆಗೂಸು ಎಸಳು ಇನ್ನೂ ಹೊಕ್ಕಳಬಳ್ಳಿ ಬಿಡಿಸಿಲ್ಲ ಕಣ್ಣಲ್ಲೇ ಕಣ್ಣಿಟ್ಟಿದ್ದರೂ...

ನಿಗೂಢ ಘಳಿಗೆ

ನಾವು ಮತ್ತೆ ಮತ್ತೆ ಕೆಲವು ಪ್ರಶ್ನೆಗಳನ್ನು ಸಾಕಿಕೊಳ್ಳಲೇಬಾರದು ಅವು ನಾಯಿಗಳನ್ನು ಸಾಕಿಕೊಂಡಂತೆ ಒಮ್ಮೊಮ್ಮೆ ಕಿರಿಕಿರಿ ಮತ್ತೊಮ್ಮೆ ಪ್ರೀತಿ ನಾವು ಮತ್ತೆ ಮತ್ತೆ ಉತ್ತರಗಳನ್ನು ಬಿಟ್ಟುಕೊಡಲೇಬಾರದು ಅವು ಮೀನುಗಳಂತೆ ಪುಳಕ್ಕನೆ ಜಾರಿ ಕಣ್ಮರೆ ಸುಳಿಗೆ ಸಿಕ್ಕು...

ಭೂಮಿ

ನೆಲದೊಡಲಾಳದ ಭಾವಬೇರುಗಳ ಹೊಯ್ದಾಟ ಚಡಪಡಿಕೆ ನೋವು ಹತಾಶೆ ಕಿಡಿಬಿದ್ದರೆ ಕೊನೆ, ಭಯ ಆತಂಕ ಕಾದು ಕಾದು ಬೆಂಡಾದ ಕಣ್ಣುಗಳಿಗೆ ಬೆಂದ ಎದೆಗೂಡು ಹಸಿದೊಡಲುಗಳಿಗೆ ತುಂಬಿನಿಂತ ಕಪ್ಪನೆಯ ಮೋಡಗಳ ಕಂಡು ಸಂಭ್ರಮ ಒಳಗೊಳಗೆ ಹನಿಹನಿಗೆ ಹಪಿಹಪಿಸಿ...