ಗಂಟೆ ಸರಿಯುವುದು, ಬೆಳಗಿದ ಹಗಲು ಇಳಿಯುವುದು

ಗಂಟೆ ಸರಿಯುವುದು, ಬೆಳಗಿದ ಹಗಲು ಇಳಿಯುವುದು ಕರಿಗಪ್ಪು ಇರುಳಲ್ಲಿ, ಮುಪ್ಪು ನೇರಿಳೆ ಹೊಗೆ, ಕಪ್ಪು ಗುಂಗುರುಳು ನೆರೆ ಬಣ್ಣಕ್ಕೆ ಹೊರಳುವುದು; ಉರಿಬಿಸಿಲ ಹೀರಿ ಹಿಂದೆಲ್ಲ ಕುರಿಮಂದೆಗೆ ತಂಪೆರೆದ ಭಾರಿ ಮರಗಳ ಹಸಿರು ಛಾವಣಿ ಎಲೆಗಳಚಿ...

ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು

ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು ಭಯವೆ, ಒಬ್ಬಂಟಿ ಬದುಕನ್ನೇಕೆ ತೇಯುವೆ ? ಸಂತಾನ ಭಾಗ್ಯವಿಲ್ಲದೆ ನೀನು ಸತ್ತಂದು ಜೊತೆ ಕಡಿದ ಹೆಣ್ಣಂತೆ ಈ ಲೋಕ ನರಳದೆ ? ಉಳಿದ ವಿಧವೆಯರೆಲ್ಲ ತಮ್ಮ ಮಕ್ಕಳ ಕಣ್ಣ ನೋಟದಲ್ಲೇ...

ಅದೊ ಪೂರ್ವದಿಕ್ಕಿನಲಿ ಘನ ಉದಾತ್ತಜ್ಯೋತಿ

ಅದೊ ಪೂರ್ವದಿಕ್ಕಿನಲಿ ಘನ ಉದಾತ್ತಜ್ಯೋತಿ ತನ್ನ ಬೆಳಕಿನ ಶಿರವನೆತ್ತುತಿದೆ, ಕೆಳಗಿಲ್ಲಿ ; ಇಳೆಯ ದೃಷ್ಟಿಗಳು ಆ ರಾಜಗಾಂಭೀರ್ಯದತಿ ಹೊಸ ಬಗೆಯ ದರ್ಶನಕೆ ನಮಿಸುತಿವೆ ಬೆರಗಲ್ಲಿ. ಕಡಿದಾದ ಮೇರುಗಿರಿ ನೆತ್ತಿಯನ್ನೇರಿ ರವಿ ನಡುವಯಸ್ಸಿನ ಕ್ಷಾತ್ರದಲ್ಲಿ ಝಗಝಗಿಸಿರುವ,...

ಎಲೆ ಚೆಲುವ ದುಂದುಗಾರನೆ

ಎಲೆ ಚೆಲುವ ದುಂದುಗಾರನೆ ಏಕೆ ವ್ಯಯಿಸುವೆ ಪಡೆದ ಸ್ವತ್ತನ್ನೆಲ್ಲ ಬರಿದೆ ನಿನಗಾಗೇ? ನಿಸ್ಪೃಹಳು, ಪ್ರಕೃತಿ ನೀಡುವುದೆಲ್ಲ ಸಾಲವೇ, ಅದನು ಸಹ ನೀಡುವಳು ಕೇವಲ ಉದಾರಿಗೆ. ಎಲೆ ಜಿಪುಣ ಚೆನ್ನಿಗನೆ ದಾನಮಾಡಲು ಇತ್ತ ಭಾರಿ ಕೊಡುಗೆಯ...

ನೋಡಿಕೋ ಮುಖವ ಕನ್ನಡಿಯಲ್ಲಿ

ನೋಡಿಕೋ ಮುಖವ ಕನ್ನಡಿಯಲ್ಲಿ, ಇಂಥದನೆ ಇನ್ನೊಂದ ಕೊಡು ಎಂದು ಕೇಳಿಕೋ. ನೀ ನಿನ್ನ ಮತ್ತೆ ಸೃಷ್ಟಿಸಿಕೊಳದೆ ಬಿಟ್ಟಲ್ಲಿ ಲೋಕವನೆ ವಂಚಿಸುವೆ, ಜೊತೆಗೆ ಹೆಣ್ಣೊಂದಕ್ಕೆ ತಾಯ್ತನವ. ನಿನ್ನ ಪೌರುಷದ ಬಿತ್ತನೆಗೆ ಒಪ್ಪದ ಕನ್ನೆ ಇರುವಳೇ ?...

ನಲವತ್ತು ಚಳಿಗಾಲಗಳ ಸತತ ದಾಳಿಗೆ ಹೂಡಿ

ನಲವತ್ತು ಚಳಿಗಾಲಗಳ ಸತತ ದಾಳಿಗೆ ಹೂಡಿ ನಿನ್ನ ಚೆಲುಮೈಯ ಬಯಲಲ್ಲಿ ಕುಳಿಗಳು ತೆರೆದು, ಜನ ಮೆಚ್ಚಿ ದಿಟ್ಟಿಸುವ ಹರೆಯದೀ ಸಿರಿತೊಡಿಗೆ ಏನೇನೂ ಬೆಲೆಯಿರದ ಹರಕು ಜೂಲಾಗುವುದು. ನಿನ್ನ ಹಿಂದಿನ ಚೆಲುವದೆಲ್ಲಿ, ಜ್ವಲಿಸುವ ಹರೆಯ ತಂದ...

ಚೆಲುವಿನ ಗುಲಾಬಿ ಎಂದೂ ತೀರದಿರಲೆಂದೆ

ಚೆಲುವಿನ ಗುಲಾಬಿ ಎಂದೂ ತೀರದಿರಲೆಂದೆ ಸುಂದರ ತಳಿಗಳೆಲ್ಲ ವೃದ್ದಿಸಲಿ ಎನ್ನುವುದು, ಹಣ್ಣಾದದ್ದೆಲ್ಲವೂ ಮಣ್ಣಿಗುರುಳುವ ಮುಂಚೆ ನೆನಪನುಳಿಸಲು ತನ್ನ ಕುಡಿಯನ್ನು ಪಡೆಯುವುದು. ನೀನೊ ನಿನ್ನದೆ ಕಣ್ಣಕಾಂತಿಯಲಿ ಬಂಧಿತ, ನಿನ್ನ ಚೆಲುವಿನ ಉರಿಗೆ ಆತ್ಮತೈಲವ ಎರೆವೆ, ಸಮೃದ್ಧಿ...

ಕಡಲು ಬೆಟ್ಟಕ್ಕೆ ಹೇಳಿತು

ಕಡಲು ಬೆಟ್ಟಕ್ಕೆ ಹೇಳಿತು: "ನನ್ನ ತಳ ಮಂದರ, ನಿನ್ನ ಮುಡಿ ತಾರ, ನಡುವಿನ ಸ್ವರಸಹಿತ ನಾನೂ ನೀನೂ ಕೂಡಿ ಭೂಮಿ ಏನು ಗಾನಮನೋಹರ!" ಬೆಟ್ಟ ಕಡಲಿಗೆ ಹೇಳಿತು : "ಅದಕ್ಕೆಂದೇ ಆಗಸ ಪ್ರತಿ ರಾತ್ರಿ...

ನೆರೆಯವರು ನಕ್ಕರು

ನೆರೆಯವರು ನಕ್ಕರು: "ಇವನಿಗೆ ಹುಚ್ಚು ಕಚ್ಚಿದೆ ಮುಖದಲ್ಲಿ ದಿಗಿಲು ಬಿಚ್ಚಿದೆ ಹುಲಿಕಣ್ಣೆಲ್ಲೋ ದಿಟ್ಟಿಸಿ ನೋಡಿದೆ ಮೊಸರನ್ನದ ಬಲಿಕೊಟ್ಟರೆ ಹೊಸದನಿ ಮಾಯುತ್ತದೆ. ಇವನು ಹೊಸಿಲು ದಾಟದಂತೆ ಕಾಯುತ್ತದೆ." ಅವರಿಗೇನು ಗೊತ್ತು ಪ್ರತಿ ರಾತ್ರಿ ಅಧೋಲೋಕಗಳ ಕದ...

ಅಚ್ಚರಿ ಕಚ್ಚಿದ ಬದುಕು

ಅಚ್ಚರಿ ಕಚ್ಚಿದ ಬದುಕಿನ ಆಸೆ ಮುಗಿಯದು. ನುಡಿಯಲು ಭಾಷೆ ಸಾಲದು. ಬೆದೆ ಕುದಿವ ಗೂಳಿಯ ಕುರುಡು ಆವೇಶಕ್ಕೂ ಬರಡು ಹಸು ಬಸಿರು ತಾಳದು ಪಹರೆ ದನಿಗಳೆಲ್ಲ ಮುಜುರೆಮಾಡಿ ಸರಿದವು. ಈಗ ನನ್ನದೆ ಕೊರಳು, ತಪ್ಪಿ...