ಪ್ರೀತಿ ನೆಲೆಯಲ್ಲೇನೊ ನಾವಿಬ್ಬರೂ ಒಂದೆ

ಪ್ರೀತಿ ನೆಲೆಯಲ್ಲೇನೊ ನಾವಿಬ್ಬರೂ ಒಂದೆ, ಆದರೂ ಅಂತಸ್ತಿನಲ್ಲಿ ಭಿನ್ನ ವಿಭಿನ್ನ : ನನಗೆ ಹತ್ತಿದ ಕಳಂಕವನೆಲ್ಲ ಅದಕೆಂದೆ ಒಬ್ಬನೇ ಹೊರುವೆ ಬಯಸದೆ ನಿನ್ನ ನೆರವನ್ನ ನಮ್ಮ ಬಾಳಿನಲ್ಲಿ ಅಂತರವೇನೆ ಇದ್ದರೂ ಏಕ ಬಗೆ ಗೌರವ...

ಮಾಡಿದ್ದ ನೆನೆದು ಮರುಗುವುದ ನೀನಿನ್ನು ಬಿಡು

ಮಾಡಿದ್ದ ನೆನೆದು ಮರುಗುವುದ ನೀನಿನ್ನು ಬಿಡು : ಬೆಳ್ಳಿ ಚಿಲುಮೆಗೆ ಕೂಡ ಕೆಸರಿದೆ, ಗುಲಾಬಿಗೂ ಮುಳ್ಳಿದೆ, ಗ್ರಹಣ ಮುಗಿಲು ಅಡ್ಡ ಹಾಯುವ ಕೇಡು ಸೂರ್‍ಯ ಚಂದ್ರರಿಗು ಇದೆ, ರಸಗರೆವ ಮೊಗ್ಗಿಗೂ ಒಡಲಿನೊಳಗೇ ಕೆಟ್ಟ ಕೀಟವಿದೆ....

ಬೆಚ್ಚನೆಯ ಸಿರಿಹಗಲ ಭರವಸೆಯ ನನಗಿತ್ತು

ಬೆಚ್ಚನೆಯ ಸಿರಿಹಗಲ ಭರವಸೆಯ ನನಗಿತ್ತು ಮಳೆಯಂಗಿ ಇರದೆ ಪ್ರಯಾಣಿಸಲೇಕೆ ಪ್ರೇರಿಸಿದೆ ? ನನಗಡ್ಡ ಬರುವಂತೆ ಕರಿಮೋಡಕೆಡೆಯಿತ್ತು ಹೊಲಸುಗಪ್ಪಲ್ಲಿ ಚೆಲುವನ್ನೇಕೆ ಮರೆಸಿದೆ ? ಕರಿಮುಗಿಲ ತೂರಿ ಹೊರಬಂದು ಗಾಳಿಗೆ ಜರೆದ ಕಂಗೆಟ್ಟ ಮುಖದ ಮಳೆ ಹನಿ...

ಪ್ರಭುದೃಷ್ಟಿ ಹರಿದು ಗಿರಿತುದಿಗೆ ಹೆಮ್ಮೆಯನೆರೆದು

ಪ್ರಭುದೃಷ್ಟಿ ಹರಿದು ಗಿರಿತುದಿಗೆ ಹೆಮ್ಮೆಯನೆರೆದು, ಹೊನ್ನ ತುಟಿಯೊತ್ತಿ ಹಸಿರೆದೆಗೆ ಮುತ್ತನು ಸುರಿದು, ಮಂಕುತೊರೆಮೈಗೆ ಬಂಗಾರ ರಸವನು ಬಳಿದು, ಹೊಳೆವ ಬೆಳಗಿನ ಚೆಲುವ ನೋಡಿರುವೆ ಮೈಮರೆದು. ಥಟ್ಟನೇಳುವುವು ಕೆಳಗಲೆವ ಕಾರ್ಮೋಡಗಳು ದಿವ್ಯಮುಖ ಮರೆಸಿ ಕರಿತೆರೆಯಾಗಿ ತೇಲುವುವು,...

ನನ್ನ ಜೀವಿತ ಮುಗಿದು ಕಾಲ ಮೂಳೆಗಳನ್ನು

ನನ್ನ ಜೀವಿತ ಮುಗಿದು ಕಾಲ ಮೂಳೆಗಳನ್ನು ಮಣ್ಣಲ್ಲಿ ಹೂಳುವನು. ಅದೃಷ್ಟದಿಂದಾಗ ನೀ ನನ್ನ ಕಳಪೆ ಸಾಲುಗಳ ಓದಿದೆಯೆನ್ನು. ನನ್ನ ಕಾಲದ ಪ್ರಗತಿ ಜೊತೆಗೆ ಹೋಲಿಸಿದಾಗ ಪ್ರತಿಯೊಂದು ಬರೆಹವೂ ಮೀರಿದ್ದರೂ ಇದನು, ಇದರ ಕೌಶಲ ಆ...

ಮಧುರ ನೀರವ ಚಿಂತನೆಗಳ ಅಧಿವೇಶನಕೆ

ಮಧುರ ನೀರವ ಚಿಂತನೆಗಳ ಅಧಿವೇಶನಕೆ ಗತಘಟನೆ ಸ್ಮರಣೆಗಳನೆಲ್ಲ ಕರೆಕಳಿಸುವೆನು ; ಕುದಿವೆ ಬಯಸಿದ್ದೆಷ್ಟೊ ಅಲ್ಲಿ ಇಲ್ಲದ್ದಕ್ಕೆ, ಹಳೆವ್ಯಥೆಗೆ ಹಾಳಾದ ಕಾಲಕ್ಕೆ ಮರುಗುವೆನು. ಗಳಿಗೆ ದಿನ ಇರದ ಸಾವಿನ ಆಳರಾತ್ರಿಯಲಿ ಹುಗಿದ ಪ್ರಿಯಮಿತ್ರರಿಗೆ ಮರಮರಳಿ ಬೇಯುವೆನು....

ವಿಧಿಯ ದುರ್ಲಕ್ಷ್ಯಕ್ಕೆ ಜನದ ನಿರ್ಲಕ್ಷ್ಯಕ್ಕೆ

ವಿಧಿಯ ದುರ್ಲಕ್ಷ್ಯಕ್ಕೆ ಜನದ ನಿರ್ಲಕ್ಷ್ಯಕ್ಕೆ ತುತ್ತಾಗಿ ಕುಳಿತು ನಾನೊಬ್ಬನೇ ದುಃಖಿಸುವೆ ನನ್ನೀ ಅನಾಥತೆಗೆ. ಕಿವಿಸತ್ತ ಸ್ವರ್ಗಕ್ಕೆ ಮೊರೆಯಿಡುವೆ ಒಂದೆ ಸಮ. ಬರಿವ್ಯರ್ಥ ಚೀರಿಡುವೆ ನನ್ನ ಬಾಳನು ನಾನೆ ಶಪಿಸಿ, ಭರವಸೆ ಸುರಿವ ಯಾರ ಬಾಳನೊ...

ದಿನವಿಡೀ ಸುತ್ತಾಡಿ ಸೋತು ಮೈ ಕೈ ಭಾರ

ದಿನವಿಡೀ ಸುತ್ತಾಡಿ ಸೋತು ಮೈ ಕೈ ಭಾರ, ಧಾವಿಸುವೆ ಹಾಸಿಗೆಗೆ ಪ್ರಿಯವಿಶ್ರಾಂತಿ ನೆಲೆಗೆ ; ಶುರುವಾಗುವುದು ಆಗ ತಲೆಯೊಳಗೆ ಸಂಚಾರ ; ಮೈಕೆಲಸ ಮುಗಿದು ಮನ ಹಾಯುವುದು ಚಿಂತನೆಗೆ. ನಾನಿರುವೆ ಎಲ್ಲೊ ದೂರದಲಿ, ಆಲೋಚನೆಯ...

ದೆಸೆ ತಿರುಗಿ ಮೇಲೆದ್ದ ಜನ ತಮಗೆ ಗಿಟ್ಚಿರುವ

ದೆಸೆ ತಿರುಗಿ ಮೇಲೆದ್ದ ಜನ ತಮಗೆ ಗಿಟ್ಚಿರುವ ಬಿರುದು ಬಾವಲಿಯನ್ನು ಕೊಚ್ಚಿಕೊಳ್ಳಲಿ ಬೀಗಿ, ನನಗಿಲ್ಲ ಅಂಥ ಅದೃಷ್ಟ, ನನ್ನೆಲ್ಲ ಸುಖ ಬಲು ಹಿರಿಯದೆಂದು ನಾ ಗೌರವಿಸಿದುದರಲ್ಲಿ. ರಾಜಕೃಪೆ ದಕ್ಕಿ ವೀರರ ಕೀರ್ತಿ ಹಬ್ಬುವುದು ರವಿಕಿರಣ...

ನನ್ನ ಎದೆಹಲಗೆಯಲಿ ನಿನ್ನ ಶ್ರೀಮೂರ್ತಿಯನು

ನನ್ನ ಎದೆಹಲಗೆಯಲಿ ನಿನ್ನ ಶ್ರೀಮೂರ್ತಿಯನು ಚಿತ್ರಿಸಿದೆ ಈ ಕಣ್ಣು ಚಿತ್ರಕಾರನ ಹಾಗೆ ; ನನ್ನ ಮೈಕಟ್ಟು ಬಳಸಿದೆ ನಿನ್ನ ಚಿತ್ರವನು, ಸಾಕ್ಷಿಯಾಗಿದೆ ಚಿತ್ರ ಬಹು ಮಹೋನ್ನತ ಕಲೆಗೆ, ನಿನ್ನ ನಿಜವ್ಯಕ್ತಿತ್ವ ರೂಪ ಪಡೆದಿರುವ ಬಗೆ...