ಇಳಿಹೊತ್ತು

ಸಂಜೆ... ಇಳಿ ಹೊತ್ತಿನಲಿ ಏಕಾಂಗಿತನದಿ... ನಾ ಬೆಟ್ಟವೇರುತಿರಲು ಬೆಳ್ಳಿಯಾಗಸವ ಭೇದಿಸುತ ನಿಸರ್ಗದ ನೈರ್ಮಲ್ಯ ಆಲಿಸುತ ನಿರ್ಲಿಪ್ತತೆಯ ನಿಷೆ ಆವರಿಸಿತ್ತು ಆ ಬಿಳಿಯಾಗಸದಿ ಭೇದವನೆಣಿಸದೆ ಬರಸೆಳೆದು ಮುತ್ತಿಡುತ... ಜೋಡಿಯಲಿ - ಹತ್ತಿರವಾಗಿ... ಬಾನಲಿ ಹಕ್ಕಿಗಳು ಹಾರುತಿರಲು...

ಸಂಗಾತಿ

ಬಾಳ ಸಂಗಾತಿ... ಸೌಂದರ್ಯಸಾಗರದಿ ತೇಲುವ ಪ್ರೀತಿಯ ಒಡತಿ... ನೀನಾರು... ನಾನರಿಯೆ ಕಣ್ಣು ತುಂಬಾ... ಮನವೆಲ್ಲಾ ತುಂಬಿರುವಿ ಮಿಂಚಿನ ಹಾಗೆ... ಮುಸಕದಿ ಮಾಯೆಯಾಗಿ ನಿನ್ನಾ... ಪ್ರತಿಬಿಂಬ ಬಾ-ಎನ್ನುತಿರುಲು ತನು-ಮನ ಹಾತೊರೆದು ನಿನ್ನಾಲಿಂಗನದ ಸಾಮಿಪ್ಯ ಕಲ್ಪನೆಯ ನೂರೆಂಟು...

ಗುರು

ಗುರು ಬ್ರಹ್ಮ - ಗುರು ವಿಷ್ಣು ಗುರು ಸಕಲ ಚರ್‍ಯ ಜೀವಿಗಳ ಸನ್ಮಾರ್ಗ - ಸುವಿಚಾರಗಲ ತ್ಯಾಗಮಯ - ಸಾಕಾರಮೂರ್ತಿ ಬದುಕಲಿ - ಬೇಯುತಲಿ... ಭವಕ್ಕೆಲ್ಲಾ - ಭಾವಜೀವಿಯಾಗಿ ಎಳೆ ಜೀವ ಸಮೂಹಕ್ಕೆಲ್ಲಾ ಸುಮವಾಗಿಸಿ...

ಘರ್ಷಣೆ

ಹಸಿವೆ-ನೀರಡಿಕೆಯಲಿ ಜೀವಂತ ಹೆಣವಾಗುತ ವಂಚನೆಗೆ ಬಲಿಯಾಗಿ ಬಳಲುತ... ಬಿದ್ದಿಹರು ಜಾತಿ-ಧರ್ಮಗಳ-ಭೇದದಲಿ ದ್ವೇಷ-ಬೆಸೆದು ಭಗ್ನಗೊಳಿಸುತ... ಬಾಂಧವ್ಯದ ಹಸಿರು ಬಳ್ಳಿಯ ಕಡಿದು ಬರಡುಗೊಳಿಸಿಹರು ತಾಳ್ಮೆ-ನೋವುಂಡ ಜೀವಕ್ಕೆ ಸಹನೆ-ಮೀರಿದ ಬದುಕಿಗೆ ಕೊನೆ ಹೇಗಾದರೇನು... ಮಿತಿ ಎಲ್ಲೆಂದು ಕೇಳರು ಪ್ರೀತಿ-ವಾತ್ಸಲ್ಯಗಳ......

ಬಾಳು ಗೋಳು

ಬಾಳು... ಬರಿ ಗೋಳು ನಿರಾಶೆಯ... ಮಡುವು ಬರಿ ನೋವಿನ ತಿರುವು ಹಲವು ಮುಖಗಳಲಿ ನೋವು ನಡೆದಿದೆ ವಿಧ-ವಿಧದಲಿ ಗೋಳು ಮೇಲು ಕೀಳು-ರೋಗದಲಿ ಹಣವಂತರ ಅಬ್ಬರದಲಿ ಆಧುನಿಕತೆಯ ಹೆಸರಿನಲಿ ಕಳೆದು ಹೋಗುತಿದೆ ಈ ಬಾಳು ನೀತಿಯ...

ಶಿಲ್ಪಿ

ಭವ್ಯ ಭಾರತದ ಕುಶಲ ತೋಟಿಗ ನಾಡಿನ ಭವಿಷ್ಯದ ಸಾಕಾರ ಶಿಲ್ಪಿ ನಿನಗೆಷ್ಟೊಂದು ಪೂಜಿಸಿದರೂ... ಪ್ರೀತಿಯಲಿ ಗೌರವಿಸಿದರೂ ನಿನ್ನಾ.. ಮಹಾನ್ ತ್ಯಾಗ-ಭೋದನೆಗೆ ಬೆಲೆಯಿಲ್ಲ. ಇಂದು.. ಅದು ಮಾಯವಾಗುತಿಹದು ನಿಷ್ಠೆ-ಗೌರವ-ಹುಸಿಯಾಗುತಿಹವು ನಾಚಿಕೆ-ಸಂಕೋಚ ದೂರ ತಳ್ಳುತ ಹಗಲಿನಲಿ ಹರಾಜು...

ಸೆಪ್ಟೆಂಬರ – ೧೧

ಗಗನಚುಂಬಿ ಮಹಡಿಗಳಿಗೆ ಮುತ್ತಿಡುವ ಆತುರದಿ... ನಾ... ನೀ... ಎನ್ನುತಲೆ ಮುತ್ತಿಟ್ಟವು ಮನುಕುಲದ ಬುಡವೇ ಅಲುಗಾಡಿತು ಬಾಂಧವ್ಯ ಬೆಸೆದು ನಿಂತ ಮಹಡಿಗಳು ಒಮ್ಮೆಲೆ ಜಾರಗುಂಡಿಯಾಟವಾಡಿದವು ಬಿದ್ದ ಗತಜೀವನ ಮಹಡಿಗಳು ಮಣ್ಣು ಧೂಳಿನ ಮುಸುಕಲಿ ಮುಚ್ಚಿದವು ಕನಸುಗಳ...

ಸಂಕ್ರಾಂತಿ

ಸಗ್ಗದಿ... ಸಂಕ್ರಾಂತಿ ಸಡಗರದಿ ಬರುತಿರೆ ಸವಿಯ ಸಂಕೇತದಿ ಎಳ್ಳು-ಸಕ್ಕರೆ ವಿನಿಮಯಿಸುತ್ತ ಸಾಗೋಣ ಸರಸದಿ ಸೌಹಾರ್ದತೆಯಲಿ ಮೇಲು-ಕೀಳು ಭೇದಭಾವ ಮರೆತು ಕ್ರಾಂತಿಯ ಸಂದೇಶ... ಸಕಲರಿಗೂ ಸಾರುತಲಿ... ಸಹಬಾಳ್ವೆಯಲಿ... ಸಾಗೋಣ. ಜಲ-ನೆಲ-ಕಾಡಿನ ರಕ್ಷಕರು ನಾವಾಗಿ ಮೌಢ್ಯ.. ಸಂಪ್ರದಾಯಗಳ...

ಸಮ್ಮಿಲನ

ಜೀವನವೊಂದು ಸುಖ-ದುಃಖಗಳ ಸುಂದರ ಸುದೀರ್ಘ ಯಾತ್ರೆ ಭೇದವ ಬೆರೆಸದೆ-ಮಿಂದು ಮುಂದೆ.. ಮುಂದೆ ಸಾಗಬೇಕು ದ್ವೇಷ-ಅಸೂಯೆ ಬದಿಗೊತ್ತುತಲಿ ಜಾತಿ-ಮತಗಳ ಭೇದವ ತುಳಿಯುತ ಒಂದೇ ತಾಯಿಯ ಉದರದಿ ಜನಿಸಿದ ಮನುಕುಲದ ಕುಡಿಗಳೆನ್ನುತಲಿ ಮಿಂದು ಮುಂದೆ-ಮುಂದೆ ಸಾಗಬೇಕು ನ್ಯಾಯ-ನೀತಿಯನು...

ಸಹೋದರಿ ಮೊರೆ

ರಕ್ಷಿಸಿ... ಉಳಿಸಿ, ವಾತ್ಸಲ್ಯದ ಓ... ನನ್ನ ಪ್ರೀತಿಯ ಸಹೋದರರೇ ನನ್ನಿಹ ಉಳಿವು ಅಳಿವಾಗುತಿದೆ ಶೋಷಣೆ ಎಲ್ಲೆಡೆ ನಡೆದಿದೆ ಕೀಚಕ, ದುಶ್ಯಾಸನರು ತುಂಬಿಹರು ಮಾತೆ-ಸಹೋದರಿಯ ಅರ್ಥ ಅರಿಯದ ಲೈಂಗಿಕ ಲಾಲಸೆಯಲಿರುವರು ಬಲಿಪಶುವಾಗಿಸಿ ಬಲಿಗೊಡುತಿಹರು ಮಾನ ಹರಾಜುಗೊಳಿಸುತಲಿ...