ನೀನು ಮರೆವುದೆ ನನ್ನ?

ರವಿ ಶಶಿಯ ಮತ್ತೆ ನೀನಿತ್ತ ಬೆಳಕಲಿ ಗುರುತಿ- ಸುವೆ, ಗುರುವೆ ! ಗುರು ಬುಧರ ಹಾಸಂಗಿಯಲ್ಲಿ ಲೆತ್ತ- ವಾಡುತಿರೆ ಹೊತ್ತು, ಚಿಕ್ಕೆಯ ಪಟ್ಟದಲ್ಲದರ ಲೆಕ್ಕವನು ಗುಣಿಸಿ ಎಣಿಸುವೆ, ಮಲೆಯ ಬನಬನವ ತರಿವ ಮೂಡಲಗಾಳಿ, ಹಸಿರು...

ಗುಮ್ಮ

ಗುಮ್ಮ ಬಂದನು ಸುಮ್ಮನಿರು ಕಂದ, ಅಬ್ಬಬ್ಬ, ಏನವನ ಕಣ್ಣು? ನಾಲಿಗೆಯೇನು ಕೆಂಪಗಿದೆ, ಕತ್ತಲಲಿ ಕೆಂಡ ಕಂಡಂತೆ ! ಮೆಲ್ಲಗೆ ಬರುವ, ಸದ್ದು ಸದ್ದೆಲೆ ಕಂದ, ಸುಮ್ಮನಿರು, ಅಳಬೇಡ ! ಕೇಳಿ ಇತ್ತಲೆ ಬರುವನೇನೊ ಗುಮ್ಮ;...

ಒಡಲು

ಒಡಲು-ಒಡೆಯನು ತೀರಿಕೊಳಲು ಹುಟ್ಟಿದ ಮನೆಗೆ ಬಂದ ಹೆಣ್ಣಿನ ಹಾಗೆ. ಅವಳಣ್ಣ ತಮ್ಮದಿರು ತಮ್ಮದೆನುವೊಲು ಅವಳ ಆಸ್ತಿಪಾಸ್ತಿಯ ಬಳಿಸಿ ಬಿಂಕದೋರುವರು; ಅವಳೋ ಇವರ ಒಗೆತನವ ಕಿಳ್ಳಿಕೇತನು ಗೊಂಬೆ ಕುಣಿಸುವೊಲು ಕುಣಿಸುವಳು. ಸರಸದುರವಣಿಗೆ ಮೆರವಣಿಗೆ. ಕಣ್ಣೀರು ತ-...

ಹರಕೆ

ಮಂದಗತಿ ಮಂದತರವಾಗಿಬಿಟ್ಟಿದೆ; ಹುಲ್ಲೆ- ಗಂಗಳೊಳು ಚಂಚಲತೆ ಕುಡಿಯೊಡೆಯಲಿದೆ; ಉಡುಗಿ ಮೈನಯದ ನೆಯ್ಗೆ ತೊಪ್ಪಲು; ಹರೆಯ ಚಿಗುರಡಗಿ ನೆತ್ತರದ ನೆರೆಗೆಂಪು ಹಳಸುತಿದೆ ಭರದಲ್ಲೆ. ಹಾರು ಹಕ್ಕಿಯ ಪುಚ್ಚವೆಣಿಸಲೆಳಸಿದ ಬೆಡಗಿ! ವಿಜಯ ವಿಠ್ಠಲನ ಗುಡಿ ಭಣಗುಡುವ ತೆರದಲ್ಲೆ...

ಪಾಶ

ಗಾಳಿ ಸುಳಿಯದ ಮನೆಯ ಹೊಗೆ ಹಾದಿಸಿಗದೆ ಒಳ- ಗೊಳಗೆ ಹಬ್ಬುತ, ಉಸಿರ ಕಟ್ಟುವೊಲು, ಇರುಳು ಮುಗಿ- ಲಲಿ ಅಭ್ರ ಕವಿಯುವವು ಚಿಕ್ಕೆಬೆಳಕನು; ಬೆಂದು ಬಳ ಲಿದ ಹೆಂಣುಮನ ಕಂದುತಿದೆ ಕಂದುತಿದೆ ನೊಂದ- ನುಡಿಯೊಂದರಲಿ; ಸರಸ...

ಇಜ್ಜೋಡು

ಒಂದಿದ್ದರೊಂದಿಲ್ಲ; ಇಂದಿಗೂ ಎರಡು ಹೊಂ- ದಿಲ್ಲ; ನಡೆದಿದೆ ಸೃಷ್ಟಿ; ಫಲವೀವ ಅಮೃತ ವೃ- ಷ್ಟಿಯ ಬಯಸಿ, ಕೊನರುತಿದೆ ಕಮರುತಿದೆ. ಎಲೆಯ ಪಸ- ರದಲಿ ಕಾಣದಿದೆ ಹೂ-ಹಣ್ಣು, ಪ್ರಥಮ ಪ್ರಾಯ- ದಲ್ಲಿ ನಾಚಿಗೆ ಮುಸುಗಿ ಸುಕುಮಾರ...

ಸುಖಸ್ಪರ್‍ಶ

ನೊಸಲು ನೊಸಲಿನಲಿರಿಸಿ ಸುಸಿಲಾಡುವವು ಹೂವು ಹೊಳೆ ನೀರ ಬಳಿಗೆ; ಪಡಿನೆಳಲನೆದೆಯೊಳಗಿರಿಸಿ ಮಧುರ ಸಲಿಲ ಸಲೀಲ ನಲಿದಾಡುವದು; ಚಿತ್ರ ರತಿಯ ನೋಡುತ ಚಿಕ್ಕೆ ಕಣ್ಚಿವುಟುವವು; ಮಂದ ಮಾರುತನು ಪಿಸುಗುಡುತಲಿಹನದರ ಸೌಸವದ ಸವಿಮಾತ; ಸಂಜೆ ಬಾಸಣಿಸಲಿದೆ ತಿಮಿರ...

ಸಂತತಿ

"ವರನೆ ಬಾ ಇಲ್ಲ; ಮುಗಿಲಿಗೆ ನೆಲವನಿತ್ತಂತೆ ನಿನಗೊಪ್ಪಿಸುವೆನಿವಳ. ಇವಳು ಸುಕ್ಷೇತ್ರ, ಕಾ- ದುದಲಿ ಅರ್‍ಥದಲಿ ಸಹಧರ್‍ಮಿಣಿಯು ಮುಕ್ತರೊಲು, ಚೆಲುವರನು, ಕಟ್ಟಾಳುಗಳನು, ಗಂಭೀರರನು ಪಡೆದು ಇವಳಲಿ ಬುನಾದಿಯ ಮನೆಯ ಕಟ್ಟುಮುಂ- ದಕೆ. ದೇವ ದೇವತಾ ಗಣಕೆ...

ಸಮಸ್ಯೆ

ತಾಯಿ ಹೇಳುತಲಿದ್ದಳೆನ್ನ ಬಾಲ್ಯದ ಕತೆಯ :- ಮಂಜಾವದಿಂದ ಮುಂಗಾಳು ಕವಿಯುವ ವರೆಗೆ ಓರಿಗೆಯ ಹಸುಳರೊಡನಾಡಿ, ಬಿಸಿಲಿನ ಬೇಗೆ ಬೆಳದಿಂಗಳೆನೆ ಕಳೆಯುತಿದ್ದೆ. ಹಸಿವೆಯ ವ್ಯಥೆಯ ನಾನು ಅರಿತಿರಲಿಲ್ಲ. ಆಟನೋಟಕೆ ಹೀಗೆ ಮೆಚ್ಚಿಯೂಟವ ಮರೆಯೆ, ಕಿರುಮನೆಯ ಕತ್ತಲೆಯ-...

ಕರುಳು

ತಾಮ್ರಪರ್‍ಣಿಯ ಒಡಲ ರಾಜಮೌಕ್ತಿಕದ ಭಂ- ಡಾರ ಮುದ್ರೆಯನೊಡೆಯೆ, ದಿನವು ನೀರನು ಧುಮುಕು- ವಂಥ ಕುಂಗನು ಪಡೆವುದೇನು? ಮೈಮುರಿ ದುಡಿಯೆ ಮರುದಿನವು ಅಣಿಗೊಳುವದಕೆ ಕೂಳತುತ್ತು; ಮನ ಮರೆಯೆ ಕುಡಿಯಲು ಗುಟುಕು. ಹೆತ್ತ ಹೊಟ್ಟೆಯನ್ನು, ಕೈ ಹಿಡಿದ...